ಜಿಂಬಾಬ್ವೆ: ಕಮರಿಗೆ ಉರುಳಿದ ಬಸ್ಸು,35 ಮಂದಿ ಮೃತ್ಯು; 71 ಮಂದಿಗೆ ಗಾಯ
ಹರಾರೆ, ಎ.15: ಜಿಂಬಾಬ್ವೆಯ ಆಗ್ನೇಯ ಪ್ರಾಂತದ ಚಿಪಿಂಗೆ ನಗರದಲ್ಲಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಮರಿಗೆ ಉರುಳಿಬಿದ್ದ ಘಟನೆಯಲ್ಲಿ ಕನಿಷ್ಟ 35 ಮಂದಿ ಮೃತಪಟ್ಟು 71 ಮಂದಿ ಗಾಯಗೊಂಡಿರುವುದಾಗಿ ಪೊಲಿೀಸರು ಹೇಳಿದ್ದಾರೆ.
ಈಸ್ಟರ್ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಚರ್ಚ್ ಗೆ ತೆರಳುತ್ತಿದ್ದ ಪ್ರಯಾಣಿಕರು ತುಂಬಿದ್ದ ಬಸ್ಸು ಅಪಘಾತಕ್ಕೀಡಾಗಿದೆ. ಇದುವರೆಗೆ 35 ಮೃತದೇಹ ಪತ್ತೆಯಾಗಿದ್ದು 71 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
Next Story





