ಉಡುಪಿ; ಕಿಟಕಿ ಮೂಲಕ ಚಿನ್ನಾಭರಣ ಕಳವು: ಆರೋಪಿ ಬಂಧನ

ಗುರುರಾಜ್
ಉಡುಪಿ : ಮನೆಯ ಕಿಟಕಿ ಮೂಲಕ ಚಿನ್ನಾಭರಣ ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬ ನನ್ನು ಉಡುಪಿ ಪೊಲೀಸರು ಕುಕ್ಕಿಕಟ್ಟೆ ರೈಲ್ವೇ ಬ್ರಿಡ್ಜ್ ಬಳಿ ಬಂಧಿಸಿದ್ದಾರೆ.
ಇಂದ್ರಾಳಿ ಮಂಚಿಕೆರೆಯ ದುರ್ಗಾನಗರದ ಗುರುರಾಜ್ ನಾಯ್ಕ್(35) ಬಂಧಿತ ಆರೋಪಿ.
ಈತ ಮಾ.25ರಂದು ರಾತ್ರಿ ಗುಂಡಿಬೈಲು ಪಾಡಿಗಾರ ರಸ್ತೆಯ ಸುನೀತಾ ಎಂಬವರ ಮನೆಯ ಹಾಲ್ ಟಿಪಾಯಿ ಮೇಲೆ ಇಟ್ಟಿದ್ದ 3.60 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಿಟಕಿಯ ಮೂಲಕ ಕಳವು ಮಾಡಿಕೊಂಡು ಹೋಗಿದ್ದನು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಕಳವಾಗಿದ್ದ ಚಿನ್ನದ ಸರ ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಸ್ಕೂಟರ್ನ ಸಮೇತ ಬಂಧಿಸಿದರು. ಬಂಧಿತನನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
Next Story