Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕಪ್ಪು ಸಮುದ್ರದಲ್ಲಿ ಮುಳುಗಿದ ರಶ್ಯ...

ಕಪ್ಪು ಸಮುದ್ರದಲ್ಲಿ ಮುಳುಗಿದ ರಶ್ಯ ಯುದ್ಧನೌಕೆ

ಯುದ್ಧನೌಕೆಯ ಮುಳುಗಡೆಯೊಂದಿಗೆ 3ನೇ ವಿಶ್ವಯುದ್ಧ ಆರಂಭ: ರಶ್ಯ ಟಿವಿ ಘೋಷಣೆ

ವಾರ್ತಾಭಾರತಿವಾರ್ತಾಭಾರತಿ15 April 2022 11:57 PM IST
share
ಕಪ್ಪು ಸಮುದ್ರದಲ್ಲಿ ಮುಳುಗಿದ ರಶ್ಯ ಯುದ್ಧನೌಕೆ

ಕೀವ್, ಎ.15: ರಶ್ಯದ ಪ್ರಮುಖ ಯುದ್ಧನೌಕೆಯೊಂದು ಕಪ್ಪು ಸಮುದ್ರದಲ್ಲಿ ಗುರುವಾರ ಮುಳುಗಿದೆ. ತನ್ನ ನೆಪ್ಚೂನ್ ಕ್ಷಿಪಣಿ ಅಪ್ಪಳಿಸಿದ್ದರಿಂದ ಯುದ್ಧನೌಕೆ ಮುಳುಗಿದೆ ಎಂದು ಉಕ್ರೇನ್ ಹೇಳಿದೆ, ಆದರೆ ನೌಕೆಯಲ್ಲಿದ್ದ ಶಸ್ತ್ರಾಸ್ತ್ರ ಸ್ಫೋಟಗೊಂಡು ನೌಕೆ ಹಾನಿಗೊಂಡು ಮುಳುಗಿದೆ ಎಂದು ರಶ್ಯ ಪ್ರತಿಪಾದಿಸಿದೆ. ಮೋಸ್ಕ್ವ ಫ್ಲ್ಯಾಗ್‌ಶಿಪ್ ಯುದ್ಧನೌಕೆ‌ (ನೌಕಾಪಡೆಯ ಒಂದು ತುಕಡಿ ಸಂಚರಿಸುವ ನೌಕೆ) ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಯುದ್ಧನೌಕೆ ಮುಳುಗಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನೌಕೆಯಲ್ಲಿದ್ದ ಶಸ್ತ್ರಾಸ್ತ್ರ ಸ್ಫೋಟಿಸಿದ್ದರಿಂದ ನೌಕೆಗೆ ಹಾನಿಯಾಗಿದೆ. 

ಅದನ್ನು ಈಗ ದಡಕ್ಕೆ ಎಳೆದು ತಂದು ಲಂಗರು ಹಾಕಲಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ. ರಶ್ಯ ಸೇನೆಯ ಮುತ್ತಿಗೆಗೆ ಒಳಗಾಗಿರುವ ಉಕ್ರೇನ್ನ ಆಯಕಟ್ಟಿನ ಬಂದರು ನಗರ ಮರಿಯುಪೋಲ್ನಲ್ಲಿ ಈ ನೌಕೆಯನ್ನು ನಿಯೋಜಿಸಲಾಗಿತ್ತು. ಈ ಮಧ್ಯೆ, ಗಡಿಯುದ್ದಕ್ಕೂ ಅಲ್ಲಲ್ಲಿ ಆಕ್ರಮಣದ ಪ್ರಕರಣ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೀವ್ ವಿರುದ್ಧದ ಕ್ಷಿಪಣಿ ದಾಳಿಯನ್ನು ಹೆಚ್ಚಿಸಲಾಗುವುದು ಎಂದು ರಶ್ಯ ಎಚ್ಚರಿಸಿದೆ. 

ರಶ್ಯದ ಭೂಪ್ರದೇಶದಲ್ಲಿ ಉಕ್ರೇನ್ ರಾಷ್ಟ್ರೀಯತಾವಾದಿ ಆಡಳಿತ ನಡೆಸುವ ಯಾವುದೇ ವಿಧ್ವಂಸಕ ಕೃತ್ಯ ಅಥವಾ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಕೀವ್ ಅನ್ನು ಗುರಿಯಾಗಿಸಿ ನಡೆಸುವ ಆಕ್ರಮಣದ ಪ್ರಮಾಣ ಮತ್ತು ಸಂಖ್ಯೆ ಹೆಚ್ಚಾಗಲಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ. ಅಲ್ಲದೆ ಶುಕ್ರವಾರ ದೀರ್ಘದೂರ ವ್ಯಾಪ್ತಿಯ ಕ್ಷಿಪಣಿ ಪ್ರಯೋಗಿಸಿ, ಉಕ್ರೇನ್ ರಾಜಧಾನಿಯ ಬಳಿಯಿರುವ ಮಿಲಿಟರಿ ಕಾರ್ಖಾನೆಯ ಮೇಲೆ ದಾಳಿ ನಡೆಸಿ ಅದನ್ನು ನಾಶಗೊಳಿಸಲಾಗಿದೆ ಎಂದು ರಶ್ಯ ಹೇಳಿದೆ. ಈ ಕಾರ್ಖಾನೆಯಲ್ಲಿ ನೆಪ್ಚೂನ್ ಕ್ಷಿಪಣಿ ಉತ್ಪಾದಿಸಲಾಗುತ್ತಿದ್ದು ಈ ಕ್ಷಿಪಣಿ ಬಳಸಿ ರಶ್ಯದ ಯುದ್ಧನೌಕೆಯನ್ನು ಮುಳುಗಿಸಿರುವುದಾಗಿ ಉಕ್ರೇನ್ ಹೇಳಿತ್ತು.

ಯುದ್ಧನೌಕೆಯ ಮುಳುಗಡೆಯೊಂದಿಗೆ 3ನೇ ವಿಶ್ವಯುದ್ಧ ಆರಂಭ: ರಶ್ಯ ಟಿವಿ ಘೋಷಣೆ

ಕಪ್ಪು ಸಮುದ್ರದಲ್ಲಿ ರಶ್ಯದ ಮೋಸ್ಕ್ವ ಯುದ್ಧನೌಕೆ ಮುಳುಗಡೆಯೊಂದಿಗೆ 3ನೇ ವಿಶ್ವಯುದ್ಧ ಆರಂಭವಾಗಿದೆ ಎಂದು ರಶ್ಯದ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಘೋಷಿಸಿದೆ.

ನೌಕೆಯಲ್ಲಿದ್ದ ಶಸ್ತ್ರಾಸ್ತ್ರ ಸ್ಫೋಟಗೊಂಡು ನೌಕೆ ಮುಳುಗಿದೆ ಎಂದು ರಶ್ಯ ಹೇಳಿದ್ದರೆ, ತನ್ನ ಕ್ಷಿಪಣಿ ಅಪ್ಪಳಿಸಿ ನೌಕೆ ಮುಳುಗಿದೆ ಎಂದು ಉಕ್ರೇನ್ ಘೋಷಿಸಿದೆ. ಯುದ್ಧನೌಕೆ ಮುಳುಗಿರುವ ವರದಿ ಬಿತ್ತರಿಸಿದ ರಶ್ಯ ಸರಕಾರದ ಮುಖವಾಣಿ ‘ರಶ್ಯ 1’ ಟಿವಿ ವಾಹಿನಿಯ ಸುದ್ಧಿ ನಿರೂಪಕಿ ಓಲ್ಗಾ ಸ್ಕಬೆಯೆವ, ಈಗ ಉಲ್ಬಣಗೊಂಡಿರುವ ಪರಿಸ್ಥಿತಿಯನ್ನು ಖಂಡಿತಾ 3ನೇ ವಿಶ್ವಯುದ್ಧ ಎಂದು ಕರೆಯಲು ಅಡ್ಡಿಯಿಲ್ಲ ಎಂದರು. ಈಗ ನಾವು ಖಂಡಿತವಾಗಿಯೂ ನೇಟೊದೊಂದಿಗೆ ಪರೋಕ್ಷವಾಗಿ ಯುದ್ಧದಲ್ಲಿ ತೊಡಗಿದ್ದೇವೆ. ಅದನ್ನು ಅರಿತುಕೊಳ್ಳಬೇಕು ಎಂದರು. ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಯೊಬ್ಬರು, ಉಕ್ರೇನ್ನಲ್ಲಿನ ಯುದ್ಧದ ಸಂದರ್ಭ ಮೋಸ್ಕ್ವ ಯುದ್ಧನೌಕೆಯ ಮುಳುಗಡೆ ರಶ್ಯದ ಭೂಪ್ರದೇಶದ ಮೇಲಿನ ಆಕ್ರಮಣವಾಗಿದೆ ಎಂದರು. ಆದರೆ, ಯುದ್ಧ ಎಂಬ ಪದ ಬಳಸಬಾರದು, ಉಕ್ರೇನ್ನಲ್ಲಿ ರಶ್ಯ ವಿಶೇಷ ಸೇನಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸುದ್ಧಿ ನಿರೂಪಕಿ ಸ್ಪಷ್ಟಪಡಿಸಿದರು.

ಪಾಶ್ಚಿಮಾತ್ಯ ದೇಶಗಳು ರಶ್ಯ ಮೇಲಿನ ಆಕ್ರಮಣಕ್ಕೆ ಉಕ್ರೇನ್ ಅನ್ನು ಮಾಧ್ಯಮವಾಗಿ ಬಳಸಿಕೊಂಡಿದ್ದು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪೂರೈಸಿ ದಾಳಿಗೆ ಪ್ರಚೋದಿಸುತ್ತಿದೆ ಎಂದು ರಶ್ಯದ ಸರಕಾರಿ ಸ್ವಾಮ್ಯದ ಮತ್ತೊಂದು ಟಿವಿ ವಾಹಿನಿ ‘ಚಾನೆಲ್ 1’ರ ನಿರೂಪಕಿ ಒಲೆಸ್ಯಾ ಲೊಸೆವಾ ಹೇಳಿದ್ದಾರೆ. ಹವಾಮಾನ ವೈಪರೀತ್ಯದಿಂದ ಸಮುದ್ರದಲ್ಲಿ ಹಾನಿಗೀಡಾದ ಮೋಸ್ಕ್ವ ನೌಕೆಯನ್ನು ದಡಕ್ಕೆ ಎಳೆದು ತಂದು ಲಂಗರು ಹಾಕಲಾಗಿದೆ ಎಂದು ರಶ್ಯದ ಮಾಧ್ಯಮಗಳು ವರದಿ ಮಾಡಿವೆ.

ರಶ್ಯದ ಯುದ್ಧನೌಕೆ ಮುಳುಗಿದ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಅಭಿಪ್ರಾಯ ವ್ಯಕ್ತವಾಗಿದೆ. ‘ಅವರು ಮಲಗಿರುವ ಕರಡಿಯನ್ನು ಚುಚ್ಚಿ ಎಬ್ಬಿಸುತ್ತಿದ್ದಾರೆ. ಅಂದರೆ ನೇಟೊ ಕರಡಿಯನ್ನು’ ಎಂದು ಓರ್ವ ಟ್ವೀಟ್ ಮಾಡಿದ್ದಾನೆ. ‘ಈ ಯುದ್ಧಕ್ಕೆ ನೇಟೊ ಪ್ರವೇಶಿಸುವ ಮುನ್ನವೇ ಅವರು(ರಶ್ಯ) 500 ಟ್ಯಾಂಕ್, 2,000 ಸೇನಾ ವಾಹನ, 82 ಯುದ್ಧವಿಮಾನ, 18,000ಕ್ಕೂ ಅಧಿಕ ಯೋಧರನ್ನು ಕಳೆದುಕೊಂಡಿದ್ದಾರೆ. ನೇಟೊ ವಿರುದ್ಧದ ಈ ಯುದ್ಧ ರಶ್ಯಕ್ಕೆ ದುಬಾರಿಯಾಗಿ ಪರಿಣಮಿಸಿದೆ ಎಂದು ಹೇಳಿದರೆ ತಪ್ಪಾಗದು’ ಎಂದು ಮತ್ತೊಬ್ಬ ವ್ಯಕ್ತಿ ಟ್ವೀಟ್ ಮಾಡಿದ್ದಾನೆ.

ನೇಟೊ ಸೇರಿದರೆ ಪರಿಣಾಮ ನೆಟ್ಟಗಿರದು ಸ್ವೀಡನ್, ಫಿನ್ಲ್ಯಾಂಡ್ ಗೆ ರಶ್ಯ ಎಚ್ಚರಿಕೆ 

ಅಮೆರಿಕ ನೇತೃತ್ವದ ನೇಟೊ ಒಕ್ಕೂಟಕ್ಕೆ ಸೇರ್ಪಡೆಗೊಂಡರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸ್ವೀಡನ್ ಮತ್ತು ಫಿನ್ಲ್ಯಾಂಡ್ಗೆ ರಶ್ಯ ಶುಕ್ರವಾರ ಎಚ್ಚರಿಕೆ ಸಂದೇಶ ರವಾನಿಸಿದೆ.

ಸ್ವೀಡನ್ ಮತ್ತು ಫಿನ್ಲ್ಯಾಂಡ್ ದೀರ್ಘಾವಧಿಯಿಂದ ಅಲಿಪ್ತ ದೇಶಗಳ ಗುಂಪಿನಲ್ಲಿದ್ದವು. ಆದರೆ ಉಕ್ರೇನ್ ಮೇಲಿನ ರಶ್ಯ ಆಕ್ರಮಣದ ಬಳಿಕ, ಅಲಿಪ್ತ ನಿಲುವು ತ್ಯಜಿಸಿ ನೇಟೊ ಒಕ್ಕೂಟಕ್ಕೆ ಸೇರ್ಪಡೆಯಾಗಬೇಕು ಎಂದು ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ಮೂಡಿದೆ. ನೇಟೊ ಸೇರ್ಪಡೆ ಬಗ್ಗೆ ಶೀಘ್ರವೇ ಅಂತಿಮ ನಿರ್ಧಾರಕ್ಕೆ ಬರುವುದಾಗಿ ಈ ಎರಡೂ ದೇಶಗಳು ಈ ವಾರ ಆರಂಭದಲ್ಲಿ ಹೇಳಿಕೆ ನೀಡಿದ್ದವು.

 ‘ಇದೀಗ ಆಯ್ಕೆಯು ಸ್ವೀಡನ್ ಮತ್ತು ಫಿನ್ಲ್ಯಾಂಡ್ ಆಡಳಿತದ ಮುಂದೆ ಇದೆ. ಆದರೆ ಅಂತಹ ನಿರ್ಧಾರದಿಂದ ನಮ್ಮ ದ್ವಿಪಕ್ಷೀಯ ಸಂಬಂಧ ಮತ್ತು ಯುರೋಪ್ನ ಭದ್ರತೆಯ ಮೇಲೆ ಆಗುವ ಪರಿಣಾಮವನ್ನು ಅವರು ಅರಿತುಕೊಳ್ಳಬೇಕು. ನೇಟೊ ಸದಸ್ಯತ್ವ ಪಡೆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಟೆ ಹೆಚ್ಚುತ್ತದೆ ಎಂಬ ಯೋಚನೆ ಸರಿಯಲ್ಲ’ ಎಂದು ರಶ್ಯದ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವ ಹೇಳಿದ್ದಾರೆ. ಈ ಎರಡು ದೇಶಗಳ ಅಲಿಪ್ತ ಧೋರಣೆಯಿಂದ ವಿಶ್ವಾಸಾರ್ಹ ಮಟ್ಟದಲ್ಲಿ ಭದ್ರತೆ ಹೆಚ್ಚಿದೆ. ಆದರೆ ಒಂದು ಮಿಲಿಟರಿ ಒಕ್ಕೂಟದ ಸದಸ್ಯನಾದರೆ ಅದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಟೆ ಹೆಚ್ಚುವುದಿಲ್ಲ ಮತ್ತು ಅವರು ಸ್ವಯಂ ನೇಟೊದ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದವರು ಹೇಳಿದ್ದಾರೆ.

ರಶ್ಯ ಬೆಂಬಲಿಸಿದರೆ ತೀವ್ರ ಪರಿಣಾಮ: ಚೀನಾಕ್ಕೆ ಅಮೆರಿಕ ಸೆನೆಟರ್ ಎಚ್ಚರಿಕೆ 

ಉಕ್ರೇನ್ ಮೇಲಿನ ಆಕ್ರಮಣದಲ್ಲಿ ರಶ್ಯವನ್ನು ಬೆಂಬಲಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಹಿರಿಯ ಸೆನೆಟರ್ ಲಿಂಡ್ಸೆ ಗ್ರಹಾಮ್ ಚೀನಾಕ್ಕೆ ಎಚ್ಚರಿಕೆ ನೀಡಿದಾ್ದರೆ.

 ಶುಕ್ರವಾರ ತೈವಾನ್ಗೆ ಭೇಟಿ ನೀಡಿದ ಅಮೆರಿಕದ ಸಂಸದರ ನಿಯೋಗದ ಅಧ್ಯಕ್ಷತೆ ವಹಿಸಿದ್ದ ಲಿಂಡ್ಸೆ ಗ್ರಹಾಮ್, ಅಮೆರಿಕ ಯಾವುದೇ ಸಂದರ್ಭದಲ್ಲೂ ತೈವಾನ್ನ ಕೈಬಿಡುವುದಿಲ್ಲ ಎಂದು ಘೋಷಿಸಿದರು. ತೈಪೆಯ ಅಧ್ಯಕ್ಷೆ ತ್ಸಾಯಿಂಗ್ ವೆನ್ರನ್ನು ಭೇಟಿಮಾಡಿದ ಅಮೆರಿಕದ ನಿಯೋಗ, ಅಮೆರಿಕ ಎಂದಿಗೂ ತೈಪೆಯ ಜತೆಗಿರುತ್ತದೆ ಎಂದು ವಾಗ್ದಾನ ಮಾಡಿತು. ತೈಪೆಯನ್ನು ಕೈಬಿಡುವುದು ಎಂದರೆ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಕೈಬಿಟ್ಟಂತೆ. ಇದರಿಂದ ಮಾನವೀಯತೆಯಲ್ಲಿ ಕೆಟ್ಟ ದಾಖಲೆ ಹೊಂದಿದವರನ್ನು ಪುರಸ್ಕರಿಸಿದಂತಾಗುತ್ತದೆ. ವಿಶ್ವದಾದ್ಯಂತ ಚೀನಾ ನಡೆಸುತ್ತಿರುವ ಕೃತ್ಯಗಳಿಗೆ ಅವರು ತೀವ್ರ ಪರಿಣಾಮ ಎದುರಿಸುವಂತೆ ನಾವು ಮಾಡುತ್ತೇವೆ, ಉಕ್ರೇನ್ ಮೇಲಿನ ಆಕ್ರಮಣದಲ್ಲಿ ಪುಟಿನ್ರನ್ನು ಬೆಂಬಲಿಸಿದ್ದಕ್ಕೆ ಚೀನಾ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಲಿಂಡ್ಸೆ ಗ್ರಹಾಮ್ ಹೇಳಿದರು.

 ತೈಪೆಗೆ ಅಮೆರಿಕದ ಸೆನೆಟರ್ ನಿಯೋಗದ ಭೇಟಿಗೆ ತೀವ್ರ ಆಕ್ಷೇಪ ಎತ್ತಿರುವ ಚೀನಾ, ಇದಕ್ಕೆ ಪ್ರತಿಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯುಳ್ಳ ತೈವಾನ್ ತನ್ನ ಭೂಪ್ರದೇಶದ ಭಾಗ ಎಂದು ಪ್ರತಿಪಾದಿಸುತ್ತಿರುವ ಚೀನಾ, ಅಗತ್ಯಬಿದ್ದರೆ ಬಲಪ್ರಯೋಗಿಸಿಯಾದರೂ ಒಂದು ದಿನ ಅದನ್ನು ವಶಪಡಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X