ಮುನಿಯಾಲು: ಉಚಿತ ಆರೋಗ್ಯ ತಪಾಸಣೆ
ಉಡುಪಿ : ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಪ್ರತಿ ಗುರುವಾರ ಪೂರ್ವಾಹ್ನ 9ರಿಂದ ಸಂಜೆ 5 ಘಂಟೆಯವರೆಗೆ ಆರ್ಥಿಕವಾಗಿ ಹಿಂದುಳಿದ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಕ್ಕರೆ ಕಾಯಿಲೆ, ಬೊಜ್ಜುತನ ಮುಂತಾದ ಜೀವನಶೈಲಿ ಕಾಯಿಲೆಗಳು, ಶ್ವಾಸಕೋಶದ ತೊಂದರೆಗಳು, ಚರ್ಮರೋಗಗಳು, ಜೀರ್ಣಾಂಗದ ಸಮಸ್ಯೆಗಳು, ಸಂಧಿವಾತ, ನರದೌರ್ಬಲ್ಯ, ಮುಟ್ಟಿನ ಸಮಸ್ಯೆಗಳು, ರಕ್ತಹೀನತೆ, ಕೂದಲುದುರುವಿಕೆ, ಗುದನಾಳದ ಸಮಸ್ಯೆಗಳು ಹಾಗೂ ಇತರ ಕಾಯಿಲೆಗಳಿಗೆ ಹೊರರೋಗಿ ವಿಭಾಗದಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿ ಔಷಧಿಗಳನ್ನು ನೀಡಲಾ ಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Next Story





