ಉಡುಪಿ : ಎಂಟು ದಿನಗಳ ಬಳಿಕ ಓರ್ವ ಮಹಿಳೆಯಲ್ಲಿ ಕೋವಿಡ್ ಸೋಂಕು ಪತ್ತೆ

ಉಡುಪಿ : ಸತತ ಎಂಟು ದಿನಗಳನ್ನು ಕೋವಿಡ್ ಪ್ರಕರಣಗಳಿಲ್ಲದೇ ಕಳೆದ ಉಡುಪಿ ಜಿಲ್ಲೆಯಲ್ಲಿ ಇಂದು ಮೊದಲ ಪಾಸಿಟಿವ್ ಪ್ರಕರಣವೊಂದು ಪತ್ತೆಯಾಗಿದೆ.
ಕುಂದಾಪುರದ ಮಹಿಳೆಯೊಬ್ಬರು ಇಂದು ಕೋವಿಡ್ ಪರೀಕ್ಷೆ ಯಲ್ಲಿ ಪಾಸಿಟಿವ್ ಬಂದಿದ್ದು, ಈ ಮೂಲಕ ಜಿಲ್ಲೆಯಲ್ಲಿ ಮತ್ತೆ ಒಂದು ಸಕ್ರಿಯ ಪ್ರಕರಣವಿದೆ.
ಕಳೆದ ಎಂಟು ದಿನಗಳಿಂದ ಉಡುಪಿ ಜಿಲ್ಲೆ ಸತತವಾಗಿ ಕೋವಿಡ್-19 ಮುಕ್ತವಾಗಿ ಕಾಣಿಸಿಕೊಂಡಿದೆ. ಎ.12ರ ಮಂಗಳವಾರದಿಂದ ಇಂದಿನವರೆಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಯಾವುದೇ ವ್ಯಕ್ತಿ ಇದ್ದಿರಲಿಲ್ಲ. ಇಂದು ಕೋವಿಡ್ ಪರೀಕ್ಷೆಗೊಳಗಾದ 30 ಮಂದಿಯಲ್ಲಿ ಕುಂದಾಪುರದ ಒಬ್ಬ ಮಹಿಳೆಯಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ಇಂದು ಉಡುಪಿ ತಾಲೂಕಿನ 18, ಕುಂದಾಪುರದ 10 ಹಾಗೂ ಕಾರ್ಕಳ ತಾಲೂಕಿನ ಇಬ್ಬರನ್ನು ಪರೀಕ್ಷೆಗೊಳಪಡಿಸಲಾಗಿತ್ತು.
Next Story