ಎ.21ರಂದು ಅಪ್ರೆಂಟಿಸ್ ಮೇಳ
ಉಡುಪಿ : ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ರಾಷ್ಟ್ರೀಯ ಅಪ್ರೆಂಟಿಸ್ ಮೇಳವು ಎ.೨೧ರಂದು ಬೆಳಿಗ್ಗೆ ೯:೩೦ಕ್ಕೆ ಮಣಿಪಾಲ ಪ್ರಗತಿನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆಯಲಿದೆ.
ಐಟಿಐ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿ ಕೊಂಡು ಮೇಳದಲ್ಲಿ ಹಾಜರಿರಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ನಂ: ೯೯೦೦೩೨೯೬೬೮, ೯೯೬೪೦೨೭೫೦೪, ೯೯೬೪೨೩೭೬೩೨, ೯೮೪೫೨೫೦೮೬೭ ಅನ್ನು ಸಂಪರ್ಕಿಸುವಂತೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





