ಕಮಿಷನ್ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಕುಮ್ಮಕ್ಕು: ಸಿದ್ದರಾಮಯ್ಯ ಆರೋಪ

ಚಾಮರಾಜನಗರ: ರಾಜ್ಯ ಸರ್ಕಾರ ಗುತ್ತಿಗೆದಾ ರರಿಂದ ಶೇ .40 ರಷ್ಟು ಕಮಿಷನ್ ಪಡೆಯುತ್ತಿರುವ ಸಂಬಂಧ ಸಂಘದವರು ಪ್ರಧಾನಿಗೆ ಪತ್ರ ಬರೆದಿರುವ ಕುರಿತು ಪ್ರಧಾನ ಮಂತ್ರಿಯವರಿಗೆ ನರೇಂದ್ರ ಮೋದಿಗೆ ದೈರ್ಯ ಇದ್ದರೆ ತನಿಖೆ ಮಾಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು .
ಚಾಮರಾಜನಗರದ ಹಳೆಯ ಬಸ್ ನಿಲ್ದಾಣದ ಬಳಿ ಇರುವ ಮಾರಿಗುಡಿ ಮುಂಭಾಗ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ರ್‍ಯಾಲಿ ಉದ್ಘಾಟಿಸಿ ಮಾತನಾಡಿದರು .
'ರಾಜ್ಯದ ಇತಿಹಾಸದಲ್ಲಿ ಕಳೆದ 75 ವರ್ಷಗಳಲ್ಲಿ ಕಮಿಷನ್ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪತ್ರ ಬರೆದಿರುವುದು ಇದೇ ಮೊದಲು , ಈ ಸಂಬಂಧ ನರೇಂದ್ರಮೋದಿ ಅವರು ತನಿಖೆ ಮಾಡಿಸುವ ಬದಲು ಮೌನವಾಗಿರುವುದನ್ನು ನೋಡಿದರೆ ಇದಕ್ಕೆ ನರೇಂದ್ರ ಮೋದಿ ಅವರ ಕುಮ್ಮಕ್ಕು ಇದೆ ಎಂದು ಅರ್ಥ ಅಲ್ವಾ' ಎಂದು ಪ್ರಶ್ನಿಸಿದರು .
'ರಾಜ್ಯದಲ್ಲಿ ಹಿ೦ದೆ೦ದೂ ಕೇಳರಿಯದ೦ತಹ ಭ್ರಷ್ಟ ಸರ್ಕಾರವಿದೆ . ಇಡೀ ರಾಜ್ಯದ ಜನರು ಹಾಗೂ ಅಧಿ ಕಾರಿಗಳು ಮಾತನಾಡು ತ್ತಿದ್ದಾರೆ . ಶೇ .40 ರಷ್ಟು ಕಮಿಷನ್ ಕೊಟ್ಟು ಗುಣಮಟ್ಟದ ಕೆಲಸ ಮಾಡಲು ಸಾಧ್ಯವಿಲ್ಲ . ಸರ್ಕಾರ ಕಿರುಕುಳ ಕೊಡುತ್ತಿದ್ದು , ಇದನ್ನು ತಪ್ಪಿಸಿ ಕೂಡಲೇ ಕ್ರಮಕೈಗೊಳ್ಳುವಂತೆ ಸಂಘದ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದಿದ್ದಾರೆ . ಪತ್ರದ ಕಾಪಿ ನನ್ನ ಬಳಿ ಕೂಡ ಇದೆ ಎಂದರು . ದೇಶದಲ್ಲಿ ಇಲ್ಲಿಯ ತನಕ ಅನೇಕ ಪ್ರಧಾನಿಗಳು ಬಂದಿದ್ದಾರೆ . ಮೋದಿಯಷ್ಟು ಸುಳ್ಳು ಹೇಳಿದವರು ಯಾರೂ ಇಲ್ಲ . ಕೊಟ್ಟ ಭರವಸೆಯನ್ನು ಯಾವುದನ್ನು ಈಡೇರಿಸಿಲ್ಲ . ರಾಜ್ಯಾದ್ಯಂತ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಪಕ್ಷ 5 ದಿನಗಳವರೆಗೆ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಜನಜಾಗೃತಿ ಮೂಡಿಸಲಾಗುತ್ತಿದೆ . 2 ನೇ ಹಂತದಲ್ಲಿ ಎಲ್ಲ ವಿಧಾನಸಭಾ ಕೇಂದ್ರಗಳಲ್ಲಿ ಪ್ರತಿಭಟನಾ ಅಭಿಯಾನ ಮಾಡಲು ಚಿಂತಿಸಲಾಗಿದೆ . ದೇಶ ಹಾಗೂ ರಾಜ್ಯದಲ್ಲಿ ದುರಾಡಳಿತ ಮಾಡುತ್ತಿರುವ ರೈತ ವಿರೋಧಿ ಸರ್ಕಾರ ಕಾಣುತ್ತಿದ್ದೇವೆ . 45 ವರ್ಷಗಳ ನನ್ನ ರಾಜಕಾರಣದಲ್ಲಿ ಇಷ್ಟು ಭ್ರಷ್ಟ ಸರ್ಕಾರವನ್ನು ಜೀವನದಲ್ಲಿ ನೋಡಿರಲಿಲ್ಲ' ಎಂದು ತಿಳಿಸಿದರು .
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸಿಲಿಂಡರ್ ಬೆಳೆ 414 ರೂ . ಇತ್ತು . ಈಗ 1050 ರೂ . ಇದೆ . ಇದಕ್ಕೆ ನರೇಂದ್ರಮೋದಿ ಕಾರಣರಾಗಿದ್ದಾರೆ . ಡಾ. ಮನಮೋಹನ್ ಸಿಂಗ್ ಇದ್ದಾಗ ಪೆಟ್ರೋಲ್ ಬೆಲೆ 68 ರೂ . , ಡೀಸೆಲ್ 46 ರೂ . ಇತ್ತು . ಈಗ ಪೆಟ್ರೋಲ್ ರೂ . ಡೀಸೆಲ್ 97 ರೂ . ಇದೆ . ಜನರನ್ನು ಸುಲಿಗೆ ಮಾಡಲಾಗುತ್ತಿದೆ . ಗೊಬ್ಬರ , ಸಿಮೆಂಟ್ , ಕಬ್ಬಿಣ , ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ . ಡಿಎಪಿ ಗೊಬ್ಬರ 50 ಕೆಜಿ ಬ್ಯಾಗ್ಗೆ 150 ರೂ . ಏರಿಕೆ ಮಾಡಲಾಗಿದೆ . ಪೊಟ್ಯಾಷ್ , ಯೂರಿಯಾ ಎಲ್ಲ ಬೆಲೆ ಏರಿಕೆಯಾಗಿದೆ ಎಂದು ಹೇಳಿದರು .
ರಾಜ್ಯದಲ್ಲಿ 15 ಲಕ್ಷ ಟನ್ ರಾಗಿ ಬೆಳೆದಿದ್ದಾರೆ . 1.90 ಲಕ್ಷ ಟನ್ ಮಾತ್ರ ಖರೀದಿ ಮಾಡಿದ್ದಾರೆ . ಉಳಿದ ರಾಗಿ ಏನು ಮಾಡಬೇಕು . ರೈತರಿಗೆ ಒಂದು ಕ್ವಿಂಟಾಲ್ ರಾಗಿಗೆ 1,500 ರೂ . ನಷ್ಟವಾಗುತ್ತಿದೆ . ಭತ್ತ , ತೊಗರಿ , ಮೆಕ್ಕೆಜೋಳ , ಅರಿಶಿಣ ಖರೀದಿಸುವವರಿಲ್ಲ . ನಿಮ್ಮ ಕೈಯಲ್ಲಿ ಆಗದಿದ್ದ ಮೇಲೆ ಯಾಕೆ ಸರ್ಕಾರದಲ್ಲಿ ಇದ್ದೀರ ಎಂದರು . ಈ ಸರ್ಕಾರ ಬಂದು 3 ವರ್ಷ ಆಯಿತು . ಒಂದೇ ಒಂದು ಮನೆ ಮಂಜೂರು ಮಾಡಲಾಗಿಲ್ಲ . ನಾನು ಕೊಟ್ಟಿರುವ ದುಡ್ಡ ಕೊಟ್ಟಿಲ್ಲ . ನಾನು ಸಿಎಂ ಆಗಿದ್ದಾಗ 5 ವರ್ಷದಲ್ಲಿ 15 ಲಕ್ಷ ಮನೆ ನಿರ್ಮಿಸಿದ್ದೆ . ಎಸ್ಸಿ , ಎಸ್ಟಿ ವರ್ಗಕ್ಕೆ ಕಾನೂನು ಮಾಡಿ ಎಸ್ಇಪಿ , ಟಿಎಸ್ಪಿ ಹಣ ಆ ವರ್ಗಗಳಿಗೆ ಖರ್ಚು ಮಾಡಲು ಕಾನೂನು ಮಾಡಿದ್ದು ನಮ್ಮ ಸರ್ಕಾರ . ಎಸ್ಸಿ , ಎಸ್ಟಿ ವರ್ಗದವರಿಗೆ ಅನ್ಯಾಯ ಮಾಡಿದ್ದು ದಲಿತ ವಿರೋಧಿ ಸರ್ಕಾರವಾಗಿದೆ . ಶಾದಿ ಭಾಗ್ಯ , ಶೂ ಭಾಗ್ಯ , ಪಶುಭಾಗ್ಯ , ಇಂದಿರಾ ಕ್ಯಾಂಟಿನ್ , ವಿದ್ಯಾಸಿರಿ ಯೋಜನೆಗಳಿಲ್ಲ ಎಂದು ಹೇಳಿದರು .







