ಸುಳ್ಯದ ದಂಪತಿ ಮೈಸೂರಿನಲ್ಲಿ ಆತ್ಮಹತ್ಯೆ

ಮಾಧವ ನಾಯ್ಕ್-ಉಷಾ
ಸುಳ್ಯ: ಕುಕ್ಕಾಜೆಕಾನದವರಾಗಿದ್ದು, ಮೈಸೂರಿನಲ್ಲಿ ನೆಲೆಸಿದ್ದ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ವರದಿಯಾಗಿದೆ.
ಸುಳ್ಯ ಕುಕ್ಕಾಜೆಕಾನದ ಮಾಧವ ನಾಯ್ಕ್ (56) ಮತ್ತು ಅವರ ಪತ್ನಿ ಉಷಾ (47) ಆತ್ಮಹತ್ಯೆ ಮಾಡಿಕೊಂಡ ದಂಪತಿ.
ಸೋಣಂಗೇರಿ ಮಂಗಳೂರು ಮೊದಲಾದೆಡೆ ಪೋಸ್ಟ್ ಮ್ಯಾನ್ ಆಗಿ ಕಾರ್ಯನಿರ್ವಹಿಸಿದ್ದ ಸುಳ್ಯ ಕುಕ್ಕಾಜೆಕಾನ ಮಾಧವ ನಾಯ್ಕ್ ಅವರು 3 ವರ್ಷಗಳ ಹಿಂದೆ ಪತ್ನಿ, ಪುತ್ರಿ ಸಮೇತ ಮೈಸೂರಿಗೆ ಹೋಗಿ ನೆಲೆಸಿದ್ದರು. ಕಳೆದ ವರ್ಷ ಪುತ್ರಿಯ ಮದುವೆ ಕೂಡ ಮಾಡಿಸಿದ್ದರು.
ಅತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮಹಜರು ನಡೆದು ಮೃತದೇಹಗಳನ್ನು ರವಿವಾರ ರಾತ್ರಿ ಸುಳ್ಯ ಕುಕ್ಕಾಜೆಕಾನಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಮಾಧವ ನಾಯ್ಕ್ ಮೂರ್ನಾಲ್ಕು ವರ್ಷಗಳ ಹಿಂದೆ ಪೋಸ್ಟ್ ಮ್ಯಾನ್ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದು ಮೈಸೂರಿಗೆ ಹೋಗಿದ್ದರು. ಮೃತರು ಪುತ್ರಿ ಹಾಗೂ ಬಂಧುಗಳನ್ನು ಅಗಲಿದ್ದಾರೆ.
Next Story





