ಮುಸ್ತಫಾ ಅಂಜಿಕ್ಕಾರ್ ನೇತೃತ್ವದಲ್ಲಿ ರಮಝಾನ್ ಕಿಟ್ ವಿತರಣೆ

ಸುಳ್ಯ : ಅನಿವಾಸಿ ಭಾರತೀಯ, ಸಮಾಜ ಸೇವಕ ಮುಸ್ತಫಾ ಅಂಜಿಕ್ಕಾರ್‌ರ ನೇತೃತ್ವದಲ್ಲಿ ಜಯನಗರ ವಸತಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಮಝಾನ್ ಕಿಟ್ ವಿತರಿಸಲಾಯಿತು.
ಅಸಯ್ಯಿದ್ ಝೈನುಲ್ ಆಬಿದೀನ್ ತಂಳ್ ಜಯನಗರ ದುಆಗೈದರು. ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಕೆ.ಎಂ.ಮುಸ್ತಫಾ, ಡಾ.ಆರ್.ಬಿ. ಬಶೀರ್ ಪೈಚಾರ್, ಶಾಂತಿನಗರ ಸರಕಾರಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಝೀರ್ ಶಾಂತಿನಗರ. ಇಬ್ರಾಹಿಂ ಕೊಕ್ಕೋ ಗಾಂಧಿನಗರ, ಉದ್ಯಮಿ ಅಬ್ದುರ‌್ರಝಾಕ್ ಕರಾವಳಿ, ಜಯನಗರ ಮಸ್ಜಿದ್ ಮತ್ತು ಮದ್ರಸದ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ಲ, ಡಿ.ಎಂ.ಅಬೂಬಕರ್, ನವಾಝ್ ಪಂಡಿತ್ ಜಯನಗರ, ಆಸಿಫ್ ಜಯನಗರ, ಮುಹಮ್ಮದ್ ಮಿನ್‌ಹಾಜ್ ಅಂಜಿಕ್ಕಾರ್, ಮುಹಮ್ಮದ್ ಮಿಸ್‌ಬಾಹ್ ಅಂಜಿಕ್ಕಾರ್, ಇಬ್ರಾಹಿಂ ಮುಫಾಝ್ ಅಂಜಿಕ್ಕಾರ್ ಉಪಸ್ಥಿತರಿದ್ದರು. ಪತ್ರಕರ್ತ ಹಸೈನಾರ್ ಜಯನಗರ ಕಾರ್ಯಕ್ರಮ ನಿರೂಪಿಸಿದರು.
Next Story





