ಪ್ರಕಾಶಕರ ಸಂಘದ ಪ್ರಶಸ್ತಿ ಪ್ರಕಟ: ಎ.23ಕ್ಕೆ ಪ್ರಶಸ್ತಿ ಪ್ರದಾನ
ಬೆಂಗಳೂರು, ಎ.19: ಕರ್ನಾಟಕ ಪ್ರಕಾಶಕ ಸಂಘದ ವತಿಯಿಂದ ನೀಡುವ ಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಿಕ ಪ್ರಶಸ್ತಿಗೆ ಪ್ರಕಾಶ್ ಗಿರಿಮಲ್ಲಣ್ಣನವರ್ ಹಾಗೂ ನಂಜನಗೂಡು ತಿರುಮಲಾಂಬ ಮಹಿಳಾ ಪ್ರಕಾಶಕಿ ಪ್ರಶಸ್ತಿಗೆ ವಸಂತ ಶ್ರೀನಿವಾಸನ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಗಳು ತಲಾ 15 ಸಾವಿರ ರೂ.ಗಳು ಹೊಂದಿವೆ.
ವಿಶ್ವ ಪುಸ್ತಕ ದಿನದ ಅಂಗವಾಗಿ ಎ.23ರಂದು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದು ಸಂಘವು ಪ್ರಕಟನೆಯಲ್ಲಿ ತಿಳಿಸಿದೆ.
Next Story





