Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 'ಉದ್ಯೋಗ ಜಿಹಾದ್': ಪವನ್‌ಹಂಸ್...

'ಉದ್ಯೋಗ ಜಿಹಾದ್': ಪವನ್‌ಹಂಸ್ ನೇಮಕಾತಿಗೆ ಕೋಮುಬಣ್ಣ ಬಳಿದ ಸುದರ್ಶನ ಟಿವಿ

► ಸುದರ್ಶನ ಟಿವಿ ಆರೋಪದ ಪೊಳ್ಳುತನ ಬಯಲಿಗೆಳೆದ ದಿ ವೈರ್

ವಾರ್ತಾಭಾರತಿವಾರ್ತಾಭಾರತಿ17 April 2022 11:24 PM IST
share
ಉದ್ಯೋಗ ಜಿಹಾದ್: ಪವನ್‌ಹಂಸ್ ನೇಮಕಾತಿಗೆ ಕೋಮುಬಣ್ಣ ಬಳಿದ ಸುದರ್ಶನ ಟಿವಿ

ಹೊಸದಿಲ್ಲಿ, ಎ.17: ಬಲಪಂಥೀಯ ಧೋರಣೆಯ ಸುದ್ದಿವಾಹಿನಿ ‘ಸುದರ್ಶನ ಟಿವಿ’ಯ ಸಂಪಾದಕ ಸುರೇಶ್ ಚಾವಂಕೆ ಅವರು‌, ʼಸರಕಾರಿ ಹುದ್ದೆಗಳಿಗೆ ಮುಸ್ಲಿಂ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕಗೊಳ್ಳುವಂತೆ ಮಾಡಲು ಕ್ರಿಮಿನಲ್ ಸಂಚು ನಡೆಯುತ್ತಿದ್ದು ಅದೊಂದು ಉದ್ಯೋಗದ ಜಿಹಾದ್ ಆಗಿದೆʼ ಎಂದು ಶುಕ್ರವಾರ ಆಪಾದಿಸಿದ್ದಾರೆ.

ಕೇಂದ್ರ ನಾಗರಿಕ ವಾಯುಯಾನ ಸಚಿವಾಲಯದ ಒಡೆತನದ ಹೆಲಿಕಾಪ್ಟರ್ ಸೇವಾ ಸಂಸ್ಥೆ ಪವನ್‌ಹಂಸ್ (Pawan Hans)ನಲ್ಲಿ ಅಪ್ರೆಂಟಿಶಿಪ್‌ಗಳಾಗಿ ನೇಮಕಗೊಂಡ ಎಲ್ಲಾ 10 ಮಂದಿ ಅಭ್ಯರ್ಥಿಗಳು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ವಿದಾರ್ಥಿಗಳಾಗಿದ್ದಾರೆ. ಹಿಂದೂಗಳಿಗೆ ಸರಕಾರಿ ಉದ್ಯೋಗಗಳನ್ನು ನಿರಾಕರಿಸಲಾಗುತ್ತಿದೆಯೆಂದು ಸಾಮಾಜಿಕ ಜಾಲತಾಣವೊಂದರಲ್ಲಿ ಹರಿದಾಡಿದ ವರದಿಯ ಆಧಾರದಲ್ಲಿ ಚಾವಂಕೆ ಈ ಆರೋಪ ಮಾಡಿದ್ದರು.

ಪವನ್‌ಹಂಸ್ ಸಂಸ್ಥೆಯಲ್ಲಿ 100 ಶೇ. ಆಘೋಷಿತ ಮೀಸಲಾತಿಯ ಪ್ರಯೋಜನವನ್ನು ಮುಸ್ಲಿಮರು ಪಡೆಯುತ್ತಿದ್ದಾರೆಂದು ಚಾವಂಕೆ ಹೇಳಿದ್ದರು. ‘‘ಸರಕಾರಿ ಸ್ವಾಮ್ಯದ ಕಂಪೆನಿಯೊಂದು ಮುಸ್ಲಿಮರಿಗೆ ಮಾತ್ರವೇ ಉದ್ಯೋಗವನ್ನು ನೀಡಲು ಸಾಧ್ಯವೇ?.. ಪವನ್‌ಹಂಸ್ ನಲ್ಲಿ ಮುಸ್ಲಿಮರಿಗೆ 100 ಶೇಕಡ ಮೀಸಲಾತಿಯೇ ಎಂದು ಚಾವಂಕೆ ಅವರು‘ಜಾಬ್ ಜಿಹಾದ್’ ಹೆಸರಿನ ಟಿವಿ ಕಾರ್ಯಕ್ರಮದ ಟೀಸರ್ ನಲ್ಲಿ ಪ್ರಶ್ನಿಸಿದ್ದರು.

ಈ ಮಧ್ಯೆ ಮುಸ್ಲಿಮರಿಗೆ ಮಾತ್ರವೇ ಅಪ್ರೆಂಟಿಸ್ ಉದ್ಯೋಗ ನೀಡಲಾಗಿದೆ ಎಂದು ಆರೋಪಿಸಿ ದಿಲ್ಲಿಯ ಹಿಂದುತ್ವವಾದಿ ನಾಯಕಿ ರಾಗಿಣಿ ತಿವಾರಿ ನೇತೃತ್ವದಲ್ಲಿ ಸಂಘಪರಿವಾರದ ಬೆಂಬಲಿಗರ ಗುಂಪೊಂದು ಹೊಸದಿಲ್ಲಿಯಲ್ಲಿರುವ ಪವನ್ ಹಂಸ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯ ಸಂದರ್ಭದಲ್ಲಿ ರಾಗಿಣಿ ತಿವಾರಿ ಮತ್ತಿತರರು ಮುಸ್ಲಿಂ ಸಮುದಾಯದ ವಿರುದ್ಧ ನಿಂದನಾತ್ಮಕ ಘೋಷಣೆಗಳನ್ನು ಕೂಗಿದ್ದರೆಂದು ದಿ ವೈರ್ ಸುದ್ದಿಸಂಸ್ಥೆ ವರದಿ ಮಾಡಿದೆ. ಆದರೆ ಸುದರ್ಶನ ಟಿವಿ ವಾಹಿನಿಯ ವರದಿ ಹಾಗೂ ಹಿಂದುತ್ವ ಪ್ರತಿಭಟನಕಾರರ ಆರೋಪ ಸಂಪೂರ್ಣ ವಾಗಿ ಸುಳ್ಳೆಂಬುದನ್ನು ದಿ ವೈರ್ ಸುದ್ದಿ ಜಾಲತಾಣದ ತನಿಖಾ ವರದಿ ಬಹಿರಂಗಪಡಿಸಿದೆ.

► ಸುದರ್ಶನ ಟಿವಿ ಆರೋಪದ ಪೊಳ್ಳುತನ ಬಯಲಿಗೆಳೆದ ದಿ ವೈರ್ 

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯು ಪವನ್ ಹಂಸ್ ಲಿಮಿಟೆಡ್ ಸಂಸ್ಥೆಯ ಪಾಲುದಾರಿಕೆಯೊಂದಿಗೆ ಬಿಎಸ್ಸಿ ಪದವಿಯಲ್ಲಿ ಏರೋನಾಟಿಕ್ಸ್ ಕೋರ್ಸ ನಲ್ಲಿ ಆರಂಭಿಸಿತ್ತು. ಏವಿಯಾನಿಕ್ಸ್ ಹಾಗೂ ಮೆಕ್ಯಾನಿಕಲ್ ವಿಭಾಗಗಳಲ್ಲಿ ತಲಾ 30 ಮಂದಿಯಂತೆ ಒಟ್ಟು 60 ವಿದ್ಯಾರ್ಥಿಗಳು ಈ ಕೋರ್ಸ್ ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳು ತಾವಾಗಿಯೇ ವಾರ್ಷಿಕವಾಗಿ 1.3 ಲಕ್ಷ ಶುಲ್ಕ ಪಾವತಿಸಿ ಈ ಕೋರ್ಸ್ ಕಲಿಯುತ್ತಿದ್ದಾರೆ. ಈ ಒಟ್ಟು ಶುಲ್ಕದಲ್ಲಿ ಶೇ.30ರಷ್ಟು ಹಣವು ವಿಶ್ವವಿದ್ಯಾನಿಲಯಕ್ಕೆ ಹಾಗೂ ಉಳಿದ ಮೊತ್ತವು ಪವನ್‌ಹಂಸ್ ಗೆ ಹೋಗುತ್ತದೆ.

ಆರು ಸೆವಿುಸ್ಟರ್ ಗಳಲ್ಲಿ ಅಭ್ಯರ್ಥಿಯು ಪಡೆಯುವ ಒಟ್ಟು ಅಂಕಗಳನ್ನು ಆಧರಿಸಿ ಪವನ್‌ಹಂಸ್ ಕಂಪೆನಿಗೆ ನೇಮಕಾತಿ ಮಾಡಲಾಗುತ್ತದೆ. ಈ ವರ್ಷ ಒಟ್ಟು 30 ವಿದ್ಯಾರ್ಥಿಗಳು ಸಂದರ್ಶನಕ್ಕಾಗಿ ಆಯ್ಕೆಯಾಗಿದ್ದಾರೆಂದು ಅಭ್ಯರ್ಥಿಯೊಬ್ಬರು ದಿ ವೈರ್ ಪತ್ರಿಕೆಗೆ ತಿಳಿಸಿದ್ದಾರೆ.

ಈ 30 ವಿದ್ಯಾರ್ಥಿಗಳ ಪೈಕಿ ಇಬ್ಬರು ಮುಸ್ಲಿಮರು ಹಾಗೂ ಇಬ್ಬರು ಹಿಂದೂಗಳು ವೈಯಕ್ತಿಕ ಕಾರಣಗಳಿಂದಾಗಿ ಕೋರ್ಸ್ ತ್ಯಜಿಸಿದ್ದರು. ಉಳಿದ 26 ಮಂದಿಯ ಪೈಕಿ ಎರಡೂ ಬ್ರಾಂಚ್ ಗಳಿಂದ ತಲಾ 5 ರಂತೆ ಒಟ್ಟು 10 ವಿದ್ಯಾರ್ಥಿಗಳು ಪವನ್‌ಹಂಸ್ ಗೆ ಆಯ್ಕೆಯಾಗಿದ್ದರು. ಆನಂತರ ಸಂದರ್ಶನದಲ್ಲಿ ಉತ್ತೀರ್ಣಗೊಂಡಿದ್ದ ಮುಸ್ಲಿಂ ವಿದ್ಯಾರ್ಥಿ ಕೂಡಾ ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಹಿಂದೆ ಸರಿದಿದ್ದರು.

ಏವಿಯಾನಿಕ್ಸ್ ಬ್ರಾಂಚ್ ನಿಂದ ಪವನ್‌ಹಂಸ್ ಗೆ ಇಬ್ಬರು ಹಿಂದೂ ಅಭ್ಯರ್ಥಿಗಳು ಆಯ್ಕೆಯಾಗಿದ್ದರೂ ಅವರಿಬ್ಬರೂ ಸೇರ್ಪಡೆಗೊಳ್ಳದಿರಲು ನಿರ್ಧರಿಸಿದ್ದಾರೆ.

ಇಬ್ಬರು ವಿದ್ಯಾರ್ಥಿಗಳಲ್ಲೊಬ್ಬರಾದ ಶುಭ್ ಸೋಲಂಕಿ ಅವರನ್ನು  ದಿ ವೈರ್ ಸಂದರ್ಶಿಸಿದ್ದು, ಅವರು ಹೀಗೆ ವಿವರಣೆ ನೀಡಿದ್ದಾರೆ. ‘‘ನನ್ನ ಸ್ನೇಹಿತೆ ದೀಪ್ತಿ ಗೋಯಲ್ ಹಾಗೂ ನಾನು ನಮ್ಮ ಬ್ಯಾಚ್  ಟಾಪರ್ ಗಳ ಸಾಲಲ್ಲಿದ್ದೆವು. ವೈಯಕ್ತಿಕ ಕಾರಣಗಳಿಂದಾಗಿ ಪವನ್‌ಹಂಸ್ ಗೆ ಸೇರ್ಪಡೆಗೊಳ್ಳದಿರಲು ನಿರ್ಧರಿಸಿದ್ದೇವೆ. ನಾನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಹೀಗಾಗಿ ನಾನು ಅಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಳ್ಳದಿರಲು ನಿರ್ಧರಿಸಿದ್ದೇನೆ. ಪವನ್‌ಹಂಸ್  ನಲ್ಲಿ ಆಯ್ಕೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿದೆ ಹಾಗೂ ಅರ್ಹತೆಯ ಆಧಾರದಲ್ಲಿಯೇ ನೇಮಕಾತಿಯನ್ನು ನಡೆಸಲಾಗುತ್ತದೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಾಗಿರುವುದರಿಂದ ಸಹಜವಾಗಿಯೇ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿರುತ್ತಾರೆ. ಜಾಮಿಯಾದಲ್ಲಿ ಹಿಂದೂ ವಿದ್ಯಾರ್ಥಿಯಾಗಿ   ನಾನು ಯಾವುದೇ ತಾರತಮ್ಯವನ್ನು ಎದುರಿಸಿಲ್ಲ. ನನ್ನ ಸ್ನೇಹಿತರೆಲ್ಲರೂ ಮುಸ್ಲಿಮರು ಎಂದು ಪವನ್‌ಹಂಸ್ ಗೆ ಸೇರ್ಪಡೆಗೊಳ್ಳದಿರಲು ನಿರ್ಧರಿಸಿರುವ ಶುಭ್ ಸೋಲಂಕಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X