ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಡುಪಿ : ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಹಾಗೂ ಆದರ್ಶ ಆಸ್ಪತ್ರೆ ಉಡುಪಿ ಇವರ ಸಹಯೋಗದಲ್ಲಿ ಪ್ರಿವೆನ್ಟೀವ್ ಹೆಲ್ತ್ ಕೇರ್ ಟ್ರೈನಿಂಗ್ ಅಂಡ್ ಚೆಕ್‌ಅಪ್ ಯೋಜನೆಯಡಿ, ಜಿಲ್ಲೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಎ.೧೯ರಿಂದ ಮೇ ೭ರವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದ ವೇಳಾಪಟ್ಟಿ: ಎ.೧೯- ಕುಕ್ಕುಂದೂರು ಅಂಬೇಡ್ಕರ್ ಸಭಾಭವನ ಹಾಗೂ ಹಿರ್ಗಾನ ಗ್ರಾಪಂ ಸಭಾಭವನ, ಎ.೨೦- ದುರ್ಗಾ ಹಾಗೂ ಮಿಯ್ಯಾರು ಗ್ರಾಪಂ ಸಭಾಭವನ, ಎ.೨೨- ಇನ್ನಾ ಹಾಗೂ ಸಾಣೂರು ಗ್ರಾಪಂ ಸಭಾಭವನ, ಎ.೨೩- ಪಿಲಿಯೂರು ಬೋಳಾ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಎ.೨೪- ಮುಂಡ್ಕೂರು ಹಾಗೂ ರೆಂಜಾಳ ಗಾಪಂ ಸಭಾಭವನ, ಎ.೨೬- ಬೆಳ್ಮಣ್ ಹಾಗೂ ಪಳ್ಳಿ ಗ್ರಾಪಂ ಸಭಾಭವನ.
ಎ.೨೭ರಂದು ನಿಟ್ಟೆ ಹಾಗೂ ಮುಡಾರು ಗಾಪಂ ಸಭಾಭವನ, ಎ.೨೮- ನಲ್ಲೂರು ಹಾಗೂ ಈದು ಗ್ರಾಪಂ ಸಭಾಭವನ, ಎ.೨೯-ಮಾಳ ಹಾಗೂ ಕೇರ್ವಾಶೆ ಗ್ರಾಪಂ ಸಭಾಭವನ, ಎ.೩೦-ಶಿರ್ಲಾಲು ಹಾಗೂ ನೀರೆ ಗ್ರಾಪಂ ಸಭಾಭವನ, ಮೇ ೨- ಬೈಲೂರು ಹಾಗೂ ಮರ್ಣೆ ಗ್ರಾಪಂ ಸಭಾಭವನ, ಮೇ ೩-ಕಡ್ತಲ ಗ್ರಾಪಂ ಸಭಾಭವನ ಹಾಗೂ ಕಲ್ಯಾ ಸರ್ಕಾರಿ ಪ್ರೌಢಶಾಲೆ, ಮೇ ೪- ಇರ್ವತ್ತೂರು ಹಾಗೂ ಎರ್ಲಪಾಡಿ ಗ್ರಾಪಂ ಸಭಾಭವನ, ಮೇ ೫- ವರಂಗ ಹಾಗೂ ಮುದ್ರಾಡಿ ಗ್ರಾಪಂ ಸಭಾಭವನ, ಮೇ ೬- ಹೆಬ್ರಿ ಹಾಗೂ ಶಿವಪುರ ಗ್ರಾಪಂ ಸಭಾಭವನ ಮತ್ತು ಮೇ ೭- ಚಾರಾ ಗ್ರಾಪಂ ಸಭಾಭವನದಲ್ಲಿ ಬೆಳಗ್ಗೆ ೧೦:೩೦ರಿಂದ ಸಂಜೆ ೬ರವರೆಗೆ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
೧೮ರಿಂದ ೬೦ ವರ್ಷದೊಳಗಿನ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರು, ಕಟ್ಟಡ ಕಾರ್ಮಿಕ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿ, ಆಧಾರ್ ಗುರುತಿನ ಚೀಟಿಯ ಜೆರಾಕ್ಸ್ ಹಾಗೂ ರೇಷನ್ ಕಾರ್ಡ್‌ನ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.