ಬೆಂಗಳೂರು | ಸಂಚಾರ ನಿಯಮ ದೋಷ ಇದ್ದಲ್ಲಿ ದೂರು ನೀಡಿ: ಪೊಲೀಸ್ ಆಯುಕ್ತ ಕಮಲ್ ಪಂತ್

ಬೆಂಗಳೂರು, ಎ. 17: ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಶುಲ್ಕ ರಸೀದಿಯಲ್ಲಿ ದೋಷ ಉಂಟಾಗಿದ್ದರೆ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ(ಎಸಿಪಿ)ಗೆ ದೂರು ನೀಡಬಹುದು ಅಲ್ಲಿಯೂ ಪರಿಹಾರ ಸಿಗದಿದ್ದರೆ ನನ್ನನ್ನು ಸಂಪರ್ಕಿಸಬಹುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಸಾರ್ವಜನಿಕ ಸಂವಾದದಲ್ಲಿ ಸಂಚಾರ ನಿಯಮಗಳ ಸಂಬಂಧ ಸಲ್ಲಿಕೆಯಾದ ದೂರುಗಳಿಗೆ ಪ್ರತಿಕ್ರಿಯಿಸಿದ ಅವರು, ರಸ್ತೆಗಳಲ್ಲಿನ ಸಿಗ್ನಲ್‍ಗಳು ತಾಂತ್ರಿಕ ದೋಷ ಕಂಡುಬಂದಾಗ ಸಂಚಾರ ನಿಯಮ ಉಲ್ಲಂಘನೆ ಎಂದು ವಾಹನ ಸವಾರರಿಗೆ ಶುಲ್ಕ ರಸೀದಿ ಬಂದರೆ ಪರಿಹಾರ ಕಂಡುಕೊಳ್ಳಲು ಸಂಚಾರ ವಿಭಾಗದ ಎಸಿಪಿಯನ್ನು ಸಂಪರ್ಕಿಸಬಹುದು ಎಂದರು.
ನಗರದಲ್ಲಿ ದುರಸ್ತಿಯಲ್ಲಿರುವ ರಸ್ತೆಗಳು ವೃತ್ತಗಳಿಂದಾಗಿ ಸರಿಯಾದ ಸಂಚಾರವಿದ್ದರೂ ಒಂದು ವೇಳೆ ಉಲ್ಲಂಘನೆಯ ಶುಲ್ಕ ಬೀಳಬಹುದು ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನೂ, ಇದೇ ವೇಳೆ ಎಚ್‍ಬಿಆರ್ ಲೇಔಟ್‍ನಲ್ಲಿರುವ ಮಸೀದಿಗಳೊಂದಿಗೆ ಧ್ವನಿವರ್ಧಕಗಳನ್ನು ಬಳಸುವುದಕ್ಕಾಗಿ ಧಾರ್ಮಿಕ ಸ್ಥಳಗಳಿಗೆ ಕಳುಹಿಸಲಾದ ಕಾನೂನು ನೋಟಿಸ್‍ಗಳ ಕುರಿತು ಪ್ರತಿಕ್ರಿಯಿಸಿ, ಈ ವಿವರಗಳನ್ನು ಹೈಕೋರ್ಟ್‍ಗೆ ಸಲ್ಲಿಸಲಾಗಿದೆ ಎಂದು ಪಂತ್ ಹೇಳಿದರು







