ಕಿರಾಣಿ ಅಂಗಡಿಗೆ ನುಗ್ಗಿ ಕಳವಿಗೆ ಯತ್ನ
ಕಾಪು : ಕಟಪಾಡಿ ಹಳೇ ರಸ್ತೆ ಜಂಕ್ಷನ್‌ನ ಮಹಾದೇವಿ ಟ್ರೇಡರ್ಸ್ ಹೆಸರಿನ ಕಿರಾಣಿ ಅಂಗಡಿಗೆ ಎ.19ರಂದು ರಾತ್ರಿ ನುಗ್ಗಿ ಕಳವಿಗೆ ಯತ್ನಿಸಿರುವ ಘಟನೆ ಎ.19ರಂದು ರಾತ್ರಿ ನಡೆದಿದೆ.
ರಾಜೇಶ್ ಕಾಮತ್ ಎಂಬವರ ಕಿರಾಣಿ ಅಂಗಡಿಗೆ ಓರ್ವ ವ್ಯಕ್ತಿ ಮೇಲ್ಚಾ ವಣಿಯ ಹೆಂಚು ತೆಗೆದು ಒಳಗೆ ಹೋಗಲು ಪ್ರಯತ್ನಿಸುತ್ತಿದ್ದು, ರಾಜೇಶ್ ಕಾಮತ್‌ರನ್ನು ನೋಡಿ ಓಡಿ ಹೋಗಿದ್ದಾನೆ. ವ್ಯಕ್ತಿಯು ಪರಿಚಯದ ಪ್ರವೀಣ್ ಎಂಬುವವನಾಗಿದ್ದು ಈತ ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿ ದೂರಿನಲ್ಲಿ ತಿಳಿಸ ಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story