ಗೋಮಾತೆಯ ಮೇವಿನಲ್ಲೂ 40% ತಿಂದವರು, ಈಗ ಮಠಗಳ ಅನುದಾನದಲ್ಲೂ 30% ತಿನ್ನಲು ಕುಳಿತಿದ್ದಾರೆ: ಕಾಂಗ್ರೆಸ್

ಬೆಂಗಳೂರು: ರಾಜ್ಯ ಸರಕಾರದ ವಿರುದ್ಧದ ಕಮಿಷನ್ ಆರೋಪಗಳ ಕುರಿತು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಸಂಬಂಧ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಬಿಜೆಪಿಗೆ ಧರ್ಮ ಎಂದರೆ ಮತ ಪಡೆಯುವ ಹಾಗೂ ಹಣ ಲೂಟಿ ಮಾಡುವ ಟೂಲ್ ಕಿಟ್ ಮಾತ್ರವೇ ಹೊರತು ಅಸಲಿ ಧಾರ್ಮಿಕ ಪ್ರೇಮವಲ್ಲ. ಗೋಮಾತೆಯ ಮೇವಿನಲ್ಲೂ ಶೇ.40 ತಿಂದವರು, ಈಗ ಮಠಗಳ ಅನುದಾನದಲ್ಲೂ 30% ತಿನ್ನಲು ಕುಳಿತಿದ್ದಾರೆ!'' ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ... ಮಠಗಳಿಗೆ ಬಿಡುಗಡೆಯಾಗುವ ಅನುದಾನ ಪಡೆಯಲೂ ಶೇ.30ರಷ್ಟು ಕಮಿಷನ್ ನೀಡಬೇಕಿದೆ: ದಿಂಗಾಲೇಶ್ವರ ಸ್ವಾಮೀಜಿ
'ಬಿಜೆಪಿಗರಿಗೆ, ಸರಕಾರದ ವಿರುದ್ಧ ಆರೋಪ ಮಾಡಿರುವ ಈ ಸ್ವಾಮಿಗಳಿಗೆ ಹಿಂದೂ ವಿರೋಧಿ ಎಂದು ಪಟ್ಟ ಕಟ್ಟದೆ ಆರೋಪಕ್ಕೆ ಉತ್ತರಿಸುವ ಧೈರ್ಯವಿದೆಯೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿಗೆ ಧರ್ಮ ಎಂದರೆ ಮತ ಪಡೆಯುವ ಹಾಗೂ ಹಣ ಲೂಟಿ ಮಾಡುವ ಟೂಲ್ ಕಿಟ್ ಮಾತ್ರವೇ ಹೊರತು ಅಸಲಿ ಧಾರ್ಮಿಕ ಪ್ರೇಮವಲ್ಲ.
— Karnataka Congress (@INCKarnataka) April 18, 2022
ಗೋಮಾತೆಯ ಮೇವಿನಲ್ಲೂ 40% ತಿಂದವರು, ಈಗ ಮಠಗಳ ಅನುದಾನದಲ್ಲೂ 30% ತಿನ್ನಲು ಕುಳಿತಿದ್ದಾರೆ!
Dear @BJP4Karnataka, ಈ ಸ್ವಾಮಿಗಳಿಗೆ ಹಿಂದೂ ವಿರೋಧಿ ಎಂದು ಪಟ್ಟ ಕಟ್ಟದೆ ಆರೋಪಕ್ಕೆ ಉತ್ತರಿಸುವ ಧೈರ್ಯವಿದೆಯೇ? pic.twitter.com/SsYPWncUmE







