ಕೋಡೂರ್ ವೆಂಕಟೇಶ್-ವೀರೇಶ್ ಬೆಳ್ಳೂರುಗೆ ದತ್ತಿ ಪ್ರಶಸ್ತಿ
ಬೆಂಗಳೂರು, ಎ. 19: ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ “ಮಾಹಿತಿ ಹಕ್ಕು ತಜ್ಞ ಜೆ.ಎಂ. ರಾಜಶೇಖರ ದತ್ತಿ ಪ್ರಶಸ್ತಿ”ಗೆ 2021ರ ಸಾಲಿಗೆ ಮಾಹಿತಿ ಹಕ್ಕು ಕಾರ್ಯಕರ್ತರಾದ ಡಾ. ಕೋಡೂರ್ ವೆಂಕಟೇಶ್ ಅವರನ್ನು ಹಾಗೂ 2022ರ ಸಾಲಿಗೆ ಮಾಹಿತಿ ಹಕ್ಕು ಕಾರ್ಯಕರ್ತರಾದ ವೀರೇಶ್ ಬೆಳ್ಳೂರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಪ್ರಶಸ್ತಿಯ ಮೊತ್ತ ತಲಾ ರೂ. 5,000 (ಐದು ಸಾವಿರ ಮಾತ್ರ) ನಗದು. ಇದರ ಜೊತೆಗೆ ಸ್ಮರಣಿಕೆ ಹಾಗೂ ಫಲ ತಾಂಬೂಲಗಳನ್ನೂ ಒಳಗೊಂಡಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
Next Story





