ಉಡುಪಿ ಸರಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ರ್ಯಾಂಕ್

ರಮಾ, ಪ್ರತೀಕ್ಷಾ, ಪ್ರೀತಿ, ಅಕ್ಷತಾ ರಾವ್
ಅಹನಾ, ಸುಮಿತ್ರಾ, ಆಲ್ಫಾ ಅಫ್ರೀನ್
ಉಡುಪಿ : ಮಂಗಳೂರು ವಿಶ್ವವಿದ್ಯಾನಿಲಯದ 2021ನೇ ಸಾಲಿನಲ್ಲಿ ನಡೆಸಿದ ಸ್ನಾತಕೋತ್ತರ ಮತ್ತು ಪದವಿ ತರಗತಿಗಳಲ್ಲಿ ಅಜ್ಜರಕಾಡು ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ವಿದ್ಯಾರ್ಥಿನಿಯರು ರ್ಯಾಂಕ್ ಮತ್ತು ಚಿನ್ನದ ಪದಕಗಳನ್ನು ಮುಡಿಗೇರಿಸಿದ್ದಾರೆ.
ಎಂಎಸ್ಸಿ ರಸಾಯನಶಾಸ್ತ್ರ ವಿಭಾಗದ ರಮಾ ಪ್ರಥಮ ರ್ಯಾಂಕ್ ಮತ್ತು ಚಿನ್ನದ ಪದಕ ಪಡೆದಿದ್ದಾರೆ. ಎಂಕಾಂ ವಿಭಾಗದಲ್ಲಿ ಪ್ರತೀಕ್ಷಾ ಏಳನೇ ರ್ಯಾಂಕ್, ಪ್ರೀತಿ ಒಂಭತ್ತು ರ್ಯಾಂಕ್, ಅಕ್ಷತಾ ರಾವ್ ಒಂಭತ್ತು ರ್ಯಾಂಕ್, ಅಹನಾ ಒಂಭತ್ತು ರ್ಯಾಂಕ್, ಸುಮಿತ್ರಾ 10ನೆ ರ್ಯಾಂಕ್ ಗಳಿಸಿದ್ದಾರೆ.
ಪದವಿ ತರಗತಿ ಬಿಎ (ಪಿಆರ್ಜೆ) ವಿಭಾಗದ ಆಲ್ಫಾ ಅಫ್ರೀನ್ 5ನೇ ರ್ಯಾಂಕ್ ಗಳಿಸಿದ್ದಾರೆ ಹಾಗೂ ವಾಣಿಜ್ಯ ವಿಭಾಗದ ವಾಣಿಜ್ಯ ಪದವಿಯಲ್ಲಿ ಎಂ. ಪ್ರೀತಿ ಆಚಾರ್ಯ ಫೈನಾನ್ಸಿಯಲ್ ಅಕೌಂಟಿಂಗ್ ಪೇಪರ್ ಗರಿಷ್ಠ 150 ಅಂಕ ಗಳೊಂದಿಗೆ ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ಪಡೆದಿದ್ದಾರೆ.
Next Story