Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕುರ್ಚಿಗಳನ್ನು ತೆಗೆಯಲು ನಿಮಗೆ...

ಕುರ್ಚಿಗಳನ್ನು ತೆಗೆಯಲು ನಿಮಗೆ ಬುಲ್ಡೋಝರ್‌ ಅಗತ್ಯವಿದೆಯೇ? : ಜಹಾಂಗೀರ್ಪುರಿ ತೆರವು ಕಾರ್ಯಾಚರಣೆಗೆ ಸುಪ್ರೀಂ ತರಾಟೆ

ವಾರ್ತಾಭಾರತಿವಾರ್ತಾಭಾರತಿ21 April 2022 11:43 PM IST
share
ಕುರ್ಚಿಗಳನ್ನು ತೆಗೆಯಲು ನಿಮಗೆ ಬುಲ್ಡೋಝರ್‌ ಅಗತ್ಯವಿದೆಯೇ? : ಜಹಾಂಗೀರ್ಪುರಿ ತೆರವು ಕಾರ್ಯಾಚರಣೆಗೆ ಸುಪ್ರೀಂ ತರಾಟೆ

ಹೊಸದಿಲ್ಲಿ,ಎ.21: ಜಹಾಂಗೀರ್ಪುರಿಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಕುರಿತು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ತನ್ನ ನಿರ್ದೇಶನವನ್ನು ಗುರುವಾರ ಮುಂದಿನ ಆದೇಶದವರೆಗೆ ವಿಸ್ತರಿಸಿದ ಸರ್ವೋಚ್ಚ ನ್ಯಾಯಾಲಯವು, ‘ಅಂಗಡಿಗಳು,ಕುರ್ಚಿಗಳು, ಟೇಬಲ್ ಗಳು ಮತ್ತು ಪೆಟ್ಟಿಗೆಗಳನ್ನು ತೆರವುಗೊಳಿಸಲು ನಿಮಗೆ ಬುಲ್ಡೋಝರ್‌ ಗಳ ಅಗತ್ಯವಿದೆಯೇ ’ ಎಂದು ಉತ್ತರ ದಿಲ್ಲಿ ಮಹಾನಗರ ಪಾಲಿಕೆ (ಎನ್ಡಿಎಂಸಿ)ಯನ್ನು ಪ್ರಶ್ನಿಸಿದೆ. 

ಅನುಮತಿಯಿಲ್ಲದೆ ಸಾರ್ವಜನಿಕ ರಸ್ತೆಗಳು ಮತ್ತು ಫುಟ್ಪಾತ್ ಗಳಲ್ಲಿ ಹಾಕಲಾಗಿರುವ ಅಂಗಡಿಗಳು, ಬೆಂಚುಗಳು, ಪೆಟ್ಟಿಗೆಗಳು, ಏಣಿಗಳು ಇತ್ಯಾದಿಗಳನ್ನು ತೆರವುಗೊಳಿಸಲು ಕಾನೂನಿನ ಅನುಮತಿಯಿದೆ ಎಂದು ಎನ್ಡಿಎಂಸಿ ಪರ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ವಿವರಿಸಿದ ಬಳಿಕ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರ ಪೀಠವು ಈ ಪ್ರಶ್ನೆಯನ್ನು ಮುಂದಿಟ್ಟಿತು.

ಅಂದರೆ ನಿನ್ನೆಯ ತೆರವು ಕಾರ್ಯಾಚರಣೆ ಬೆಂಚುಗಳು, ಪೆಟ್ಟಿಗೆಗಳು ಮತ್ತು ಕುರ್ಚಿಗಳಿಗೆ ಸೀಮಿತವಾಗಿತ್ತು ಅಲ್ಲವೇ ಎಂದು ನ್ಯಾ.ರಾವ್ ಮೆಹ್ತಾರನ್ನು ಪ್ರಶ್ನಿಸಿದರು.

‘ಸಾರ್ವಜನಿಕ ರಸ್ತೆಗಳಲ್ಲಿ,ಫುಟ್ಪಾತ್ ಗಳಲ್ಲಿ ಇರುವ ಎಲ್ಲವೂ... ಇದು ನನಗೆ ನೀಡಿರುವ ಸೂಚನೆಯಾಗಿದೆ ’ ಎಂದು ಮೆಹ್ತಾ ಉತ್ತರಿಸಿದರು.
ಅಂಗಡಿಗಳು, ಬೆಂಚುಗಳು, ಪೆಟ್ಟಿಗೆಗಳು, ಏಣಿಗಳು ಮತ್ತು ಕುರ್ಚಿಗಳಿಗೆ ನಿಮಗೆ ಬುಲ್ಡೋಝರ್‌ ಗಳ ಅಗತ್ಯವಿದೆಯೇ ಎಂದು ನ್ಯಾ. ಗವಾಯಿ ಪ್ರಶ್ನಿಸಿದಾಗ, ಕಟ್ಟಡಗಳಿಗೆ ಬುಲ್ಡೋಜರ್ ಅಗತ್ಯವಾಗುತ್ತದೆ ಎಂದು ಮೆಹ್ತಾ ಒಪ್ಪಿಕೊಂಡರು.

ಬುಧವಾರದ ತೆರವು ಕಾರ್ಯಾಚರಣೆಯಿಂದ ಸಂತ್ರಸ್ತಗೊಂಡವರಿಗೆ, ವಿಶೇಷವಾಗಿ ಯಾವುದೇ ಪೂರ್ವಭಾವಿ ನೋಟಿಸ್ ನೀಡದೇ ತಮ್ಮ ಆಸ್ತಿಗಳನ್ನು ಧ್ವಂಸಗೊಳಿಸಲಾಗಿದೆಯೇ ಎಂಬ ಬಗ್ಗೆ ಅಫಿಡವಿಟ್ ಗಳನ್ನು ಸಲ್ಲಿಸಲು ನ್ಯಾಯಾಲಯವು ಅನುಮತಿ ನೀಡಿತು. ತನ್ನ ಉತ್ತರವನ್ನು ಸಲ್ಲಿಸುವುದಾಗಿ ಎನ್ಡಿಎಂಸಿ ತಿಳಿಸಿದ ಬಳಿಕ ಎರಡು ವಾರಗಳ ಬಳಿಕ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯವು ತಿಳಿಸಿತು. 

ತಡೆಯಾಜ್ಞೆಯನ್ನು ಮುಂದುವರಿಸುವ ಬಗ್ಗೆ ಮೆಹ್ತಾ ಸೌಮ್ಯವಾಗಿ ಆಕ್ಷೇಪಿಸಿದಾಗ ಪ್ರತಿಕ್ರಿಯಿಸಿದ ನ್ಯಾ.ರಾವ್, ಕಟ್ಟಡಗಳನ್ನು ಧ್ವಂಸಗೊಳಿಸಲು ನೀವು ಬಯಸಿದ್ದೀರಾ? ಅದರ ಬಳಿಕ ಅಲ್ಲಿ ಏನು ಉಳಿಯುತ್ತದೆ ಎಂದು ಪ್ರಶ್ನಿಸಿದರು.
ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ತನ್ನ ಆದೇಶದ ಬಳಿಕವೂ ನೆಲಸಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದರ ಬಗ್ಗೆ ಕುರುಡುತನ ಪ್ರದರ್ಶಿಸುವ ಉದ್ದೇಶ ತನಗಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯವು, ‘ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಮೇಯರ್ ಗೆ ತಿಳಿಸಿದ ಬಳಿಕವೂ ಕಾರ್ಯಾಚರಣೆಯನ್ನು ಮುಂದುವರಿಸಿದ್ದನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಆ ವಿಷಯವನ್ನು ನಾವು ನಂತರ ಕೈಗೆತ್ತಿಕೊಳ್ಳುತ್ತೇವೆ ’ಎಂದು ಮೆಹ್ತಾರಿಗೆ ತಿಳಿಸಿತು.
ಇದಕ್ಕೂ ಮುನ್ನ ಸಿಪಿಎಂ ನಾಯಕಿ ಬೃಂದಾ ಕಾರಾಟ್ ಪರ ಹಿರಿಯ ನ್ಯಾಯವಾದಿ ಪಿ.ವಿ.ಸುರೇಂದ್ರನಾಥ ಮತ್ತು ವಕೀಲ ಸುಭಾಷಚಂದ್ರನ್ ಅವರು, ಸರ್ವೋಚ್ಚ ನ್ಯಾಯಾಲಯವು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶಿಸಿದ ಬಳಿಕವೂ ಧ್ವಂಸ ಕಾರ್ಯಾಚರಣೆ ಮುಂದುವರಿದಿತ್ತು ಎಂದು ತಿಳಿಸಿದರು.
 ಸರ್ವೋಚ್ಚ ನ್ಯಾಯಾಲಯವು ಬುಧವಾರ ಬೆಳಿಗ್ಗೆ 10:45ಕ್ಕೆ ಆದೇಶವನ್ನು ಹೊರಡಿಸಿತ್ತು. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗುವುದು ಎಂದು ಖುದ್ದು ಮೇಯರ್ ಅವರೇ ಬೆಳಿಗ್ಗೆ 11 ಗಂಟೆಗೆ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ ಅವರು ಅಪರಾಹ್ನ 12:45ಕ್ಕೆ ಆದೇಶವನ್ನು ಪಾಲಿಸಿದ್ದರು ಎಂದು ಹಿರಿಯ ನ್ಯಾಯವಾದಿ ದುಷ್ಯಂತ ದವೆ ಅವರು ಪೀಠದ ಗಮನಕ್ಕೆ ತಂದರು.
 ಜಹಾಂಗೀರ್ಪುರ ನಿವಾಸಿ ಗಣೇಶ ಗುಪ್ತಾ ಪರ ಹಿರಿಯ ವಕೀಲ ಸಂಜಯ ಹೆಗ್ಡೆ ಅವರು, ಯಾವುದೇ ಪೂರ್ವಭಾವಿ ನೋಟಿಸ್ ನೀಡದೆ ತನ್ನ ಕಕ್ಷಿದಾರರ ಜ್ಯೂಸ್ ಅಂಗಡಿಯನ್ನು ಧ್ವಂಸಗೊಳಿಸಲಾಗಿದೆ ಎಂದು ತಿಳಿಸಿದರಲ್ಲದೆ, ಇದಕ್ಕಾಗಿ ಪರಿಹಾರವನ್ನು ಕೋರಿದರು.
‘ಯಾವುದೇ ಪೂರ್ವಭಾವಿ ನೋಟಿಸ್ ನೀಡದೆ ಆಸ್ತಿಗಳನ್ನು ಧ್ವಂಸಗೊಳಿಸಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಬದುಕುವ ಹಕ್ಕು ಜೀವನೋಪಾಯ ಮತ್ತು ವಸತಿಯ ಹಕ್ಕನ್ನೂ ಒಳಗೊಂಡಿದೆ. ಇವರೆಲ್ಲ ಬಡವರಾಗಿದ್ದಾರೆ. ದಿಲ್ಲಿಯಲ್ಲಿನ ಅತಿಕ್ರಮಣಗಳ ಬಗ್ಗೆ ನಿಮಗೆ ಕಾಳಜಿಯಿದ್ದರೆ ಸೈನಿಕ್ ಫಾರ್ಮ್ಸ್ ಮತ್ತು ಗಾಲ್ಫ್ ಲಿಂಕ್ಸ್ ಗೆ ಬನ್ನಿ. ಪ್ರತಿ ಎರಡನೇ ಕಟ್ಟಡವು ಅನಧಿಕೃತವಾಗಿರುವ ದಕ್ಷಿಣ ದಿಲ್ಲಿಗೆ ಬನ್ನಿ ಮತ್ತು ಅವುಗಳನ್ನು ನೆಲಸಮಗೊಳಿಸಿ. ದಿಲ್ಲಿಯಲ್ಲಿ 731 ಅನಧಿಕೃತ ಕಾಲನಿಗಳಿವೆ, ಹೀಗಿರುವಾಗ ಈ ನಿರ್ದಿಷ್ಟ ಪ್ರದೇಶವನ್ನೇಕೆ ಗುರಿಯಾಗಿಸಿಕೊಳ್ಳಲಾಗಿದೆ? ಬುಲ್ಡೋಜರ್ ನಮ್ಮ ಸರಕಾರಿ ನೀತಿಯ ಭಾಗವಾಗಿದೆಯೇ’ ಎಂದು ದವೆ ವಾದಿಸಿದರು.
ಬುಲ್ಡೋಜರ್ ಭೀತಿಯನ್ನು ಹುಟ್ಟಿಸಲು ಇದೆಯೇ ಅಥವಾ ಕಾನೂನಿನ ಆಡಳಿತವನ್ನು ಬದಿಗೊತ್ತುವ ವಿಧಾನವೇ? ಮುಸ್ಲಿಮರ ಆಸ್ತಿಗಳನ್ನು ಗುರುತಿಸಿ ನೆಲಸಮಗೊಳಿಸಲಾಗುತ್ತಿದೆ. ಯಾರೋ ಅಪರಾಧದ ಆರೋಪಿಯಾಗಿದ್ದರೆ ಅವರ ಮನೆಯನ್ನು ಧ್ವಂಸಗೊಳಿಸಲಾಗುತ್ತಿದೆ. ಇದು ಕಾನೂನಿಗೆ ಅತಿರಿಕ್ತವಾದ ದಂಡನಾ ಕ್ರಮದಂತಿದೆ ಎಂದು ಹಿರಿಯ ವಕೀಲ ಕಪಿಲ ಸಿಬಲ್ ಹೇಳಿದರು.
ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ ಎನ್ನುವುದು ತಪ್ಪು ಎಂದು ಸಮರ್ಥಿಸಿಕೊಂಡ ಮೆಹ್ತಾ, ಇತ್ತೀಚಿಗೆ ಮಧ್ಯಪ್ರದೇಶದ ಖರಗೋನ್ ನಲ್ಲಿ ನಡೆಸಲಾದ ತೆರವು ಕಾರ್ಯಾಚರಣೆಯಲ್ಲಿ ಸಂತ್ರಸ್ತರ ಪೈಕಿ 88 ಜನರು ಹಿಂದುಗಳಾಗಿದ್ದು,26 ಜನರು ಮುಸ್ಲಿಮರಾಗಿದ್ದಾರೆ ಎಂದು ಹೇಳಿದರು.
ತೆರವು ಕಾರ್ಯಾಚರಣೆಯಿಂದ ಸಂತ್ರಸ್ತರಾದವರ ಬದಲು ಜಮೀಯತ್ ಉಲಮಾ-ಇ-ಹಿಂದ ನಂತಹ ಸಂಘಟನೆಗಳು ಏಕೆ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸುತ್ತಿವೆ ಎಂದು ಅವರು ಪ್ರಶ್ನಿಸಿದರು.
ಇಂತಹ ಅರ್ಜಿಗಳನ್ನು ಅಂಗೀಕರಿಸುವಾಗ ನ್ಯಾಯಾಲಯವು ಎಚ್ಚರಿಕೆ ವಹಿಸಬೇಕು ಎಂದು ಮೆಹ್ತಾ ಹೇಳಿದಾಗ, ‘ಭರವಸೆಯಿಡಿ, ಎಲ್ಲಿಗೆ ನಿಲ್ಲಿಸಬೇಕು ಎನ್ನುವುದು ನಮಗೆ ಗೊತ್ತಿದೆ ’ ಎಂದು ನ್ಯಾ.ರಾವ್ ಪ್ರತಿಕ್ರಿಯಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X