ಮಂಗಳೂರು; ಟಿಪ್ಪರ್ ಢಿಕ್ಕಿ: ಬಾಲಕ ಮೃತ್ಯು

ಮಂಗಳೂರು : ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಬಜಾಲ್ ಕಟ್ಟೆಪುಣಿ ಕೋರ್ದಬ್ಬು ದೈವಸ್ಥಾನದ ಹಿಂಭಾಗ ಬುಧವಾರ ಸಂಜೆ ಸಂಭವಿಸಿದೆ.
ಬಜಾಲ್‌ನ ಹಿದಾಯತುಲ್ಲ ಅವರ ಪುತ್ರ ಮೊಹಮ್ಮದ್ ಜೀಶನ್ (6) ಮೃತಪಟ್ಟ ಬಾಲಕ.
ಈತ ಸಂಜೆ 6 ಗಂಟೆಯ ಸುಮಾರಿಗೆ ದೈವಸ್ಥಾನದ ಹಿಂಭಾಗದ ರಸ್ತೆಯ ಕೆರೆಯ ಬಳಿ ಸೈಕಲ್‌ನಲ್ಲಿ ಆಡುತ್ತಿದ್ದಾಗ ಟಿಪ್ಪರ್ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





