ಮಂಗಳೂರು : ಮುಸ್ಲಿಂ ಲೀಗ್ ವತಿಯಿಂದ ಅಕ್ಕಿ ವಿತರಣೆ

ಮಂಗಳೂರು : ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಮುಸ್ಲಿಂ ಲೀಗಿನ ಪಾತ್ರ ಮಹತ್ವದ್ದು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಸಾಮೂಹಿಕ ಅಕ್ಕಿ ವಿತರಣಾ ಸಮಾರಂಭದಲ್ಲಿ ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ ಮಾತನಾಡಿದರು.
ಸಮಾರಂಭ ಅಧ್ಯಕ್ಷತೆ ಯನ್ನು ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಕೆ ಎಂ ಫಯಾಝ್ ವಹಿಸಿದ್ದರು. ವೇದಿಕೆಯಲ್ಲಿ ಲೀಗ್ ಪದಾಧಿಕಾರಿಗಳಾದ ಟಿ ಯು ಇಸ್ಮಾಯಿಲ್ ಬಂಟ್ವಾಳ್, ಹಾಜಿ ಅಬ್ದುಲ್ ರಹ್ಮಾನ್, ಹಾಜಿ ಮುಹಮ್ಮದ್ ಬಿ ಎ. ರಿಯಾಝ್ ಹರೇಕಳ, ಬಶೀರ್, ಅಬ್ದುಲ್ ಖಾದರ್ ಜೆಪ್ಪು, ಅಬ್ದುಲ್ ಹಮೀದ್ ಬಂಗೇರುಕಟ್ಟೆ ಮುಂತಾದವರು ಉಪಸ್ಥಿತರಿದ್ದರು. ಮುಹಮ್ಮದ್ ಇಸ್ಮಾಯಿಲ್ ಸ್ವಾಗತಿಸಿ ವಂದಿಸಿದರು.
Next Story





