ಗ್ರಾಮಮಟ್ಟದ ಕಾರ್ಯಕರ್ತರ ಜೊತೆ ಶಾಸಕ ಮಂಜುನಾಥ ಭಂಡಾರಿ ಸಮಾಲೋಚನೆ

ಮಂಗಳೂರು : ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸೋಮವಾರ ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಜಾಲ್ಸೂರು, ಆರಂತೋಡು, ಗುತ್ತಿಗಾರು, ಬೆಳ್ಳಾರೆಯ ಮತ್ತಿತರ ಕ್ಷೇತ್ರಗಳ ಗ್ರಾಪಂ ಮಟ್ಟದಲ್ಲಿ ಕಾಂಗ್ರೆಸ್‌ನ ಪ್ರತಿನಿಧಿಗಳು, ಪಕ್ಷದ ಪ್ರಮುಖ ಕಾರ್ಯಕರ್ತರು, ನಾಯಕರ ಸಮಾಲೋಚನೆ ನಡೆಸಿದರು.
೧೫ನೇ ಹಣಕಾಸು ಅನುದಾನ ಹಂಚಿಕೆ ತಾರತಮ್ಯ ಸಹಿತ ಹತ್ತಾರು ಸಮಸ್ಯೆಗಳನ್ನು ಗ್ರಾಪಂ ಸದಸ್ಯರು ಮುಂದಿಟ್ಟರು. ಅಲ್ಲದೆ ಇ-ಸ್ವತು, ನಮ್ಮ ಗ್ರಾಮ ನಮ್ಮ ಯೋಜನೆಯ ಅನುಷ್ಠಾನದಲ್ಲಿರುವ ಲೋಪದೋಷಗಳ ಬಗ್ಗೆಯೂ ಗಮನ ಸೆಳೆದರು.
ಈ ಸಂದರ್ಭ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ಸುಭಾಷ್ ಚಂದ್ರ ಶೆಟ್ಟಿ ಕೊಳ್ನಾಡು. ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪಿ.ಸಿ. ಜಯರಾಮ್ ಉಪಸ್ಥಿತರಿದ್ದರು.
Next Story





