ಮೈಸೂರು: ಆನಂದ್ ತೇಲ್ತುಂಬ್ಡೆ ಸೇರಿದಂತೆ ಇತರರ ಬಿಡುಗಡೆಗೆ ಒತ್ತಾಯಿಸಿ ಪ್ರಗತಿಪರರಿಂದ ಪ್ರತಿಭಟನೆ
ಮಾನವ ಹಕ್ಕುಗಳ ರಕ್ಷಕರನ್ನು ಸಂವಿಧಾನ ವಿರೋಧವಾಗಿ ಬಂಧಿಸಿರುವುದು ನಾಚಿಕೆಗೇಡು: ಎಸ್.ಆರ್.ಹಿರೇಮಠ್

ಮೈಸೂರು,ಎ.14: 'ಎರಡು ವರ್ಷಗಳ ಹಿಂದೆ ಅಂಬೇಡ್ಕರ್ ಜಯಂತಿ ದಿನದಂದು ಯಾವುದೇ ಕಾರಣಗಳಿಲ್ಲದೆ ಬಂಧನಕ್ಕೊಳಗಾಗಿರುವ ಪ್ರಗತಿಪರ ಚಿಂತಕ ಆನಂದ್ ತೇಲ್ತುಂಬ್ಡೆ, ವರಹರ ರಾವ್, ಸುಧಾ ಭಾರಧ್ವಾಜ್ ಮತ್ತು ನವಲಾಕ ಅವರನ್ನು ಕೂಡಲೇ ಬಿಡುಗೆಡೆ ಮಾಡಬೇಕು' ಎಂದು ಒತ್ತಾಯಿಸಿ ಪ್ರಗತಿಪರ ಚಿಂತಕರು, ಸಾಹಿತಿಗಳು ಪ್ರತಿಭಟನೆ ನಡೆಸಿದರು.
ಮೈಸೂರು ನಗರದ ನ್ಯಾಯಾಲಯದ ಎದುರಿನ ಗಾಂಧಿ ಪ್ರತಿಮೆ ಬಳಿ ಗುರುವಾರ ಪತ್ರಿಭಟನೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದೇ ವೇಳೆ ಮಾತನಾಡಿದ ಎಸ್.ಆರ್.ಹಿರೇಮಠ್, ಸ್ವಾತಂತ್ರ್ಯ ಹೋರಾಟ ನಂತರ ನಮ್ಮೆಲ್ಲರಿಗೆ ಇಡೀ ವಿಶ್ವದಲ್ಲೇ ಉತ್ಕೃಷ್ಟ ಸಂವಿಧಾನ ನೀಡಿದ ಅಂಬೇಡ್ಕರ್ ಅವರು ನಮಗೆ ಪ್ರಜಾಪ್ರಭುತ್ವದ ಹಕ್ಕನ್ನು ಕೊಟ್ಟಿದ್ದಾರೆ. ಆ ಹಕ್ಕನ್ನು ಉಲ್ಲಂಘಿಸಿ ಸಂವಿಧಾನ ಶಿಲ್ಪಿ ಹುಟ್ಟು ಹಬ್ಬದ ದಿನದಂದೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಕೇಂದ್ರ ಸರ್ಕಾರ ಅಂಬೇಡ್ಕರ್ ಮೊಮ್ಮಗಳ ಗಂಡನಾದ ದೇಶದ ಅತಿ ವಿರಳ ಸಾರ್ವಜನಿಕ ಬುದ್ಧಿಜೀವಿ ಆನಂದ್ ತೇಲ್ತುಂಬ್ಡೆ ಮತ್ತು ಇಂತಹ ಹಲವಾರು ಮಾನವ ಹಕ್ಕುಗಳ ರಕ್ಷಕರನ್ನು ಸಂವಿಧಾನ ವಿರೋಧವಾಗಿ ಬಂಧಿಸಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡು ವರ್ಷ ಕಳೆದರೂ ಅವರ ಮೇಲೆ ಯಾವುದೇ ನಿರ್ದಿಷ್ಟ ಆಪಾದನೆಗಳನ್ನು ಮಾಡಿಲ್ಲ. ಪ್ರಜಾಪ್ರಭುತ್ವ ಸರ್ಕಾರ ಎಂದು ಹೇಳಿಕೊಳ್ಳುತ್ತಿರುವುದು ನಾಚಿಕೆ ಗೇಡು. ಸಂವಿಧಾನದ ಶಿಲ್ಪಿ ಹುಟುಹಬ್ಬಕ್ಕೆ ಗೌರವ ಕೊಡುವುದು ಮಾತಿನನಲ್ಲಲ್ಲ ಕೃತಿಯಲ್ಲಿ, ಆ ಹಕ್ಕುಗಳನ್ನು ಅನುಷ್ಠಾನಕ್ಕೆ ತರುವುದು ಸರ್ಕಾರದ ಜವಾಬ್ದಾರಿ ಎಂದು ಹೇಳಿದರು.
ಆನಂದ್ ತೇಲ್ತುಂಬ್ಡೆ ಮತ್ತು ಇತರರ ಮೇಲೆ ಯಾವುದೆ ದೇಶದ ದ್ರೋಹದ ಪ್ರಕರಣಗಳಿಲ್ಲದಿದ್ದದೂ ಉದ್ಧೇಶಪೂರ್ವಕವಾಗಿ ಅವರನ್ನು ಬಂಧಿಸಲಾಗಿದೆ. ಈಗಾಗಲೇ ಅಮೆರಿಕದ ವಾಷಿಂಗ್ ಟನ್ ಪೋಸ್ಟ್ ಪತ್ರಿಕೆ ಅವರ ಕಂಪ್ಯೂಟರ್ ಗಳನ್ನು ಹ್ಯಾಕ್ ಮಾಡಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಹೇಳಿದೆ. ಆದರೂ ನಮ್ಮ ನಾಚಿಕೆ ಗೇಡಿನ ಸರ್ಕಾರಕ್ಕೆ ಎರಡು ವರ್ಷ ಕಳೆದರೂ ಯಾವುದೇ ಚಾರ್ಜ್‍ಶೀಟ್ ಸಲ್ಲಿಸಲು ಆಗಿಲ್ಲ ಎಂದು ಕಿಡಿಕಾರಿದರು.
ಹಾರ ತುರಾಯಿಗಳಲ್ಲಿ ಮಾನಾಡುವುದು ಬೇಡ, ಸಂವಿಧಾನವನ್ನು ಚಾಚು ತಪ್ಪದೆ ವ್ಯವಸ್ಥಿತವಾಗಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದೇ ಆದರೆ. ಸಂವಿಧಾನದ ಮೂಲಭೂತ ಹಕ್ಕುಗಳನ್ನು ಚಲಾಯಿಸಿದ ನಮ್ಮ ಮಾನವ ಹಕ್ಕುಗಳ ಸಮರ್ಥಕರುಗಳುಗಳಾದ ಆನಂದ್ ತೇಲ್ತುಂಬ್ಡೆ, ವರಹರ ರಾವ್, ಸುಧಾ ಭಾರಧ್ವಾಜ್, ನವಲಾಕ ಮತ್ತು ವಿಲ್ಸನ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸ್ವರಾಜ್ ಇಂಡಿಯಾದ ಉಗ್ರನರಸಿಂಹೇಗೌಡ ಮಾತನಾಡಿ, ಆನಂದ್ ತೇಲ್ತುಂಬ್ಡೆ ದೇಶದ ಅತೀ ಬುದ್ಧಿಜೀವಿಗಳಲ್ಲಿ ವಿರಳ ವ್ಯಕ್ತಿ, ಇಂತಹ ವ್ಯಕ್ತಿಯನ್ನು ಅಂಬೇಡ್ಕರ್ ದಿನದಂದೇ ಬಂಧಿಸಿರುವುದು ಅತ್ಯಂತ ಖಂಡನೀಯ, ಇದೂವರೆಗೂ ಅವರ ಮೇಲಿನ ಆಪಾಧನೆಯನ್ನು ಸಾಭೀತು ಮಾಡಲು ಹಾಗಿಲ್ಲ, ಹಾಗಾಗಿ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ಸಮಾಜವಾದಿ ಪ.ಮಲ್ಲೇಶ್, ವಕೀಲ ಬಾಬುರಾಜ್, ಹಿರಿಯ ಪತ್ರಕರ್ತ ಜಿ.ಪಿ.ಬಸವರಾಜು, ಅಭಿರುಚಿ ಗಣೇಶ್, ಪ್ರೊ.ಶಬ್ಬೀರ್ ಮುಸ್ತಾಫ, ಕಾರ್ಮಿಕ ಸಂಘಟನೆಯ ರವಿ. ಸೀಮಾ, ಕರುಣಾಕರ್,
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರನ್ನೇ ಟೀಕಿಸಲು ಸಂವಿಧಾನದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಕೇಂದ್ರ ಸರ್ಕಾರ ತನ್ನ ವಿರುದ್ಧ ಟೀಕಿಸುವವರನ್ನು ದೇಶದ್ರೋಹಿಗಳು ಎಂಬಂತೆ ನೋಡಿ ಬಂಧನಕ್ಕೊಳಪಡಿಸುತ್ತಿದೆ. ಆ ಕಾರಣಕ್ಕಾಗಿಯೇ ಕಳೆದ ಎರುಡು ವರ್ಷ ಕಳೆದರೂ ಆನಂದ್ ತೇಲ್ತುಂಬ್ಡೆ, ವರಹರ ರಾವ್, ಸುಧಾ ಬಾರಧ್ವಾಜ್, ನವಲಾಕ, ವಿಲ್ಸನ್ ಬಿಡುಗಡೆಗೊಳಿಸಿಲ್ಲ. ಅವರ ಮೇಲೆ ಯಾವ ಆಪಾಧನೆಯನ್ನು ಸಾಭೀತು ಪಡಿಸದಿದ್ದರೆ ವಿನಾ ಕಾರಣ ಬಂಧಿಸಿರುವುದು ಸರಿಲ್ಲ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು.
-ಜಿ.ಪಿ.ಬಸವರಾಜು, ಹಿರಿಯ ಪತ್ರಕರ್ತ







