ಎ.16ರಿಂದ ಸಾಂಪ್ರದಾಯಿಕ ಕುಂಬಾರಿಕೆ ಕೆಲಸಗಳ ವಿಶಿಷ್ಟ ಪ್ರದರ್ಶನ
ಮಂಗಳೂರು : ಇಂಟಾಕ್‌ನ ಮಂಗಳೂರು ಘಟಕವು ಆರ್ಟ್ ಕೆನರಾ ಟ್ರಸ್ಟ್ ಸಹಯೋಗದಲ್ಲಿ ʼಸ್ಪಿನ್ನರ್ಸ್ ಆಫ್ ಕ್ಲೇ ಆನ್ ವ್ಹೀಲ್’, ಸಾಂಪ್ರದಾಯಿಕ ಕುಂಬಾರಿಕೆ ಕೆಲಸಗಳ ವಿಶಿಷ್ಟ ಪ್ರದರ್ಶನ ಮತ್ತು ಮಾರಾಟ ಶಿಬಿರ ಹಾಗೂ ದ.ಕ.ಜಿಲ್ಲೆಯ ಸಾಂಪ್ರದಾಯಿಕ ಕುಂಬಾರರ ಸ್ಥಿತಿಗತಿ ಕುರಿತು ಮಾಹಿತಿ ಕಾರ್ಯಕ್ರಮವು ಎ.೧೬ರಿಂದ ೧೮ರವರೆಗೆ ಪೂ.೧೧ರಿಂದ ೭ರವರೆಗೆ ನಗರದ ಬಲ್ಲಾಲ್‌ಬಾಗ್‌ನ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯಲಿದೆ.
ಕಾರ್ಯಕ್ರಮವು ಎ.೧೬ರಂದು ಪೂ.೧೧ಕ್ಕೆ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕಲದಾಸ್ ನಾಯಕ್ ಮತ್ತು ಕುಂಬಾರರ ಕಾಟೇಜ್ ಕೋ-ಆಪರೇಟಿವ್ ಸೊಸೈಟಿ ಲಿ. ಪುತ್ತೂರು ಇದರ ಮುಖ್ಯ ಕಾರ್ಯನಿರ್ವಾಹಕ ಎಸ್. ಜನಾರ್ದನ ಮೂಲ್ಯ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story