ತಪ್ಪು ಮಾಡದಿದ್ದರೂ ಈಶ್ವರಪ್ಪ ರಾಜೀನಾಮೆ ನೀಡಬೇಕಾಯಿತು: ಯಡಿಯೂರಪ್ಪ

ಶಿವಮೊಗ್ಗ, ಎ.15: ಯಾವುದೇ ತಪ್ಪು ಮಾಡದ ಕೆ.ಎಸ್.ಈಶ್ವರಪ್ಪ ಅನಿವಾರ್ಯವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ ವೇಳೆ, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಎರಡು ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಂಡು ಈಶ್ವರಪ್ಪ ನಿರಪರಾಧಿ ಎಂಬುದು ತಿಳಿಯಲಿದೆ. ಅವರು ಮತ್ತೆ ಸಚಿವ ಸಂಪುಟಕ್ಕೆ ಈಶ್ವರಪ್ಪ ಸೇರಲು ಯಾವುದೇ ಅಡ್ಡಿ ಇರುವುದಿಲ್ಲ ಎಂದರು.
ಅಪರಾಧ ಮಾಡದೇ ಇದ್ದರೂ ರಾಜೀನಾಮೆ ನೀಡಬೇಕಾಯಿತು. ಇದನ್ನು ಖಂಡಿತಾ ಈಶ್ವರಪ್ಪ ಎದುರಿಸಿ ಈ ಪ್ರಕರಣದಿಂದ ಹೊರಬಂದು ಮತ್ತೆ ಸಚಿವರಾಗಲಿದ್ದಾರೆ. ತನಿಖೆ ಮುಗಿದ ಬಳಿಕ ಈಶ್ವರಪ್ಪ ಅವರು ನಿರ್ದೋಷಿ ಎಂಬುದು ಸ್ಪಷ್ಟವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Next Story





