ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ, ನಮಗೆ ಅನ್ಯಾಯ ಮಾಡಬೇಡಿ: ಅಲ್ಮಾಸ್
ಶಿಕ್ಷಣ ಸಚಿವರಿಗೆ ಟ್ವಿಟರ್ ನಲ್ಲಿ ಮನವಿ ಮಾಡಿದ ವಿದ್ಯಾರ್ಥಿನಿ
ಫೈಲ್ ಫೋಟೊ
ಉಡುಪಿ : ದ್ವಿತೀಯ ಪಿಯು ಪರೀಕ್ಷೆಗೆ ಹಿಜಾಬ್ ಅನುಮತಿಸುವುದಿಲ್ಲ ಎಂಬ ಶಿಕ್ಷಣ ಸಚಿವರ ಹೇಳಿಕೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ, ಹೈಕೋರ್ಟ್ ಮೆಟ್ಟಿಲೇರಿದ್ದ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಲ್ಮಾಸ್ ಎ.ಎಚ್., ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ನಮಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
‘ಪರೀಕ್ಷೆಗಳಲ್ಲಿ ಹಿಜಾಬ್ ಅನ್ನು ಅನುಮತಿಸಲಾಗುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಶಿಕ್ಷಣ ಮಂತ್ರಿಯಾಗಿರುವ ನೀವು ತುಂಡು ಬಟ್ಟೆಗಾಗಿ ಶಿಕ್ಷಣವನ್ನು ನಿರಾಕರಿಸುವುದು ಸರಿಯೇ ? ನಾನು ಬಹಳ ಸಮಯ ದಿಂದ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಅದೆಲ್ಲವೂ ವ್ಯರ್ಥವಾಯಿತು. ನಮಗೆ ಅನ್ಯಾಯ ಮಾಡಬೇಡಿ. ಪರೀಕ್ಷೆ ಬರೆಯಲು ನಮಗೆ ಅವಕಾಶ ನಿಡಿ ಎಂದು ವಿದ್ಯಾರ್ಥಿನಿ ಅಲ್ಮಾಝ್ ಎ.ಎಚ್. ಟ್ವೀಟ್ನಲ್ಲಿ ತಿಳಿಸಿದ್ದಾರೆ.
Hijab not allowed during II PUC exams, says @BCNagesh_bjp. Being Edu Minister, is it just for you to deny education for piece of cloth? I had been preparing for my exams since long, all that would go in vain. Don't do this injustice to us sir. Allow us!https://t.co/Qo7OkVMz9I
— Almas (@Ah_Almas12) April 19, 2022