ಸಂತೋಷ್ ಆತ್ಮಹತ್ಯೆ ಪ್ರಕರಣ | ಪ್ರಾಥಮಿಕ ತನಿಖೆ ಬಳಿಕ ಸಿಐಡಿ ತನಿಖೆ ಅವಶ್ಯಕತೆಯ ಬಗ್ಗೆ ನಿರ್ಧಾರ: ಸಿಎಂ ಬೊಮ್ಮಾಯಿ

ಬೆಂಗಳೂರು, ಎ.16: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಪ್ರಾಥಮಿಕ ತನಿಖೆ ನಡಯುತ್ತಿದೆ. ಅದು ಮುಗಿದ ಬಳಿಕ ಸಿಐಡಿ ತನಿಖೆಯ ಅವಶ್ಯಕತೆಯ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿ. ನಗರದ ನಿವಾಸದಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಸಂತೋಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಇದೀಗ ಪೋಸ್ಟ್ ಮಾರ್ಟಂ ಆಗಿದೆ. ಎಫ್.ಎಸ್.ಎಲ್. ವರದಿ ಬಂದ ಬಳಿಕ ಏನು ಸಂಭವಿಸಿದೆ ಎಂಬುದು ವೈಜ್ಞಾನಿಕವಾಗಿ ತಿಳಿದುಬರಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಬಹಳ ಶುದ್ಧ ಹಸ್ತದವರು ಯಾತ್ರೆ ಹೊರಟಿದ್ದಾರೆ. ಪ್ರವಾಸ ಮಾಡಲಿ, ಆ ಪ್ರಶ್ನೆಯಿಲ್ಲ. ಬಹಳ ಶುದ್ಧ ಹಸ್ತದವರು ಪವಿತ್ರ ಹಸ್ತದವರು ಕಮಿಷನ್ ಬಗ್ಗೆ ಮಾತನಾಡುತ್ತಾರೆ. ಈಗಾಗಲೇ ಜನರಿಗೆ ಗೊತ್ತಾಗಿದೆ. ಅವರ ಬೀರುವಿನಲ್ಲಿ ಎಷ್ಟೊಂದು ಭ್ರಷ್ಟಾಚಾರದ ಅಸ್ಥಿಪಂಜರ ಇದೆ ಅಂತ ಲೆಕ್ಕ ಹಾಕಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ತಿರುಗೇಟು ನೀಡಿದರು.
Next Story





