ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಶಿವಾನಿ ಶೆಟ್ಟಿ ಹೆಬ್ರಿ ಆಯ್ಕೆ

ಮಂಗಳೂರು : ಅಂತಾರಾಷ್ಟ್ರೀಯ ಯೂತ್ ಯೋಗಿಕ್ ಸೈನ್ಸ್ ಫೆಡರೇಶನ್ ಮತ್ತು ವರ್ಷಿಣಿ ಯೋಗ ಎಜುಕೇಶನ್ ಸಂಸ್ಥೆಗಳು, ಗವರ್ನಮೆಂಟ್ ಆಫ್ ಆಯುಷ್ ಆ್ಯಂಡ್ ಯೂತ್ ಸ್ಪೋರ್ಟ್ಸ್ ಸರ್ವಿಸಸ್ ಸಹಭಾಗಿತ್ವದಲ್ಲಿ ಇತ್ತೀಚೆಗೆ ಗೋವಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಎಂಟನೇ ಯೋಗಾಸನ ಸ್ಪರ್ಧೆಯಲ್ಲಿ (8 ರಿಂದ 10 ವರ್ಷದೊಳಗಿನ ವಯೋಮಾನ) ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನ 5ನೇ ತರಗತಿಯ ವಿದ್ಯಾರ್ಥಿನಿ ಶಿವಾನಿ ಶೆಟ್ಟಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಮೇ ತಿಂಗಳ ಕೊನೆಯ ವಾರ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ (10 ವರ್ಷದೊಳಗಿನ ವಯೋಮಿತಿ) ಈಕೆ ಭಾಗವಹಿಸಲಿದ್ದಾರೆ.
ಈಕೆ ಬೇಳಂಜೆ ಶಿವಾನಂದ ಶೆಟ್ಟಿ ಹಾಗೂ ಹೆಬ್ರಿ ಸುಜಾತಾ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದು, ಯೋಗ ಗುರು ಕೆ. ನರೇಂದ್ರ ಕಾಮತ್ ಕಾರ್ಕಳ ಇವರ ಶಿಷ್ಯೆ.
ಈ ಹಿಂದೆ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಥಮ ಹಾಗೂ ಇತ್ತೀಚೆಗೆ ಮಲೇಷಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗಿದ ಯೋಗಾಸನ ಸ್ಪರ್ಧೆಯಲ್ಲಿ ತೃತೀಯ ಸ್ಥಾನಿಯಾಗಿದ್ದರು.
Next Story