ಬೇಸಿಗೆ ಶಿಬಿರ ಮಕ್ಕಳ ಮನೋವೃದ್ಧಿಗೆ ಪೂರಕ: ನಟಿ ಚಿತ್ರಾಲಿ

ಉಡುಪಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ರಾಷ್ಟ್ರೀಯ ಸ್ವ-ಸಹಾಯ ಸಂಘಗಳ ತರಬೇತಿ ಸಂಸ್ಥೆ ಉಡುಪಿ ಇವರ ಆಶ್ರಯದಲ್ಲಿ ಮಕ್ಕಳಿಗಾಗಿ ಎಂಟು ದಿನಗಳ ಕಾಲ ಹಮ್ಮಿಕೊಂಡ ಉಚಿತ ಬೇಸಿಗೆ ಶಿಬಿರವನ್ನು ಬಾಲ ನಟಿ ಹಾಗೂ ಡ್ರಾಮ ಜೂನಿಯರ್ ಪ್ರಶಸ್ತಿ ವಿಜೇತೆ ಮಂಗಳೂರಿನ ಚಿತ್ರಾಲಿ ತೇಜ್ ಪಾಲ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಬ್ಯಾಂಕ್ ಆಫ್ ಬರೋಡ ಮುಖ್ಯ ಶಾಖೆಯ ಪ್ರಬಂಧಕ ಚರಣ್ ರಾಜ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಅಲೆವೂರು, ಹಾಗೂ ಉಡುಪಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ, ಉಡುಪಿ ರಾಷ್ಟ್ರೀಯ ಸ್ವ-ಸಹಾಯ ಸಂಘಗಳ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಉಲ್ಲಾಸ್ ಮೇಸ್ತ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಿತ್ರಾಲಿ ತೇಜ್‌ಪಾಲ್ ಅವರನ್ನು ಅಭಿನಂದಿಸಲಾಯಿತು.
ಎಂಟು ದಿನದ ತರಬೇತಿಯಲ್ಲಿ ಮಕ್ಕಳಿಗೆ ಕರಕುಶಲತೆ,ಚಿತ್ರಕಲೆ, ಹಾಡು, ನೃತ್ಯ, ನಟನೆ, ಪ್ರಾಚೀನ ಆಟಗಳ ಪರಿಚಯ, ಕುಣಿತ ಭಜನೆ, ಮಣ್ಣಿನ ಕಲಾಕೃತಿಗಳ ರಚನೆ, ಹಳ್ಳಿಯ ಆಟಗಳು, ಅಜ್ಜಿ-ಕತೆಗಳು, ನೈತಿಕ ಮೌಲ್ಯಗಳು, ಚಿತ್ರಕತೆ ರಚನೆ, ಮಾತೃವಂದನಾ ಕಾರ್ಯಕ್ರಮ, ಪಾಲಕರ ಒಡನಾಟದ ಆಟಗಳು, ತಾಯಿಯ ಕೈತುತ್ತು, ಪ್ರತಿದಿನ ಮೌನ ಭೋಜನ, ಪ್ರತಿಭಾ ಪ್ರದರ್ಶನ ನಡೆಯಲಿವೆ.
ಈ ಶಿಬಿರ ಎಂಟು ದಿನಗಳ ಕಾಲ ನಡೆಯಲಿದ್ದು ನುರಿತ ತಜ್ಞರು ಈ ತರಬೇತಿಯನ್ನು ನೀಡಲಿದ್ದಾರೆ. ತರಬೇತಿಯಲ್ಲಿ ಸಂಸ್ಕೃತಿ- ಸಂಸ್ಕಾರ ಏಕಾಗ್ರತೆ ಮೂಡಿಸುವ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಉಲ್ಲಾಸ್ ಮೇಸ್ತ ತಿಳಿಸಿದರು. ಉಪನ್ಯಾಸಕ ರಮೇಶ್ ಕಾರ್ಯಕ್ರಮ ನಿರೂಪಿಸಿದರೆ, ರಂಗತರಬೇತುದಾರ ಚಂದ್ರಹಾಸ್ ಭಂಡಾರಿ ವಂದಿಸಿದರು.
