ರಾಮಾಯಣದಂತಹ ಮಹಾಕಾವ್ಯಗಳು ಕನ್ನಡ ಪ್ರಾಚೀನ ಸಾಹಿತ್ಯದಲ್ಲೂ ಇವೆ: ಹಂಪ ನಾಗರಾಜಯ್ಯ
ಬೆಂಗಳೂರು, ಎ. 17: ರಾಮಾಯಣದಂತಹ ಉನ್ನತ ಮಹಾಕಾವ್ಯಗಳು ಕನ್ನಡ ಪ್ರಾಚೀನ ಸಾಹಿತ್ಯದಲ್ಲೂ ಇವೆ ಎಂದು ನಾಡೋಜ ಹಂಪ ನಾಗರಾಜಯ್ಯ ಹೇಳಿದ್ದಾರೆ.
ರವಿವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಅಮನ್ ಪ್ರಕಾಶನ ಆಯೋಜಿಸಿದ್ದ ಸಾಹಿತಿ ಹಂಪನಾ ವಿರಚಿತ ‘ಚಾರುವಸಂತ' ಕಾವ್ಯವನ್ನು ಡಾ.ಮಾಹೇರ್ ಮನ್ಸೂರ್ ಹಾಗೂ ಡಾ. ಶಾಕೀರ ಖಾನುಂ ಅವರು ಜಂಟಿಯಾಗಿಹಿಂದಿ ಭಾಷೆಗೆ ಅನುವಾದಿಸಿರುವ 3ನೆ ಆವೃತ್ತಿಯ ಲೋಕಾರ್ಪಣಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕನ್ನಡ ಪ್ರಾಚೀನ ಸಾಹಿತ್ಯವು ವಿಶ್ವದರ್ಜೆಯ ಮಟ್ಟದಲ್ಲಿವೆ. ನಿರಂತರ ಪ್ರಯತ್ನಶೀಲ ಅಧ್ಯಯನದ ಅಗತ್ಯವಿದೆ. ವಿಶ್ವವ್ಯಾಪಿಯಾಗಿ ಶ್ರೇಷ್ಠ ದರ್ಜೆಯ ಪ್ರೇಮದ ವಸ್ತುಗಳಿವೆ. 19 ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ‘ಚಾರುವಸಂತ’ ರೂಪುಗೊಂಡಿದೆ. ಪ್ರಾಕೃತ-ಸಂಸ್ಕøತ ಭಾಷೆಯನ್ನು ಕಲಿತು ರಚಿಸಿದ್ದೆ. ನಿರಂತರ ಅಧ್ಯಯನ ಅಗತ್ಯವಿದೆ ಎಂದರು.
‘ಗುಣಾಢ್ಯನ ಕಥೆ’ ಈ ಸಾಹಿತ್ಯವು ದೇಸೀ ಸಾಹಿತ್ಯವಾಗಿದೆ. ಗುಣಾಢ್ಯನ ಕಥೆಯೂ ಸಹ ವಿಶ್ವಶ್ರೇಷ್ಠ ಸಾಹಿತ್ಯವಾಗಿದೆ. ಈ ಕಥೆಯು ಕನ್ನಡ ಪ್ರಾಚೀನ ಸಾಹಿತ್ಯದ ಕೊಡುಗೆಯಾಗಿದೆ. ಇಂತಹ ಎಲ್ಲ ಕಥೆಗಳು ಜನಸಾಮಾನ್ಯರ ಕಥೆಗಳೇ ಆಗಿವೆ. ಕಥಾಸರಿತ್ಸಾಗರದಂತಹ ಕೃತಿ ಜಗತ್ತಿಗೆ ಪರಿಚಯವಾಗಬೇಕಿದೆ. ಹೀಗಾಗಿ, ರಾಮಾಯಣದಂತಹ ಮಹಾಕಾವ್ಯಗಳಿಗೆ ಸರಿದೂಗುವ ಹಾಗೆ ಕನ್ನಡ ಪ್ರಾಚೀನ ಸಾಹಿತ್ಯವಿದೆ. ಇಂತಹ ಸಾಹಿತ್ಯ ರಚಿಸಲು ನಿರಂತರ ಅಧ್ಯಯನ ಅಗತ್ಯವಿದೆ. ಹಿಂದಿಗೆ ಅನುವಾದ ಗೊಂಡಿರುವ ಈಗಿನ ಕೃತಿಯು 15 ಭಾμÉಗಳಲ್ಲಿ ಅನುವಾದ ಕಂಡಿದೆ ಎಂದು ಹೇಳಿದರು.
ಪತ್ರಕರ್ತ ರವೀಂದ್ರ ಭಟ್ ಕೃತಿಯನ್ನು ಬಿಡುಗಡೆ ಮಾಡಿ, ಚಾರುವಸಂತ ಕಥೆಯು ಪ್ರಾಚೀನವಾದರೂ ವಾಸ್ತವದ ಅಂಶಗಳನ್ನು ಒಳಗೊಂಡಿದ್ದರಿಂದ ಈ ಕೃತಿಯು ಸಾರ್ವಕಾಲಿಕತೆಯನ್ನು ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಸುಂದರ, ಸುಲಲಿತ ಭಾಷೆಯ ಚಾರುವಸಂತ: ಹಿರಿಯ ವಿದ್ವಾಂಸ ಪ್ರೊ. ಅಶ್ವತ್ಥ ನಾರಾಯಣ ಘಟ್ಟಮ ರಾಜು ಕೃತಿಯ ಕುರಿತು ಮಾತನಾಡಿ ‘ಚಾರುವಸಂತ ಕಾವ್ಯವು ದೇಸೀ ಕಾವ್ಯವೆಂದು ಹಂಪನಾ ಹೇಳಿದ್ದಾರೆ. ಆದರೆ, ದೇಸೀ ಸೊಗಡಿದ್ದೂ, ವಿಶ್ವವ್ಯಾಪಿಯಾಗಿದೆ. ಸಾಹಿತ್ಯಾಸಕ್ತ ಯುವಕರು ಸಹ ಈ ಕಾವ್ಯವನ್ನು ಆಸಕ್ತಿಯಿಂದ ಓದಲು ಪ್ರೇರಣೆ ನೀಡುವಂತಿದೆ. ಇಲ್ಲಿಯ ಭಾಷೆಯು ಸುಂದರ, ಸಲಲಿತವಾಗಿದೆ. ಕವಿಯು ಯಾವಾಗಲೂ ಸುಂದರ ಜೀವನ ದರ್ಶನದ ಬಗ್ಗೆ ಮಾತನಾಡುತ್ತಾನೆ. ಇಂತಹ ಸುಂದರ ಪರಿಕಲ್ಪನೆ ಚಾರುವಸಂತದಲ್ಲಿ ವ್ಯಕ್ತವಾಗಿದೆ.. ಆದರೆ, ಪ್ರಾಚೀನ ಕಾವ್ಯದಿಂದ ಯುವಕರು ದೂರ ಸರಿಯುತ್ತಿದ್ದಾರೆ. ಇದು ವಿಷಾದದ ಸಂಗತಿ ಎಂದರು.
ಕೃತಿಯ ಅನುವಾದಕಿ ಡಾ. ಶಾಕೀರ ಖಾನುಂ ಮಾತನಾಡಿ ‘ಕಬೀರದಾಸನ ಸಾಹಿತ್ಯದಲ್ಲಿ ಹೆಣ್ಣಿನ ಸ್ವಾತಂತ್ಯ್ರ ಕುರಿತು ಹೆಚ್ಚಿನ ಪ್ರಸ್ತಾಪವಿಲ್ಲ. ಆದರೆ, ಶಿಶುನಾಳ ಷರೀಫನ ತತ್ವಪದಗಳಲ್ಲಿ ಹೆಣ್ಣಿನ ಸ್ವಾತಂತ್ಯ್ರದ ಹೊಳವುಗಳಿವೆ. ಅದು ಮಹಾಕಾವ್ಯಕ್ಕೆ ಸಾಕ್ಷಿ ನುಡಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ಜಿ.ಎನ್.ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಚನ್ನೇಗೌಡ, ದೂರದರ್ಶನ ಅಧಿಕಾರಿ ಎಚ್. ಎನ್.ಆರತಿ, ಚಾರುವಸಂತ ಹಿಂದಿ ಭಾಷೆ ಕೃತಿ ಅನುವಾದಕರಾದ ಡಾ.ಮಾಹೇರ್ ಮನ್ಸೂರ್ ಹಾಗೂ ಡಾ. ಶಾಕೀರ ಖಾನುಂ, ಅಮನ್ ಪ್ರಕಾಶನದ ರಿಷಬ್ ಬಾಜಪೈ, ಕಾರ್ಯಕ್ರಮ ಸಂಯೋಜಕಿ ಡಾ. ಲಲಿತಾಂಬ, ಪ್ರೆಸ್ ಫೋಟೋಗ್ರಾಫರ್ ಕೆ.ಎಸ್. ಗಣೇಶ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.







