ಸಾಂಪ್ರದಾಯಿಕ ಕುಂಬಾರಿಕೆ ಕೃತಿಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಉದ್ಘಾಟನೆ

ಮಂಗಳೂರು : ’ಸ್ಪಿನ್ನರ್ಸ್ ಆಫ್ ಕ್ಲೇ ಆನ್ ವೀಲ್’-ಸಾಂಪ್ರದಾಯಿಕ ಕುಂಬಾರಿಕೆ ಕೆಲಸಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಮತ್ತು ಮಾರಾಟವನ್ನು ನಗರದ ಬಲ್ಲಾಲ್ ಬಾಗ್‌ನ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಶನಿವಾಸ ಉದ್ಘಾಟಿಸಲಾಯಿತು.
ಇಂಟಾಕ್‌ನ ಮಂಗಳೂರು ಘಟಕವು ಆರ್ಟ್ ಕನರಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿರುವ ಈ ಪ್ರದರ್ಶನ-ಮಾರಾಟ ಮೇಳೆವು ಎ.೧೮ರವರೆಗೆ ಪೂ.೧೧ರಿಂದ ಸಂಜೆ ೭ರವರೆಗೆ ನಡೆಯಲಿದೆ.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್ ಮಾತನಾಡಿ ಸರಕಾರವು ಕ್ಲಸ್ಟರ್‌ಗಳನ್ನು ಮಾಡಲು ಮತ್ತು ಕುಶಲಕರ್ಮಿಗಳಿಗೆ ಸಾಮಾನ್ಯ ಸೌಲಭ್ಯಗಳನ್ನು ಒದಗಿಸಲು ಹಾಗೂ ಮಾರುಕಟ್ಟೆಗೆ ಸಹಾಯ ಮಾಡುವ ಯೋಜನೆಗಳನ್ನು ಹೊಂದಿದೆ ಎಂದರು.
ಇಂಟಾಕ್ ಮಂಗಳೂರು ಘಟಕದ ಸಂಚಾಲಕ ಸುಭಾಶ್ಚಂದ್ರ ಬಸು ಮಾತನಾಡಿ ದ.ಕ.ಜಿಲ್ಲೆಯ ಎಲ್ಲಾ ಕುಶಲಕರ್ಮಿಗಳ ಡೈರೆಕ್ಟರಿಯನ್ನು ರಚಿಸುವುದು ಉದ್ದೇಶವಿದೆ. ಈಗಾಗಲೆ ೮೯ ಕುಂಬಾರರನ್ನು ಗುರುತಿಸಿದ್ದೇವೆ ಮತ್ತು ೪೮ ಕುಂಬಾರರ ವಿವರವಾದ ದಾಖಲಾತಿ ಮಾಡಲಾಗಿದೆ. ಮಡಕೆಗಳ ತಯಾರಿಕೆಯ ಪ್ರತಿ ಹಂತವನ್ನು ಗುರುತಿಸಲಾಗಿದೆ ಎಂದರು.
ಪ್ರಸ್ತುತ ೫೦ರಿಂದ ೭೦ ವರ್ಷ ಪ್ರಾಯದೊಳಗಿನ ಕುಂಬಾರರು ಇನ್ನೂ ಕುಂಬಾರಿಕೆ ಅಭ್ಯಾಸ ಮಾಡುತ್ತಿದ್ದಾರೆ. ೩೦ ವರ್ಷ ವಯಸ್ಸಿನ ಸುಮಾರು ೫ ಯುವಕರು ಮಾತ್ರ ಇದ್ದಾರೆ. ಹೆಚ್ಚಿನ ಸ್ಥಳೀಯರು (ಕುಲಾಲ/ಮೂಲ್ಯ ಸಮುದಾಯ) ಕುಂಬಾರಿಕೆ ಅಭ್ಯಾಸ ಮಾಡುತ್ತಿಲ್ಲ ಅಧಿಕ ಮಂದಿ ಶೃಂಗೇರಿ ಮತ್ತಿತರ ಭಾಗಗಳಿಂದ ವಲಸೆ ಬಂದಿದ್ದಾರೆ ಎಂದು ಸುಭಾಶ್ಚಂದ್ರ ಬಸು ಹೇಳಿದರು.
ಕುಳಾಯಿ ಮನೋಜ್ ಕುಲಾಲ್ ಮಾತನಾಡಿ ಉರುವಲು ಮತ್ತು ಮಣ್ಣಿನಂತಹ ಕಚ್ಚಾ ವಸ್ತುಗಳನ್ನು ಖರೀದಿಸಲು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ವಿವರಿಸಿದರಲ್ಲದೆ ಸುಲಭವಾಗಿ ಮಣ್ಣನ್ನು ಸಂಗ್ರಹಿಸಲು ಅಗತ್ಯರುವಿವ ಭೂಮಿಯನ್ನು ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಬೆಳ್ತಂಗಡಿಯ ಜಿತೇಶ್ ಕುಂಬಾರ ಮಾತನಾಡಿ ಮಂಗಳೂರು, ಕಾಸರಗೋಡು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಡಿಕೆಗಳಿಗೆ ಉತ್ತಮ ಬೇಡಿಕೆಯಿದೆ. ಆದರೆ ಉತ್ಪಾದನೆಯು ಕಡಿಮೆ ಇದೆ. ಇಳಂತಿಲ ಗ್ರಾಮದಲ್ಲಿರುವ ಮೂವತ್ತು ಕುಂಬಾರರ ಕುಟುಂಬಗಳಲ್ಲಿ ಮೂರು ಕುಟುಂಬಗಳು ಮಾತ್ರ ಕುಂಬಾರಿಕೆಯನ್ನು ಅಭ್ಯಾಸ ಮಾಡುತ್ತಿವೆ. ಸರಕಾರ ಈ ಹಿಂದೆ ತರಬೇತಿ ಮತ್ತು ಸಮುದಾಯ ಕಾರ್ಯಸ್ಥಳಕ್ಕಾಗಿ ೫ ಲಕ್ಷ ರೂ. ನೀಡುತ್ತಿತ್ತು, ಆದರೆ ಪ್ರಸ್ತುತ ಯಾವುದೇ ಬೆಂಬಲವಿಲ್ಲ ಎಂದು ವಿಷಾದಿಸಿದರು.







.jpg)

.jpg)

