ಉಡುಪಿ: ಜಿಲ್ಲಾ ‘ಸರ್ವೋತ್ತಮ ಸೇವಾ ಪ್ರಶಸ್ತಿ’ಗೆ 20 ಮಂದಿ ಆಯ್ಕೆ
ಮಣಿಪಾಲದಲ್ಲಿ ಪ್ರಶಸ್ತಿ ವಿತರಣೆ
ಉಡುಪಿ : ಉಡುಪಿ ಜಿಲ್ಲೆಯಲ್ಲಿ ಅತ್ಯುನ್ನತ ಸೇವೆಗೈದ/ಸಾಧನೆ ಮಾಡಿದ ರಾಜ್ಯ ಸರಕಾರಿ ನೌಕರರಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಲು ಸರಕಾರದ ಆದೇಶವಾಗಿದ್ದು, ಅದರಂತೆ ೨೦೨೦-೨೧ ಮತ್ತು ೨೦೨೧-೨೨ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆಯಾದ ೨೦ ಮಂದಿ ಸರಕಾರಿ ನೌಕರರಿಗೆ ಎ.೨೧ರ ಗುರುವಾರ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜರಗುವ ರಾಜ್ಯ ಸರಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.
೨೦೨೦-೨೧ನೇ ಸಾಲಿನಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆಯಲು ಆಯ್ಕೆಯಾದ ಉಡುಪಿ ಜಿಲ್ಲಾ ಸರಕಾರಿ ಅಧಿಕಾರಿ/ಸಿಬ್ಬಂದಿಗಳ ವಿವರ ಹೀಗಿದೆ:
ಪ್ರಶಾಂತ್ ಪಿ.ಕೆ.ಎಂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಸಾಮಾಜಿಕ ಅರಣ್ಯ ವಿಭಾಗ ಮಣಿಪಾಲ. ಬಿ. ವಿ.ಶ್ರೀನಿವಾಸ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಕಾರ್ಕಳ. ಸಿದ್ದಪ್ಪ ಬಿ. ತುಡುಬಿನ್, ಸಹಾಯಕ ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಅಜೆಕಾರು ಹೋಬಳಿ ಕಾರ್ಕಳ ತಾಲೂಕು. ಅಂಜನಾದೇವಿ ಟಿ., ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಬಂದರುಯೋಜನೆ ಗಂಗೊಳ್ಳಿ ಕುಂದಾಪುರ. ಆಶಾದೇವಿ ಕೇಶವ ನಾಯಕ, ನಿಲಯ ಮೇಲ್ವಿಚಾರಕರು, ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಬ್ರಹ್ಮಾವರ.
ಶಂಕರಪ್ಪ ಡಿ.ಎಲ್., ಅರಣ್ಯ ರಕ್ಷಕರು, ವಲಯ ಅರಣ್ಯ ಅಧಿಕಾರಿ ಕಛೇರಿ ಬೈಂದೂರು ವಲಯ. ಯಶೋಧ ಎ.,ಕಿರಿಯ ಮಹಿಳಾ ಆರೋಗ್ಯ ಸಹಾಯಕಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು. ಎಚ್. ಉದಯ ಕುಮಾರ್ ಶೆಟ್ಟಿ, ಹಿರಿಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ, ಜಿಲ್ಲಾ ಸರ್ವೇಕ್ಷಣಾ ಘಟಕ ಉಡುಪಿ. ಜೋಕಿಂ ಮೈಕಲ್ ಎಚ್ ಪಿಂಟೊ, ವಾಣಿಜ್ಯ ತೆರಿಗೆ ಅಧಿಕಾರಿ, ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ, ಕಾರ್ಕಳ. ಕೆ.ರಾಮಚಂದ್ರ ರಾವ್, ತಹಶೀಲ್ದಾರ್ ಗ್ರೇಡ್-೨ (ಪ್ರಭಾರ) ಸಹಾಯಕ ಕಮಿಷನರ್ ಕಛೇರಿ ಕುಂದಾಪುರ.
೨೦೨೧-೨೨ನೇ ಸಾಲಿನ ಪ್ರಶಸ್ತಿ ವಿಜೇತರು:
ಡಾ.ಪ್ರೇಮಾನಂದ ಕೆ., ಅಂಕಿತ ಅಧಿಕಾರಿ, ಎಫ್‌ಎಸ್‌ಎಸ್‌ಎಐ ಉಡುಪಿ. ಡಾ.ನಾಗೇಶ, ವೈದ್ಯಕೀಯ ತಜ್ಞರು, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕುಂದಾಪುರ. ಡಾ.ಅರುಣ್ ಕುಮಾರ್ ಶೆಟ್ಟಿ ಎನ್, ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಪಶು ವೈದ್ಯಕೀಯ ಆಸ್ಪತ್ರೆ, ಬ್ರಹ್ಮಾವರ. ನಳಿನಿಜಿ.ಐ, ಮುಖ್ಯ ಗ್ರಂಥಾಲ ಯಾಧಿಕಾರಿ, ನಗರ ಕೇಂದ್ರ ಗ್ರಂಥಾಲಯ ಉಡುಪಿ. ಪ್ರದೀಪ್ ಕುರುಡೇಕರ್ ಎಸ್, ತಹಶೀಲ್ದಾರರು ಕಾರ್ಕಳ.
ಗಾಯತ್ರಿ ಯು.ವಿ, ಲೆಕ್ಕಅಧೀಕ್ಷಕರು, ನಗರಸಭೆ ಉಡುಪಿ. ಅಶೋಕ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ೮೦ ಬಡಗಬೆಟ್ಟು ಗ್ರಾಪಂ ಉಡುಪಿ. ಪ್ರಶಾಂತ್ ಎನ್.ಎಸ್, ಗ್ರಾಮಕರಣಿಕರು, ಹಿರ್ಗಾನ ಗ್ರಾಮ, ಕಾರ್ಕಳ ತಾಲೂಕು. ಮೆಲ್ವಿನ್ ಜಯಕರ್ ಕರ್ಕಡ, ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು. ಅನಿಲ್ ಎಸ್, ಗ್ರೂಪ್ ಡಿ, ಜಿಲ್ಲಾಧಿಕಾರಿ ಕಛೇರಿ ಮಣಿಪಾಲ.