Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇಟ್ಸ್ ಓಕೆ ಟು ನಾಟ್ ಬಿ ಓಕೆ : ಚಿಟ್ಟೆಗಳ...

ಇಟ್ಸ್ ಓಕೆ ಟು ನಾಟ್ ಬಿ ಓಕೆ : ಚಿಟ್ಟೆಗಳ ರೆಕ್ಕೆಗಳಿಂದ ಉದುರಿದ ಬಣ್ಣಗಳು

ಮುಸಾಫಿರ್ಮುಸಾಫಿರ್16 April 2022 10:41 AM IST
share
ಇಟ್ಸ್ ಓಕೆ ಟು ನಾಟ್ ಬಿ ಓಕೆ : ಚಿಟ್ಟೆಗಳ ರೆಕ್ಕೆಗಳಿಂದ ಉದುರಿದ ಬಣ್ಣಗಳು

'ಇಟ್ಸ್ ಓಕೆ ಟು ನಾಟ್ ಬಿ ಓಕೆ' 2020ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೊಂಡ ಕೊರಿಯನ್ ಸರಣಿ. ಹಲವು ಕಾರಣಗಳಿಗಾಗಿ ಇದೊಂದು ವಿಭಿನ್ನ ಸರಣಿಯಾಗಿ ಗುರುತಿಸಿಕೊಂಡಿದೆ. ಪಾರ್ಕ್ ಶಿನ್ ವೂ ನಿರ್ದೇಶಿಸಿದ ಈ ಸರಣಿಯನ್ನು ನ್ಯೂಯಾರ್ಕ್ ಟೈಮ್ಸ್ 'ದಿ ಬೆಸ್ಟ್ ಇಂಟರ್‌ನ್ಯಾಶನಲ್ ಶೋ 2020' ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಹಲವು ಅಂತರ್‌ರಾಷ್ಟ್ರೀಯ ಪ್ರಶಸ್ತಿಗಳನ್ನು ಈ ಸರಣಿ ತನ್ನದಾಗಿಸಿಕೊಂಡಿದೆ. ಈ ಸರಣಿಯು ಒಟ್ಟು ಸುದೀರ್ಘ 16 ಕಂತುಗಳನ್ನು ಹೊಂದಿದೆ. ಇಬ್ಬರು ಅನಾಥ ಸೋದರರು. ಅಣ್ಣನಿಗೆ ಆಟಿಸಂ ಕಾಯಿಲೆ. ಆತನ ಸಂಪೂರ್ಣ ಹೊಣೆಗಾರಿಕೆ ಕಿರಿಯ ಸೋದರನದು. ಕಥಾ ನಾಯಕಿ ಮೂನ್ ಸ್ಯಾಂಗ್‌ಚೆ ಈ ಸರಣಿಯ ಕೇಂದ್ರ ಪಾತ್ರ. ಈಕೆ ಮಕ್ಕಳ ಕತೆಗಳನ್ನು ಬರೆಯುವ ಸೆಲೆಬ್ರಿಟಿ ಲೇಖಕಿ. ಈಕೆಯ ಮೇಲೆ ಒಂದು ಪ್ರಮುಖ ಆರೋಪವೂ ಇದೆ. ಋಣಾತ್ಮಕವಾದ ಪಾತ್ರಗಳನ್ನೇ ಕೇಂದ್ರೀಕರಿಸಿ ಮಕ್ಕಳ ಕತೆಗಳನ್ನು ಹೆಣೆಯುವವಳು. ಈಕೆಯ ಕತೆಗಳಲ್ಲಿ ಮಾಟಗಾತಿಯರೆಲ್ಲ ಸುಂದರಿಯಾಗಿರುತ್ತಾರೆ. ವಿಲನ್‌ಗಳೇ ನಾಯಕರಾಗಿರುತ್ತಾರೆ. ಲೇಖಕಿ ಅಂತರ್ಮುಖಿ. ಒಂದು ರೀತಿಯಲ್ಲಿ ಆಕೆಯದು ಅಂತರಂಗದಲ್ಲಿ ಅಪಾರ ನೋವುಗಳನ್ನು ಬಚ್ಚಿಟ್ಟುಕೊಂಡು ನಿಷ್ಠುರ ಮುಖಭಾವದಿಂದ ಬದುಕುವ ಸೈಕೋ ಪಾತ್ರ. ಮಾಧ್ಯಮಗಳಲ್ಲಿ ತೀವ್ರ ಟೀಕೆಗೊಳಗಾದವಳು. ಕತ್ತಲೆಂದರೆ ಈಕೆಗೆ ಭಯ. ಆಕೆಯ ಬಾಲ್ಯ ವಿಲಕ್ಷಣಗಳಿಂದ ಕೂಡಿದ್ದವು.

ಆ ಬಾಲ್ಯದ ಗಾಯಗಳು ಸರಣಿಯುದ್ದಕ್ಕೂ ಆಕೆಯನ್ನು ಹಿಂಬಾಲಿಸುತ್ತಿರುತ್ತವೆ.ಅನಾಥ ಸೋದರರಲ್ಲಿ ಕಿರಿಯವನ ಹೆಸರು ಮೂನ್ ಗ್ಯಾಂಗ್ ಚೇ. ಈತನ ಬಾಲ್ಯ ಕೂಡ ಹಲವು ದುರಂತಗಳಿಂದ ಕೂಡಿವೆ. ಅವುಗಳಲ್ಲಿ ಮುಖ್ಯವಾದದ್ದು ಆಟಿಸಂ ಪೀಡಿತ ಆತನ ಅಣ್ಣ. ತಾಯಿಯ ಸಂಪೂರ್ಣ ಪ್ರೀತಿ ಅಣ್ಣನ ಪಾಲಾಗುತ್ತದೆ. 'ಅಣ್ಣನ ಬಗ್ಗೆ ಕಾಳಜಿ ವಹಿಸುವುದೇ ನಿನ್ನ ಕರ್ತವ್ಯ, ಅದಕ್ಕಾಗಿಯೇ ನೀನು ಹುಟ್ಟಿದ್ದೀಯ' ಎಂದು ತಾಯಿ ಪದೇ ಪದೇ ಹೇಳುತ್ತಿರುತ್ತಾಳೆ. ಈತನ ಮನದಲ್ಲೊಮ್ಮೆ 'ಅಣ್ಣ ಯಾಕೆ ಸಾಯಬಾರದು?' ಎನ್ನುವ ಪ್ರಶ್ನೆ ಹುಟ್ಟಿ ಬಿಡುತ್ತದೆ. ಇದೇ ಹೊತ್ತಿಗೆ ಈತನ ತಾಯಿ ಅನಿರೀಕ್ಷಿತವಾಗಿ ಕೊಲೆಗೀಡಾಗುತ್ತಾಳೆ. ಕೊಲೆಗಾತಿಯನ್ನು ಆಟಿಸಂ ಪೀಡಿತ ಅಣ್ಣ ನೋಡಿರುತ್ತಾನೆ. 'ಚಿಟ್ಟೆಯೊಂದು ತನ್ನ ತಾಯಿಯನ್ನು ಕೊಂದಿತು' ಎಂದು ಹೇಳುತ್ತಿರುತ್ತಾನೆ. ಆ ಚಿಟ್ಟೆ ಆತನನ್ನು ತೀವ್ರವಾಗಿ ಕಾಡತೊಡಗುತ್ತದೆ. ಆ ಚಿಟ್ಟೆಯಿಂದ ಪಾರಾಗುವುದಕ್ಕಾಗಿ ಈ ಸೋದರರು ಊರಿನಿಂದ ಊರಿಗೆ ಅಲೆಯುತ್ತಾ ಬೆಳೆಯುತ್ತಾರೆ. ತನ್ನ ತಾಯಿಯ ವಚನವನ್ನು ಕಿರಿಯ ಸೋದರ ನಿರ್ವಹಿಸುತ್ತಾನೆ. ಅಣ್ಣನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುತ್ತಾನೆ. ಈ ಸಂದರ್ಭದಲ್ಲೇ ಕಿರಿಯ ಸೋದರನಿಗೆ ಕಥಾನಾಯಕಿಯ ಭೇಟಿಯಾಗುತ್ತದೆ. ಇವರಿಬ್ಬರ ಮುಖಾಮುಖಿ ಅವರ ಬಾಲ್ಯದ ದುರಂತಗಳ ಮುಖಾಮುಖಿಯೂ ಹೌದು. ಪ್ರೀತಿ, ವಾತ್ಸಲ್ಯ, ಮಮತೆ ಇವುಗಳನ್ನು ನಿರೂಪಿಸಲು ಬಳಸಿದ ಸಂಕೇತಗಳು , ರೂಪಕಗಳು ಈ ಸರಣಿಯ ಹೆಗ್ಗಳಿಕೆಯಾಗಿದೆ. ನಮ್ಮ ಬಾಲ್ಯವೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಬಾಲ್ಯದ ಗಾಯಗಳಿಂದ ಸೈಕೋ ಸ್ಥಿತಿ ತಲುಪಿದ್ದ ನಾಯಕಿಯನ್ನು ಪಾರು ಮಾಡಿ, ತನ್ನ ಅಪಾರ ಪ್ರೀತಿಯ ಮೂಲಕ ಮನುಷ್ಯ ಲೋಕಕ್ಕೆ ಕರೆ ತರುವ ನಾಯಕ ನಮಗೆ ಇಷ್ಟವಾಗುತ್ತಾನೆ. ಒಂದೆಡೆ ತಾನು ಪ್ರೀತಿಸುವ ಹುಡುಗಿ, ಇನ್ನೊಂದೆಡೆ ತನ್ನನ್ನು ಅವಲಂಬಿಸಿರುವ ಅಣ್ಣ ಇವೆರಡನ್ನು ಜೊತೆ ಜೊತೆಯಾಗಿ ಕೊಂಡೊಯ್ಯಲು ಹೆಣಗಾಡುವ ನಾಯಕನ ಪಾಡು ಹೃದಯ ಮುಟ್ಟುವಂತಿದೆ. ತಂದೆ-ತಾಯಿ, ಗೆಳೆಯ-ಗೆಳತಿ, ಅಣ್ಣ-ತಮ್ಮ ಹೀಗೆ ಹಲವು ಸಂಬಂಧಗಳ ಹಿರಿಮೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಸರಣಿ ಇದು. ಸರಣಿಯನ್ನು ಲವಲವಿಕೆಯಿಂದ ನಿರೂಪಿಸಲಾಗಿದೆ. ನಾಯಕಿ ಮತ್ತು ನಾಯಕನ ನಡುವಿನ ಪ್ರೀತಿ, ಮುನಿಸು, ಕೋಪ, ತಾಪಗಳೆಲ್ಲ ಆಹ್ಲಾದಕರವಾಗಿವೆ. ಕ್ಲೈಮಾಕ್ಸ್ ನಲ್ಲಿ ಕಥಾನಾಯಕಿಯ ತಾಯಿಯ ಪ್ರವೇಶ ಸರಣಿಗೆ ತಿರುವು ನೀಡುತ್ತದೆ. ಆಟಿಸಂ ಪೀಡಿತ ಅಣ್ಣನ ಮುಗ್ಧತೆ, ಸ್ವಾರ್ಥ, ಸಿಟ್ಟು, ಹುಡುಗಾಟಿಕೆ ಎಲ್ಲವೂ ಮನ ಮುಟ್ಟುವಂತಿವೆೆ. ಕಥಾನಾಯಕ ಕೆಲಸ ನಿರ್ವಹಿಸುವ ಮಾನಸಿಕ ಆಸ್ಪತ್ರೆಯ ವಿವಿಧ ಪಾತ್ರಗಳು ಕಿರುಕತೆಗಳಾಗಿ ನಮ್ಮನ್ನು ಆರ್ದ್ರವಾಗಿ ತಟ್ಟುತ್ತವೆ. ಕೊನೆಗೂ ಚಿಟ್ಟೆಯ ಚಿತ್ರವನ್ನು ಬಿಡಿಸುವ ಮೂಲಕ ಕಲಾವಿದನಾಗಿ ಗುರುತಿಸಿಕೊಳ್ಳುವ ಆಟಿಸಂ ಪೀಡಿತ ಸೋದರ, ತನ್ನ ದಾರಿಯನ್ನು ತಾನೇ ಕಂಡುಕೊಳ್ಳುವ ಮೂಲಕ ತಮ್ಮನಿಗೆ ಬಿಡುಗಡೆ ನೀಡುತ್ತಾನೆ. ಕತೆಯೂ ಸುಖಾಂತ್ಯವಾಗುತ್ತದೆ. 

share
ಮುಸಾಫಿರ್
ಮುಸಾಫಿರ್
Next Story
X