Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕೊಲ್ಲೂರು ದೇವಸ್ಥಾನದ ಭೋಜನ ಪ್ರಸಾದಕ್ಕೆ...

ಕೊಲ್ಲೂರು ದೇವಸ್ಥಾನದ ಭೋಜನ ಪ್ರಸಾದಕ್ಕೆ ರಾಷ್ಟ್ರೀಯ ಸುರಕ್ಷತಾ ಗುಣಮಟ್ಟದ ಮಾನ್ಯತೆ

ವಾರ್ತಾಭಾರತಿವಾರ್ತಾಭಾರತಿ17 April 2022 2:56 PM IST
share
ಕೊಲ್ಲೂರು ದೇವಸ್ಥಾನದ ಭೋಜನ ಪ್ರಸಾದಕ್ಕೆ ರಾಷ್ಟ್ರೀಯ ಸುರಕ್ಷತಾ ಗುಣಮಟ್ಟದ ಮಾನ್ಯತೆ

ಉಡುಪಿ : ಕೊಲ್ಲೂರು ಶ್ರೀಮೂಕಾಂಬಿಕಾ ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತಾಧಿಗಳಿಗೆ ದೇವಾಲಯದ ವತಿಯಿಂದ ಉಚಿತ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದ್ದು, ಇಲ್ಲಿ ದೇವರಿಗೆ ಅರ್ಪಿಸುವ ನೈವೈದ್ಯ ಮತ್ತು ಭಕ್ತರಿಗೆ ನೀಡುವ ಭೋಜನ ಪ್ರಸಾದವು ಗರಿಷ್ಠ ಗುಣಮಟ್ಟದಿಂದ ಕೂಡಿದ್ದು, ಆರೋಗ್ಯಕ್ಕೆ ಅತ್ಯಂತ ಸುರಕ್ಷಿತವಾದುದು ಎಂಬ ಪ್ರಮಾಣ ಪತ್ರವನ್ನು ಭಾರತದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ನೀಡಿದೆ.

ಇಲ್ಲಿ ಭಕ್ತಾಧಿಗಳಿಗೆ ತಯಾರಿಸುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಲು ಆಹಾರ ತಯಾರಿಕಾ ಕಟ್ಟಡ ಮತ್ತು ಅಲ್ಲಿರುವ ಸೌಲಭ್ಯಗಳು, ಆಹಾರ ತಯಾರಿಸುವ ವಿಧಾನ, ಸ್ವಚ್ಛತೆ, ಆಹಾರ ತಯಾರಿಕಾ ಸಿಬ್ಬಂದಿಗಳಿಗೆ ನೀಡಿರುವ ತರಬೇತಿ ಈ ಅಂಶಗಳ ಆಧಾರದಲ್ಲಿ ಆಡಿಟ್ ಮಾಡಲಾಗಿದ್ದು, ದೇವಾಲಯ ದಲ್ಲಿ ಈ ಎಲ್ಲಾ ಅಂಶಗಳಿಗೆ ಪ್ರಾಧಾನ್ಯತೆ ನೀಡಿ ಆಹಾರ ತಯಾರಿಸುತ್ತಿರುವುದರಿಂದ ಈ ಪ್ರಮಾಣ ಪತ್ರ ನೀಡಲಾಗಿದೆ.

ಇಲ್ಲಿನ ದೇವಾಲಯದ ಆಹಾರ ತಯಾರಿಕಾ ಕೊಠಡಿಯು ಅತ್ಯಂತ ಸುಸಜ್ಜಿತವಾಗಿದ್ದು, ಕಟ್ಟಡವು ಮಳೆ ನೀರಿನಿಂದ ಸೋರುವಿಕೆ ಇಲ್ಲದೇ, ಉತ್ತಮ ಗುಣಮಟ್ಟದ ಗೋಡೆ ಹಾಗೂ ಕಾಲು ಜಾರದೆ ಇರುವ ನೆಲಹಾಸು  ಸೌಲಭ್ಯ, ತುಕ್ಕು ಹಿಡಿಯದ ಕಿಟಕಿ ಬಾಗಿಲುಗಳು, ಆಹಾರ ತಯಾರಿಕೆಗೆ ಬಳಸುವ ಪಾತ್ರೆಗಳ ಗುಣಮಟ್ಟ, ಕಲಾಯಿ ಹಾಕಿರುವುದು, ಉತ್ತಮ ಗಾಳಿ ಬೆಳಕು ಸೌಲಭ್ಯ, ಆಹಾರವನ್ನು ಬಿಸಿ ಮತ್ತು ತಂಪು ಮಾಡಲು ಬಳಸುವ ಯಂತ್ರೋ ಕರಣಗಳ ಸೌಲಭ್ಯ, ಆಹಾರ  ತಯಾರಿಕಾ ಸಾಮಗ್ರಿಗಳನ್ನು ದಾಸ್ತಾನು ಮಾಡಲು ಬಳಸುವ ಉತ್ತಮ ಕೊಠಡಿ ಸೌಲಭ್ಯವನ್ನು, ಪಾತ್ರೆಗಳನ್ನು ತೊಳೆ ನೀರು ಮತ್ತು ಆಹಾರ ತಯಾರಿಕೆ ಸಮಯದಲ್ಲಿ ಉಳಿದ ತ್ಯಾಜ್ಯವನ್ನು  ವ್ಯವಸ್ಥಿತವಾಗಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಪ್ರಾಧಿಕಾರದ ವರದಿ ತಿಳಿಸಿದೆ.

ಆಹಾರ ತಯಾರಿಕೆಗೆ ಬಳಸುವ ಸಾಮಗ್ರಿಗಳು ಆಹಾರ ಸುರಕ್ಷತಾ ಪ್ರಮಾಣ ಪತ್ರ ಹೊಂದಿರುವ ಸರಬರಾಜುದಾರರ ಮೂಲಕವೇ ಖರೀದಿಸುತ್ತಿದ್ದು, ಯಾವುದೇ ಒಡೆದ ಆಹಾರ ಪ್ಯಾಕೆಟ್‌ಗಳನ್ನು ಬಳಸುತ್ತಿಲ್ಲ, ಸರಬರಾಜು ಆದ ಆಹಾರ ಪದಾರ್ಥಗಳ ಅವಧಿ ಮೀರುವ ದಿನಾಂಕವನ್ನು  ಪರಿಶೀಲಿಸುತ್ತಿದ್ದು, ಆ ಪದಾರ್ಥಗಳನ್ನು ಉಷ್ಣಾಂಶಕ್ಕೆ ತಕ್ಕಂತೆ ಕೆಡದಂತೆ ಇಡಲು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದು, ಎಲ್ಲಾ ಪದಾರ್ಥಗಳನ್ನು ನಿರ್ದಿಷ್ಠ ಸ್ಥಳದಲ್ಲಿ ಶೇಖರಿಸಲಾಗುತ್ತಿದೆ. ಸೂಕ್ತ ಶೈತ್ಯಾಗಾರ ಮತ್ತು ಉಷ್ಣಾಗಾರಗಳ ಸೌಲಭ್ಯಗಳನ್ನು ಹೊಂದಿದ್ದು, ಆಹಾರ ಸರಬರಾಜು ವಾಹನ ಸಹ ಸ್ವಚ್ಚತೆಯಿಂದ ಕೂಡಿರುವಂತೆ ನೋಡಿ ಕೊಳ್ಳಲಾಗುತ್ತಿದೆ.

ಆಹಾರ ಬಡಿಸುವ ಪಾತ್ರೆಗಳನ್ನು ಸಹ ಸ್ವಚ್ಛವಾಗಿರುವಂತೆ ನೋಡಿಕೊಂಡಿದ್ದು, ಆಹಾರ ನೀಡುವ ಸ್ಥಳದಲ್ಲಿ ಗರಿಷ್ಠ ಸ್ವಚ್ಛತೆಗೆ ಆದ್ಯತೆ ನೀಡಿದೆ. ಈ ಪ್ರದೇಶವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದ್ದು, ಈ ಸ್ಥಳಕ್ಕೆ  ಯಾವುದೇ ಕ್ರಿಮಿ ಕೀಟಗಳು ಬಾರದಂತೆ ಮತ್ತು ಬೆಳವಣಿಗೆಯಾಗದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ನಿತ್ಯವೂ ಕೈಗೊಳ್ಳಲಾಗುತ್ತಿದೆ.

ದೇವಾಲಯದಲ್ಲಿ ಆಹಾರ ಬಡಿಸುವವರಿಗೂ ಸಹ ಎಲ್ಲಾ ರೀತಿಯ ತರಬೇತಿ ನೀಡಿದ್ದು, ಸ್ವಚ್ಛತಯನ್ನು ಕಾಪಾಡಿಕೊಂಡು ಆಹಾರ ಬಡಿಸುವಂತೆ ನಿರ್ದೇಶನ ಗಳನ್ನು ನೀಡಲಾಗಿದೆ. ಅನಾರೋಗ್ಯ ಲಕ್ಷಣಗಳಿರುವ ಸಿಬ್ಬಂದಿಗಳಿಗೆ, ಆಹಾರ  ತಯಾರಿಕಾ ಕೊಠಡಿ ಪ್ರವೇಶಿಸದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.

ಈ ಎಲ್ಲಾ ಅಂಶಗಳ ಬಗ್ಗೆ ನಿರಂತರ ಪರಿಶೀಲನೆ ಸಹ ನಡೆಸಲಾಗುತ್ತಿದೆ. ಒಂದು ಬಾರಿ ಮಾಡಿದ ಆಹಾರ ಉಳಿದರೆ ಅದನ್ನು ಮರು ಬಳಕೆ ಮಾಡದೇ ಅದನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಒಮ್ಮೆ ಕರಿದ ಎಣ್ಣೆ ಯನ್ನೂ ಸಹ ಮರು ಬಳಕೆ ಮಾಡುವುದಿಲ್ಲ. ಸಿಬ್ಬಂದಿಗಳಿಗೂ ಆಹಾರ ಸುರಕ್ಷತೆ ಯನ್ನೂ ಕಾಪಾಡುವ ಕುರಿತಂತೆ ತರಬೇತಿಯನ್ನೂ ಸಹ ನೀಡಲಾಗಿದೆ ಎಂದು ಪ್ರಾಧಿಕಾರದ ವರದಿಯಲ್ಲಿ ತಿಳಿಸಲಾಗಿದೆ.

ಈ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಕೊಲ್ಲೂರು ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಅತ್ಯಂತ ಪರಿಶುದ್ದ, ಸುರಕ್ಷಿತ ಮತ್ತು ಗುಣಮಟ್ಟದ ಭೋಜನ ಪ್ರಸಾದವನ್ನು ನೀಡಲಾಗುತ್ತಿದ್ದು, ಭಾರತ ಸರಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಪ್ರಮಾಣಪತ್ರವನ್ನು ನೀಡಿದ್ದಾರೆ.

"ಕೊಲ್ಲೂರು ದೇವಸ್ಥಾನದಲ್ಲಿ ಭಕ್ತರಿಗೆ ನೀಡುವ ಭೋಜನ ಪ್ರಸಾದವು ಅತ್ಯಂತ ಸುರಕ್ಷಿತ ಮತ್ತು ಗುಣಮಟ್ಟದಿಂದ ಕೂಡಿದೆ ಎಂದು ಭಾರತ ಸರಕಾರದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯಲು ಬೇಕಾದ ಅಂಶಗಳ ಪಾಲನೆ ಕುರಿತಂತೆ, ದೇವಾಲಯದ ಎಲ್ಲಾ ಸಿಬ್ಬಂದಿಗೆ ಮಾಹಿತಿ ಹಾಗೂ ಅಗತ್ಯ ತರಬೇತಿಯನ್ನು ನೀಡಿದ್ದು, ಈ ಬಗ್ಗೆ ಆಗಿಂದಾಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಸಲಹೆಗಳನ್ನು ನೀಡಲಾಗಿದೆ.
-ಡಾ.ಪ್ರೇಮಾನಂದ್, ಜಿಲ್ಲಾ ಆಹಾರ ಮತ್ತು ಗುಣಮಟ್ಟ ನಿಯಂತ್ರಣಾ ಅಧಿಕಾರಿ, ಉಡುಪಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X