ಮಂಗಳೂರು: 'ನವಮಿ ವೆಜ್ ರೆಸ್ಟೋ' ಶುಭಾರಂಭ

ಮಂಗಳೂರು, ಮಾ.15; ಮಂಗಳೂರಿನ ಮಂಗಳಾದೇವಿ ಬಳಿ ನೂತನವಾಗಿ ಆರಂಭಿಸಲಾದ ಮಲ್ಟಿಕುಸೀನ್ ರೆಸ್ಟೋರೆಂಟ್ 'ನವಮಿ ವೆಜ್ ರೆಸ್ಟೋ' ಶುಕ್ರವಾರ ಶುಭಾರಂಭಗೊಂಡಿತು.
'ನವಮಿ ವೆಜ್ ರೆಸ್ಟೋ'ವನ್ನು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮುಂಬಯಿಯಲ್ಲಿ ಯಶಸ್ವಿ ಉದ್ಯಮಿ ಹಲವು ಉದ್ಯಮ ಸಂಸ್ಥೆಗಳನ್ನು ಸ್ಥಾಪಿಸಿರುವ ನಂದಕುಮಾರ್ ಕುಡ್ವ ಮಂಗಳೂರಿನಲ್ಲೂ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.
ಶ್ರೀ ರಾಮಕೃಷ್ಣ ಮಠದ ಶ್ರೀ ಏಕ ಗಮ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಶಾಸಕ ವೇದವ್ಯಾಸ ಕಾಮತ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರು, ಕೆಎಫ್ ಡಿಸಿ ಅಧ್ಯಕ್ಷ ನಿತಿನ್ ಕುಮಾರ್, ಬಿಜೆಪಿ ದ.ಕ. ಜಿಲ್ಲಾ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಪಳ್ಳಿ ರಮಾನಾಥ ಹೆಗ್ಡೆ, ನವಮಿ ವೆಜ್ ರೆಸ್ಟೋಮಾಲಕ ನಂದ ಕುಮಾರ್ ಕುಡ್ವ, ಉದ್ಯಮಿಗಳಾದ ಮುಹಮ್ಮದ್ ಮುಖ್ತಾರ್, ಮೆಲ್ವಿನ್ ಕೆ. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನವಮಿ ರೆಸ್ಟೋ ದ ಜನರಲ್ ಮ್ಯಾನೇಜರ್ ಗಣೇಶ್ ಪ್ರಸಾದ್ ಸ್ವಾಗತಿಸಿದರು. ಸಂಸ್ಥೆಯ ಪ್ರತಿನಿಧಿಗಳಾದ ನರೇಶ್ ಕುಡ್ವ, ರಾಧಿಕಾ ಕುಡ್ವ, ನಮಿತಾ ನಾಯಕ್, ಸತ್ಯಪ್ರಕಾಶ್ ನಾಯಕ್, ಅಶ್ವತ್ಥ್ ಎನ್. ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*ನವಮಿ ವೆಜ್ ರೆಸ್ಟೋ ವಿಶೇಷತೆಗಳು:
ನವಮಿ ವೆಜ್ ರೆಸ್ಟೋ ಗ್ರಾಹಕರಿಗೆ ಕುಳಿತುಕೊಳ್ಳಲು ಆರಾಮದಾಯಕ ಹವಾನಿಯಂತ್ರಿತ ಆಸನ ವ್ಯವಸ್ಥೆಯನ್ನು ಹೊಂದಿದೆ. ವಾಹನಗಳನ್ನು ನಿಲ್ಲಿಸಲು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ. ಗ್ರಾಹಕರು ತಮ್ಮ ಸ್ವಂತ ವಾಹನದಲ್ಲಿ ಕುಳಿತು ತಮ್ಮಿಷ್ಟದ ಸ್ವಾದಿಷ್ಟ ಖಾದ್ಯಗಳನ್ನು ಸವಿಯಲು ಡ್ರೈವ್-ಇನ್ ಸೇವೆಯನ್ನು ಶೀಘ್ರದಲ್ಲೇ ಪರಿಚಯಿಸ ಲಾಗುವುದು
* ಮನೆಯ ವಾತಾವರಣದ ಅನುಭವ ನೀಡುವ ಸುಮಾರು 150 ಆಸನಗಳ ಸಾಮರ್ಥ್ಯದ ಸ್ಥಳಾವಕಾಶ.
* ಸ್ವ ಸಹಾಯ ಪದ್ಧತಿಯೊಂದಿಗೆ ಮುಂಬೈ ಶೈಲಿಯ ಭಕ್ಷ್ಯಗಳನ್ನು ಆನಂದಿಸಲು ತ್ವರಿತ ಆಹಾರ ಸೇವೆಯ(ಫಾಸ್ಟ್ ಫುಡ್) ವಿಭಾಗ
* 40-60 ಆಸನ ಸಾಮರ್ಥ್ಯದ ಮಿನಿ ಪಾರ್ಟಿ ಹಾಲ್.
* ದಕ್ಷಿಣ ಭಾರತದ ರುಚಿಕರವಾದ ಥಾಲಿ
*ಉತ್ತರ ಭಾರತದ ಪರಿಣಿತ ಬಾಣಸಿಗರಿಂದ ದಿಲ್ಲಿ ಶೈಲಿಯ ಪಾಕ ಪದ್ಧತಿಯ ರುಚಿಯನ್ನು ಇಲ್ಲಿ ಸವಿಯಬಹುದು.
ಟ್ವಿಸ್ಟ್‌ನೊಂದಿಗೆ ದೇಸಿ ಇಂಡಿಯನ್ ಚೈನೀಸ್ ಫುಡ್, ಮುಂಬೈ ಶೈಲಿಯ ಕೋಲ್ಡ್ ಪಾನಿಪುರಿ, ಪಾವ್ ಬಾಜಿಯನ್ನು ಗ್ರಾಹಕರು ಆಸ್ವಾದಿಸಬಹುದು.
ನವಮಿ ಗ್ರೂಪ್
ಗುಣಮಟ್ಟ ಮತ್ತು ಸೇವೆಗೆ ಹೆಸರುವಾಸಿಯಾಗಿರುವ ನವಮಿ ಗ್ರೂಪ್ ಇಂದು ದೂರದ ಮುಂಬಯಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಗೆ ಆಗಮಿಸಿದೆ.
ನವಮಿ ಗ್ರೂಪ್ ಸಂಸ್ಥಾಪಕ ರಾಮರಾಯ ಕುಡ್ವ 1916ನೆ ಇಸವಿಯಲ್ಲಿ ಮೂಡುಬಿದಿರೆಯ ಬೆಳುವಾಯಿಯಿಂದ ಮುಂಬಯಿಗೆ ತೆರಳಿ ವಿವಿಧ ರೆಸ್ಟೋರೆಂಟ್ ಗಳಲ್ಲಿ ಸೇವೆ ಸಲ್ಲಿಸಿದರು. 1943ರಲ್ಲಿ ಮುಂಬಯಿ ದಾದರ್ ವೆಸ್ಟ್ ನಲ್ಲಿ ಶ್ರಿಕೃಷ್ಣ ಬಟಾಟ ವಡ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಮುಂದೆ ಈ ಸಂಸ್ಥೆ ಚಬಿಲ್ ದಾಸ್ ಗಲ್ಲಿ ಬಟಾಟ ವಡ ಎಂದು ಜನಪ್ರಿಯವಾಯಿತು. ಮುಂದೆ 1974ರಲ್ಲಿ ನಂದಕುಮಾರ್ ಕುಡ್ವ ಮುಂದಾಳತ್ವದಲ್ಲಿ ಸಂಸ್ಥೆ ವಿವಿಧ ರೀತಿಯ ಉದ್ಯಮಗಳಿಗೆ ವಿಸ್ತರಣೆಗೊಂಡಿತು. ಇದೀಗ ನರೇಶ್ ಕುಡ್ವ ಈ ಉದ್ದಿಮೆಯ ಪರಂಪರೆಯನ್ನು ಮೂರನೇ ತಲೆಮಾರಿಗೆ ಕೊಂಡೊಯ್ಯುವ ಮೂಲಕ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎಂದು ಸಂಸ್ಥೆಯ ಪ್ರತಿನಿಧಿ ತಿಳಿಸಿದ್ದಾರೆ.
ಸಹ ಉದ್ಯಮಗಳು:
* ಶ್ರಿ ಕೃಷ್ಣ ಬಟಾಟ ವಡ: 1943ರಲ್ಲಿ ಸ್ಥಾಪನೆ
* ನವಮಿ ಪ್ಲಾಜಾ ಲಾಡ್ಜಿಂಗ್ ಆ್ಯಂಡ್ ರೆಸ್ಟೋರೆಂಟ್: 1993ರಲ್ಲಿ ಸ್ಥಾಪನೆ
ನವಮಿ ಸೂಪರ್ ಮಾರ್ಕೆಟ್: 2012ರಲ್ಲಿ ಮೂಡುಬಿದಿರೆಯಲ್ಲಿ ಸ್ಥಾಪನೆ. ಇದು ವಿಸ್ತರಣೆಯಾಗಿ ಕಾರ್ಕಳ, ಕೈಕಂಬ, ದೇರೆಬೈಲ್, ಬಿ.ಸಿ.ರೋಡ್, ಬ್ರಹ್ಮಾವರದಲ್ಲಿ ಎರಡು ಸೇರಿದಂತೆ ಒಟ್ಟು 7 ಶಾಖೆಗಳನ್ನು ಹೊಂದಿದೆ.
*ನವಮಿ ಲೈಫ್ ಸ್ಟೈಲ್, ನವಮಿ ಪೆಟ್ರೋ ಪ್ರೊಡಕ್ಷನ್, ನವಮಿ ವೆಂಚರ್ಸ್, ನವಮಿ ಹಾಸ್ಪಿಟಾಲಿಟಿ. ಆಹಾರ ವಿಭಾಗದ ಸಗಟು ವಿತರಣಾ ಸಂಸ್ಥೆಗಳನ್ನು ಹೊಂದಿದೆ ಎಂದು ಸಂಸ್ಥೆಯ ಪ್ರತಿನಿಧಿ ತಿಳಿಸಿದ್ದಾರೆ.