ಪಾಂಬೂರು: ಕೊಂಕಣಿ ಕವಿ ಎರಿಕ್ ಒಝೇರಿಯೊಗೆ ಸನ್ಮಾನ

ಶಿರ್ವ : ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ‘ಪರಿಚಯ’ ಪಾಂಬೂರು ಇದರ ವತಿಯಿಂದ ರವಿವಾರ ಪಾಂಬೂರು ಪವಿತ್ರ ಶಿಲುಬೆಯ ದೇವಾಲಯದ ಪ್ರಾಂಗಣದಲ್ಲಿ ಮಂಗಳೂರು ಮಾಂಡ್ ಸೊಬಾಣ್ ತಂಡದವ ರಿಂದ ಏರ್ಪಡಿಸಲಾದ ಏಕ್ ಸಂಗೀತ್ ಸೋಬಾಣ್ ಕಾರ್ಯಕ್ರಮದಲ್ಲಿ ಕೊಂಕಣಿ ಕವಿ, ಸಂಘಟಕ ವಿಶ್ವ ಕೊಂಕಣಿ ಕಲಾರತ್ನ ಎರಿಕ್ ಒಝೇರಿಯೊ ಅವರನ್ನು ಪತ್ನಿ ಜೋಯ್ಸ್ ಒಝೇರಿಯೊ ಸಹಿತ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉಡುಪಿ ಶೋಕಮಾತಾ ಚರ್ಚ್‌ನ ಪ್ರಧಾನ ಧರ್ಮ ಗುರು ರೆ.ಪಾ.ಚಾರ್ಲ್ಸ್ ಮಿನೇಜಸ್, ಪಾಂಬೂರು ಪವಿತ್ರ ಶಿಲುಬೆಯ ಚರ್ಚ್‌ನ ಪ್ರಧಾನಗುರು ರೆ.ಪಾ.ಹೆನ್ರಿ ಮಸ್ಕರೇನ್ಹಸ್ ಆಶೀರ್ವಚನ ನೀಡಿದರು. ಎರಿಕ್‌ರ ಶಿಕ್ಷಣ ಮತುತಿ ಹೋರಾಟದ ಬಗ್ಗೆ ಟಾಯ್ಟಸ್ ನೊರೋನ್ಹಾ ತಾಕೋಡೆ, ಮಾಂಡ್ ಸೊಬಾಣ್, ಕಲಾಂಗಣ್ ಮತ್ತು ಕೊಂಕಣಿ ಸಾಧನೆಗಳ ಬಗ್ಗೆ ಐರಿನ್ ರೆಬೆಲ್ಲೊ ಮಂಗಳೂರು, ಎರಿಕ್ ರವರ ಕವಿ, ಕವಿತೆ ಮತ್ತು ಸಂಗೀತ ಕ್ಷೇತ್ರದ ಮೈಲುಗಲ್ಲುಗಳ ಬಗ್ಗೆ ರೇಗೋ ತಾಕೋಡೆ ಮಾತನಾಡಿದರು.
ಪರಿಚಯ ಪ್ರತಿಷ್ಠಾನದ ಮೆನೆಜಿಂಗ್ ಟ್ರಸ್ಟಿ ಡಾ.ವಿನ್ಸೆಂಟ್ ಆಳ್ವ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಅನಿಲ್ ಡೇಸಾ ವಂದಿಸಿದರು. ವಿತೋರಿ ಕಾರ್ಕಳ್ ಕಾರ್ಯಕ್ರಮ ನಿರೂಪಿಸಿದರು. ನಂತರ ಮಾಂಡ್‌ಸೊಬಾಣ್ ಕಲಾವಿರಿಂದ ಗೀತಾಗಾಯನ ಕಾರ್ಯಕ್ರಮ ಜರಗಿತು.