ಮುಈನುಸ್ಸುನ್ನಃ ಕರ್ನಾಟಕ; ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಹಾವೇರಿ ಕೇಂದ್ರೀಕರಿಸಿ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಚಳವಳಿ ನಡೆಸುತ್ತಿರುವ ಮುಈನುಸ್ಸುನ್ನಃ ಅಕಾಡಮಿ ಕರ್ನಾಟಕ ಇದರ ಅಧ್ಯಕ್ಷರಾಗಿ ಸಯ್ಯಿದ್ ಶಹೀರ್ ಅಲ್ ಬುಖಾರಿ ತಂಙಲ್ ಪುನರಾಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಕೆಎಂ ಅಬೂಬಕರ್ ಸಿದ್ದೀಖ್, ಕೋಶಾಧಿಕಾರಿಯಾಗಿ ಡಾ. ಶೇಖ್ ಬಾವ, ಕೆ.ಎಂ. ಮುಸ್ತಫಾ ನಈಮಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಸಯ್ಯಿದ್ ಜಾಫರ್ ಸಾದಿಕ್ ತಂಙಲ್ ಕುಂಬೋಲ್, ರಾಜ್ಯ ಉಲಮಾ ಒಕ್ಕೂಟದ ಕಾರ್ಯದರ್ಶಿ ಕೆಪಿ ಹುಸೈನ್ ಸಅದಿ ಹಾಗೂ ಚಾರ್ಟಡ್ ಅಕೌಂಟೆಂಟ್ ಅಬ್ದುಲ್ ನಸೀರ್ ದಾವಣಗೆರೆ ಸಲಹೆಗಾರರಾಗಿ ನಿಯುಕ್ತಿಗೊಂಡಿದ್ದಾರೆ.
ಉಪಾಧ್ಯಕ್ಷರುಗಳಾಗಿ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಲ್, ಅಬ್ಬಾಸ್ ಹಾಜಿ ಉಚ್ಚಿಲ, ಮುಹಮ್ಮದ್ ಹಾಜಿ ಸಾಗರ, ಬದ್ರುದ್ದೀನ್ ಹಾಜಿ ಬಜ್ಪೆ, ಹಾಜಿ ಸನಾವುಲ್ಲಾ ದಾವಣಗೆರೆ, ಡಾ. ಕಮರ್ ರಝಾ ಇನಾಂದಾರ್ ಗುಲ್ಬರ್ಗ ಹಾಗೂ ಕಾರ್ಯದರ್ಶಿಗಳಾಗಿ ಸಯ್ಯಿದ್ ಅತ್ಹರ್ ಸಖಾಫಿ ಸವನೂರು, ಮುಹ್ಸಿನ್ ರಿಫಾಈ ಹಾವೇರಿ, ರಶೀದ್ ಹಾಜಿ ಪಾಂಡೇಶ್ವರ, ಕಮಾಲುದ್ದೀನ್ ಅಂಬ್ಲಮೊಗರ್, ಫಾರೂಖ್ ಮೌಲಾನಾ ದಾವಣಗೆರೆ ಅವರನ್ನು ಆರಿಸಲಾಯಿತು.
ಸಯ್ಯಿದ್ ತ್ವಾಹಾ ತಂಙಲ್ ಕಲ್ಲಕಟ್ಟ, ಸಯ್ಯಿದ್ ಝೈನುಲ್ ಆಬಿದೀನ್ ತಂಙಲ್ ಕಿನ್ಯಾ, ಸಯ್ಯಿದ್ ಖುಬೈಬ್ ತಂಙಲ್ ಉಳ್ಳಾಲ, ಕೆಕೆಎಂ ಕಾಮಿಲ್ ಸಖಾಫಿ, ಲುಕ್ಮಾನಿಯಾ ಉಸ್ತಾದ್ ಕೃಷ್ಣಾಪುರ, ಚಿಯ್ಯೂರು ಅಬ್ದುಲ್ ರಹ್ಮಾನ್ ಸಖಾಫಿ, ಸಿದ್ದೀಕ್ ಸಖಾಫಿ ಕಾಯಾರ್, ಹಂಝ ಸಅದಿ ಹತ್ತಿಮತ್ತೂರು, ಮುಸ್ತಫಾ ಸಅದಿ ದಾವಣಗೆರೆ, ಜೈ ಅಬ್ದುರ್ರಹ್ಮಾನ್ ದಾವಣಗೆರೆ, ಯಾಸೀನ್ ಸಖಾಫಿ ಅಡ್ಡೂರು, ಕೆಕೆ ಅಶ್ರಫ್ ಸಖಾಫಿ ಹರಿಹರ, ಮುಖ್ತಾರ್ ರಝ್ವಿ ಹತ್ತಿಮತ್ತೂರು, ಅಲ್ತಾಫ್ ಸವನೂರ, ಹುಸೈನ್ ಸಅದಿ ಹೊಸ್ಮಾರ್, ಝುಲ್ಫಿಕರ್ ಮಂಗಳೂರು, ಹಾಜಿ ಇಕ್ಬಾಲ್ ರಾಣೆಬೆನ್ನೂರು, ಮುನವ್ವರ್ ಸಾಗರ, ಅಬ್ದುಲ್ ಹಮೀದ್ ಜುಬೈಲ್, ಖಾಸಿಂ ಹಾಜಿ ಕರ್ನಿರೆ, ಶಾಹಿನ್ ಚಿಕ್ಕಮಗಳೂರು, ಅಲ್ತಾಫ್ ಶಾಂತಿಬಾಗ್, ನಸೀರ್ ಅಬ್ಬಾಸ್ ಸುರೈಜಿ ಸದಸ್ಯರಾಗಿರುವರು.
ಪಡೀಲ್ ಇಲ್ಮ್ ಸೆಂಟರ್ ನಲ್ಲಿ ನಡೆದ ಸಂಸ್ಥೆಯ ಮಹಾಸಭೆಯನ್ನು ಸಯ್ಯಿದ್ ಶಹೀರ್ ತಂಙಲ್ ಅಧ್ಯಕ್ಷತೆಯಲ್ಲಿ ಕೆ ಎಂ ಅಬೂಬಕರ್ ಸಿದ್ದೀಖ್ ಉದ್ಘಾಟಿಸಿದರು. ಕೆಕೆಎಂ ಕಾಮಿಲ್ ಸಖಾಫಿ, ಡಾ. ಶೇಖ್ ಬಾವ ಮಾತನಾಡಿದರು. ಕೆ ಎಂ ಮುಸ್ತಫಾ ನಈಮಿ ಸ್ವಾಗತಿಸಿ, ಸಿದ್ದೀಕ್ ಸಖಾಫಿ ಕಾಯಾರ್ ವಂದಿಸಿದರು.







