ದಲಿತ ಸಂಘರ್ಷ ಸಮಿತಿಯಿಂದ ಐಕ್ಯತಾ ದಿನಾಚರಣೆ

ಮಂಗಳೂರು: ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ)ಯ ವತಿಯಿಂದ ಡಾ. ಬಿ.ಆರ್.ಅಂಬೇಡ್ಕರ್‌ರ ೧೩೧ನೇ ಜನ್ಮದಿನವನ್ನು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ಐಕ್ಯತಾ ದಿನವಾಗಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಸಹ ಸಂಚಾಲಕ ದೇವದಾಸ್ ಬಜ್ಪೆರಾಜ್ಯದಲ್ಲಿ ದಿನಕ್ಕೊಂದು ಕೋಮು ವಿಚಾರವನ್ನು ಮುನ್ನಲೆಗೆ ತಂದು ಸಮಾಜವನ್ನು ಒಡೆಯುವಂತಹ ಕೆಲಸವನ್ನು ಸಂಘ ಪರಿವಾರ ಮಾಡುತ್ತಾ ಬರುತ್ತಿದೆ. ಈ ರೀತಿ ಮುಂದುವರಿದರೆ ರಾಜ್ಯದಲ್ಲಿರುವ ಉದ್ದಿಮೆಗಳು ಬೇರೆ ರಾಜ್ಯಗಳಿಗೆ ಗುಳೇ ಹೋಗುವ ಸಾಧ್ಯತೆಯಿದೆ ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತಾನಾಡಿ ದಲಿತ ಹಾಗೂ ರೈತ ಚಳುವಳಿಗಳು ಒಂದೇ ಆಗಿದೆ. ದೇಶದಲ್ಲಿ ಧಾರ್ಮಿಕ ಅಮಲು ಬೇರುರೂತ್ತಿದೆ. ಇದನ್ನು ಕಿತ್ತು ಹಾಕಲು ರೈತ,ದಲಿತ ಹಾಗೂ ಕಾರ್ಮಿಕ ಚಳುವಳಿಗಳು ವಿಷಯಾಧಾರಿತ ಜಂಟಿ ಹೋರಾಟ ಮಾಡುವ ಆಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ ಗ್ರಾಮೀಣ ಸಂಸ್ಕೃತಿಯನ್ನು ಉಳಿಸುವ ಹಾಗೂ ವಿದ್ಯಾವಂತ ಯುವ ಜನತೆಗೆ ಉದ್ಯೋಗ ಸೃಷ್ಟಿ ಮಾಡುವುದರಲ್ಲಿ ಬಿಜೆಪಿ ವಿಫಲವಾಗಿದೆ. ಇದಕ್ಕಾಗಿ ಎಲ್ಲರೂ ಒಂದಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಬಿ.ಎಂ. ಗೋವಿಂದರಾಜು ಮಾತನಾಡಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ರಘು ಎ.ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು.
ದಲಿತ ಸಂಘರ್ಷ ಸಮಿತಿಗೆ ಸಹಾಯ ನೀಡುತ್ತಿರುವ ಹಲವು ಉದ್ಯೋಗಿಗಳು ಹಾಗೂ ಹಿರಿಯ ದಲಿತ ಹೋರಾಟಗಾರರನ್ನು ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಖಿಲ ಭಾರತ ವಿಚಾರವಾದಿ ವೇದಿಕೆಯ ಅಧ್ಯಕ್ಷ ನರೇಂದ್ರ ನಾಯಕ್ ದಲಿತರು ಹಾಗೂ ಶೋಷಿತರ ಪರ ಈ ಹಿಂದೆಯು ನಿಂತಿದ್ದೆನೆ. ಈಗಲೂ ಇದ್ದೆನೆ. ಮುಂದೆಯೂ ದುಡಿಯುತ್ತೆನೆ ಆದರೆ ಶೋಷಿತರು ಮತ್ತು ದಲಿತರು ಸಹೋದರರಂತೆ ಜೊತೆಯಾಗಿ ಹೆಚ್ಚೆ ಹಾಕಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಸಹ ಸಂಚಾಲಕ ರಮೇಶ್ ಕೊಟ್ಯಾನ್, ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಮತ್ತಿತರರು ಉಪಸ್ಥಿತರಿದ್ದರು.
ದಸಂಸ. ಜಿಲ್ಲಾ ಮಹಿಳಾ ಸಂಘಟನಾ ಸಂಚಾಲಕಿ ಸರೋಜಿಸಿ ಕಾರ್ಯಕ್ರಮ ನಿರೂಪಿಸಿದರ. ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ರಾಕೇಶ್ ಕರಂಬಾರ್ ವಂದಿಸಿದರು.







