ಸಿದ್ದರಾಮಯ್ಯ ಯಾವೂರ ದಾಸಯ್ಯ: ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

ಹಾಸನ: ಏ, ,20: ‘ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಮೇಲೆ ಪ್ರಮಾಣ ಮಾಡುವಂತೆ ಹೇಳಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಯಾವೂರ ದಾಸಯ್ಯ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರದ ಹೊರವಲಯದಲ್ಲಿ ಚಿಕ್ಕಮಗಳೂರಿನಿಂದ ಚಾಮರಾಜನಗರಕ್ಕೆ ಹೋಗುವಾಗ ಮಾರ್ಗ ಮಧ್ಯೆ ಹಾಸನ ಕೆಐಡಿಬಿ ವೃತ್ತದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು.
'ಇಡೀ ದೇಶದಲ್ಲಿ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ. ಡಿ.ಜೆ.ಹಳ್ಳಿ ಗಲಾಟೆಯಲ್ಲಿ ಕಾಂಗ್ರೆಸ್ ಮುಖಂಡರ ಪಾತ್ರ ಇತ್ತು. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಯಲು ಕಾಂಗ್ರೆಸ್ ಮುಖಂಡರು ಕಾರಣ. ಈ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದೆ' ಎಂದರು.
'2008 ರಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಜೊತೆ ಒಳೊಪ್ಪಂದ ಮಾಡಿಕೊಂಡು ಬಿಜೆಪಿ ಬಳಿ ಹಣ ಪಡೆದು, ಅಪರೇಷನ್ ಕಮಲ ನಡೆಸಲು ಬೆಂಬಲ ನೀಡಿ, ಆಪರೇಷನ್ ಕಮಲದಿಂದ ಬಂದು ಚುನಾವಣೆ ಎದುರಿಸದವರಿಗೆ ಒಳಗಿಂದೊಳಗೆ ಹಿಂಬದಿಯಲ್ಲಿ ಬೆಂಬಲ ನೀಡಿದರು. ಸಿದ್ದರಾಮಯ್ಯನ ದುರಾಡಳಿತ ಕಾರಣ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡರು. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ದರಾಮಯ್ಯ ಆಡಳಿತ ಕಾರಣ. ಅದನ್ನು ಬಿಟ್ಟು ಬರಿ ಸಂತೊಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದಾರೆ' ಎಂದರು.
ನಾನು ಕೇಳಿರುವ 5 ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರ ಕೊಡಲಿ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯಾವೂರ ದಾಸಯ್ಯ. ಜೆಡಿಎಸ್ ಪಕ್ಷದ ಬಗ್ಗೆ ಪದೆ ಪದೆ ಬಿಜೆಪಿ ಬಿ. ಟೀಂ ಎಂದು ಅಪಪ್ರಚಾರ ಮಾಡಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಯೊಗ್ಯತೆಗೆ 50-60 ಸ್ಥಾನದಲ್ಲಿ ಮಾತ್ರ ಜಯಗಳಿಲು ಮಾತ್ರ ಸಾಧ್ಯ ಎಂದು ಭವಿಷ್ಯ ನುಡಿದರು.
ಎರಡು ರಾಷ್ಟ್ರೀಯ ಪಕ್ಷಗಳು 150 ಸ್ಥಾನ ಗೆಲ್ಲುವುದಾದರೆ ನಮ್ಮ ಬೆಂಬಲ ಯಾರಿಗೂ ಬೇಕಿಲ್ಲ. ಈಗಲೂ ಜೆಡಿಎಸ್ ಪಕ್ಷದ ಸ್ವತಂತ್ರ ಸರ್ಕಾರ ತರಲು ಜೆಡಿಎಸ್ ಕಾರ್ಯಕರ್ತರು ಪಣತೊಟ್ಟಿದ್ದಾರೆ. 2008 ರಲ್ಲಿ ಯಡಿಯೂರಪ್ಪ 9 ದಿನಗಳ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು. 9ನೇ ದಿನಗಳ ನಂತರ ಬಿಜೆಪಿಯವರು ಅಗ್ರಿಮೆಂಟ್ ಪೇಪರ್ ತಂದರು. ನಾನು ಸಹಿ ಹಾಕದ ಕಾರಣ ಸರ್ಕಾರ ಪತನವಾಯಿತು. ನಾನು ಯಾವುದೇ ವಚನ ಭ್ರಷ್ಟ ಕೆಲಸ ಮಾಡಿರುವುದಿಲ್ಲ ಎಂದು ಟಾಂಗ್ ನೀಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನ ತಿಂದ ಮನೆಗೆ ಮೊಸ ಮಾಡಿದ ವ್ಯಕ್ತಿ. ಜೆಡಿಎಸ್ ಕಾರ್ಯಕ್ರರ್ತರ ಶ್ರಮದಿಂದ ಚುನಾವಣೆಯಲ್ಲಿ ಜಯಗಳಿಸಿ ಪಕ್ಷ ಬಿಟ್ಟು ಹೋದರು. ಈಗ ನನ್ನ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಮೊನ್ನೆ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷ ಕಿತ್ತು ಹಾಕಬೇಕು ಎಂದು ಕರೆ ಕೊಟ್ಟಿದ್ದಾರೆ. ಅವರ ಹೃದಯದಲ್ಲಿ ಕಾಂಗ್ರೆಸ್ ಇರುವ ಬಗ್ಗೆ ಭಾವನೆ ಬಗ್ಗೆ ನಿಮಗೆ ತಿಳಿಯುತ್ತದೆ. ಬೆಳಿಗ್ಗೆ ಎದ್ದರೆ ಬಿಜೆಪಿ ಬಿ ಟಿಂ ಎಂದು ಅಪ್ರಚಾರ ಮಾಡುತ್ತಾರೆ. ಹೀಜಾಬ್ ವಿಷಯದಲ್ಲಿ ಕಾಂಗ್ರೆಸ್ ಕೋಮದಾಲ್ಲಿ ಮಲಗಿತ್ತು. ನಾನು ಬಂದು ಮಾತನಾಡಿದ್ದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾಸನ ಕ್ಷೇತ್ರದ ಜೆಡಿಎಸ್ ಮುಖಂಡ ಹೆಚ್.ಪಿ. ಸ್ವರೂಪ್ ಇತರರು ಉಪಸ್ಥಿತರಿದ್ದರು.







