ಖ್ಯಾತ ವೈದ್ಯ ಡಾ. ಶಾಂತಾರಾಮ ಶೆಟ್ಟಿ ಫೇಸ್‌ಬುಕ್ ಖಾತೆ ಹ್ಯಾಕ್: ದೂರು

ಮಂಗಳೂರು : ಹಿರಿಯ ಎಲುಬು ತಜ್ಞ ಡಾ.ಶಾಂತಾರಾಮ ಶೆಟ್ಟಿ ಅವರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಈ ಬಗ್ಗೆ ಅವರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಎ.18ರಂದು ಸಂಜೆ 7 ಗಂಟೆ ಸುಮಾರಿಗೆ ಅವರ ಸ್ನೇಹಿತರು ಕರೆ ಮಾಡಿ ಫೇಸ್‌ಬುಕ್ ಹ್ಯಾಕ್ ಆಗಿರುವ ಬಗ್ಗೆ ಡಾ.ಶಾಂತಾರಾಮ ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದರು.
ಫೋರೆಕ್ಸ್ ಟ್ರೇಡ್‌ಗೆ ಸಂಬಂಧಿಸಿದ ಕೆಲವು ಮೆಸೇಜ್‌ಗಳು ಬರುತ್ತಿದ್ದು, ಫೇಸ್‌ಬುಕ್ ಹ್ಯಾಕ್ ಮಾಡಿ ಯಾರೋ ಕಳುಹಿಸುತ್ತಿದ್ದಾರೆ ಎಂಬುದಾಗಿ ತಿಳಿಸಿದ್ದರು.
ಡಾ.ಶಾಂತಾರಾಮ ಶೆಟ್ಟಿ ಅವರ ಸ್ನೇಹಿತರಿಗೆ ಈ ಮೆಸೇಜ್‌ಗಳನ್ನು ಅಗಂತುಕರು ಕಳುಹಿಸಿದ್ದು, ಅವರ ಹಳೆ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿರುವುದು ಕಂಡುಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಡಾ.ಶಾಂತಾರಾಮ ಶೆಟ್ಟಿ ಅವರು ಮಂಗಳವಾರ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
Next Story