ಉತ್ತರ ಪ್ರದೇಶ: ಪಾಕಿಸ್ತಾನಿ ಹಾಡುಗಳನ್ನು ಆಲಿಸಿದ್ದಕ್ಕಾಗಿ ಇಬ್ಬರು ಅಪ್ರಾಪ್ತ ಬಾಲಕರ ವಿರುದ್ಧ ಕ್ರಿಮಿನಲ್ ಕೇಸ್

ಬರೇಲಿ: ಪಾಕಿಸ್ತಾನಿ ಹಾಡುಗಳನ್ನು ಆಲಿಸಿದ್ದಕ್ಕಾಗಿ ಮುಸ್ಲಿಂ ಸಮುದಾಯದ ಇಬ್ಬರು ಅಪ್ರಾಪ್ತ ಬಾಲಕರ ವಿರುದ್ಧ ಉತ್ತರಪ್ರದೇಶದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
16 ಹಾಗೂ 17 ವರ್ಷ ವಯಸ್ಸಿನ ಸೋದರಸಂಬಂಧಿಗಳು ತೊಂದರೆಗೆ ಸಿಲುಕಿದ್ದು, ಸ್ಥಳೀಯ ನಿವಾಸಿಗಳ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಹದಿಹರೆಯದವರು ಬರೇಲಿ ಜಿಲ್ಲೆಯ ಸಿಂಘೈ ಮುರ್ವಾನ್‌ನಲ್ಲಿ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಇದು ಭೂತಾ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ
ನೆರೆಯ ದೇಶವನ್ನು ಹೊಗಳುವ ಹಾಡುಗಳು ದೂರುದಾರರಿಗೆ ಇಷ್ಟವಾಗಲಿಲ್ಲ. ಅವರು ಇಬ್ಬರ ಬಂಧನವನ್ನು ಕೋರಿ ಪೊಲೀಸರನ್ನು ಸಂಪರ್ಕಿಸಿದ್ದರು ಎಂದು ಕೆಲವು ಗ್ರಾಮಸ್ಥರು ತಿಳಿಸಿದ್ದಾರೆ.
ಬುಧವಾರ ಸಂಜೆ 5 ಗಂಟೆಗೆ ಇಬ್ಬರು ಅಪ್ರಾಪ್ತರನ್ನು ಬಂಧಿಸಲಾಗಿದ್ದು, ಪೊಲೀಸ್ ಠಾಣೆಯಲ್ಲಿ ಇಡೀ ರಾತ್ರಿಯಲ್ಲಿ ಇರಿಸಲಾಗಿತ್ತು ಎಂದು ಅಪ್ರಾಪ್ತ ಬಾಲಕರ ಕುಟುಂಬ ಸದಸ್ಯರು ಹೇಳಿದ್ದಾರೆ.
Next Story





