ಮಂಗಳೂರು ವಿಮಾನ ನಿಲ್ದಾಣ; ಚಿನ್ನ ಅಕ್ರಮ ಸಾಗಾಟ ಯತ್ನ: ಆರೋಪಿ ಸೆರೆ

ಬಜ್ಪೆ : ಚಿನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಓರ್ವನನ್ನು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಕಾಸರಗೋಡು ಮೂಲದವನೆಂದು ತಿಳಿದು ಬಂದಿದೆ. ಈತನಿಂದ ಸುಮಾರು 10,62,660 ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತ ಸೋಮವಾರ ರಾತ್ರಿ ದುಬೈಯಿಂದ ಆಗಮಿಸಿದ್ದ. ಈತನ ಬಳಿ ಇದ್ದ ಜ್ಯೂಸ್ ಮೆಶಿನ್ ಒಂದನ್ನು ತಪಾಸಣೆಗೆ ಒಳಪಡಿಸಿದಾಗ ಅದರ ಒಳಭಾಗದಲ್ಲಿ ಅಡಗಿಸಿಟ್ಟಿದ್ದ ಚಿನ್ನಾಭರಣವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Story





