ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಶಿರ್ವ : ವೈಯಕ್ತಿಕ ಸಮಸ್ಯೆಯಿಂದ ಮಾನಸಿಕವಾಗಿ ನೊಂದ ಕುತ್ಯಾರು ನಿವಾಸಿ ಸಂತೋಷ (37) ಎಂಬವರು ಎ.15ರಂದು ರಾತ್ರಿ ವೇಳೆ ಕುತ್ಯಾರುವಿನ ಸಾಧು ಮೂಲ್ಯರ ಖಾಲಿ ಮನೆಯ ಪಡಸಾಲೆಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರನಾರಾಯಣ: ಬೆಂಗಳೂರಿನ ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದ ಉಳ್ಳೂರು 74 ಗ್ರಾಮದ ಶಾಲೆಜೆಡ್ಡು ನಿವಾಸಿ ನಾರಾಯಣ ಶೆಟ್ಟಿ(52) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಎ.7ರಿಂದ ಎ.16ರ ಮಧ್ಯಾವಧಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





