ಮುಂದಿನ ಬಾರಿ ಚಾಮುಂಡೇಶ್ವರಿಯಲ್ಲೇ ಗೆದ್ದು ಕುಮಾರಸ್ವಾಮಿ ಸಿಎಂ ಆಗ್ತಾರೆ: ವಿಧಾನಪರಿಷತ್ ಸದಸ್ಯ ಮಂಜೇಗೌಡ

ಕುಮಾರಸ್ವಾಮಿ
ಚಾಮರಾಜನಗರ: ಮುಂಬರುವ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರು ಸ್ಪರ್ಧೆ ಮಾಡೇ ಮಾಡುತ್ತಾರೆ . ಇದು ನೂರಕ್ಕೆ ನೂರು ಸತ್ಯ ಎಂದು ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣಕ್ಕೆ ಜನತಾ ಜಲಧಾರೆ ಕಾರ್ಯ ಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡಿದ ವಿಧಾನ ಪರಿಷತ್ ಸದಸ್ಯ ಮಂಜೇಗೌಡ , ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಚಾಮುಂಡೇಶ್ವರಿ ಕ್ಷೇತ್ರ ದಿಂದಲೇ ಸ್ಪರ್ಧಿಸಬೇಕೆಂದು ನಾವೆಲ್ಲರೂ ಒತ್ತಾಯಿಸಿದ್ದೇವೆ . ಅಲ್ಲಿ ಸ್ಪರ್ಧಿಸಿ ಗೆದ್ದು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರು.
ಜಿಟಿ ದೇವೇಗೌಡರು ನನ್ನ ಸ್ನೇಹಿತರು , ಮೇಧಾವಿಗಳು . ಆದರೆ ಅವರು ನೂರಕ್ಕೆ ನೂರು ಜಾತ್ಯಾತೀತ ಜನತಾದಳದಲ್ಲಿ ಇರುವುದಿಲ್ಲ . ಈಗಾಗಲೇ ನಮ್ಮ ಪಕ್ಷದಿಂದ ವಿಮುಖರಾಗಿದ್ದಾರೆ ಎಂದು ಹೇಳಿದರು .
ಎಚ್.ಡಿ.ಕುಮಾರಸ್ವಾಮಿ ರವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಬರೀ ನಾಮಪತ್ರ ಸಲ್ಲಿಸಿ ಹೋಗಲಿ , ನಾವು ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದರು . ತಿ.ನರಸೀಪುರ ಕ್ಷೇತ್ರದ ಶಾಸಕ ಅಶ್ವಿನ್ ಕುಮಾರ್ , ಜಾ.ದಳದ ಮಂಜುನಾಥ್ ಹಾಜರಿದ್ದರು







