ಚಡಗ ಕಾದಂಬರಿ ಪ್ರಶಸ್ತಿಗೆ ಕಾದಂಬರಿಗಳ ಆಹ್ವಾನ
ಕೋಟೇಶ್ವರ : ಕೋಟೇಶ್ವರದ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಗಳ ಆಶ್ರಯದಲ್ಲಿ, ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ದಿ. ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ನೀಡುವ ಹನ್ನೆರಡನೆಯ ವರ್ಷದ ಕಾದಂಬರಿ ಪ್ರಶಸ್ತಿಗೆ 2021ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾದ ಕಾದಂಬರಿಗಳನ್ನು ಲೇಖಕ/ ಪ್ರಕಾಶಕರಿಂದ ಆಹ್ವಾನಿಸಲಾಗಿದೆ.
ಆಸಕ್ತರು ತಮ್ಮ ಕೃತಿಯ ಮೂರು ಪ್ರತಿಗಳನ್ನು ಸ್ಪರ್ಧೆಯ ಸಂಚಾಲಕರಾದ ಪ್ರೊ.ಉಪೇಂದ್ರ ಸೋಮಯಾಜಿ, ಶ್ರೀಚಿತ್ರಪಾಡಿ, ಅಂಚೆ: ಸಾಲಿಗ್ರಾಮ, ಉಡುಪಿ ಜಿಲ್ಲೆ - ೫೭೫೨೨೫ (ಮೊ:೯೭೪೦೮೪೨೭೨೨) ಇವರಿಗೆ ಆ.೩೦ರೊಳಗೆ ತಲುಪುವಂತೆ ಕಳುಸಿಕೊಡಬಹುದು. ನವೆಂಬರ್ ತಿಂಗಳಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪ್ರದಾನಗೊಳ್ಳಲಿರುವ ಈ ಪ್ರಶಸ್ತಿಯು, ಪ್ರಶಸ್ತಿ ಪತ್ರ, ಸ್ಮರಣಿಕೆ, ಹಾಗೂ ಹತ್ತು ಸಾವಿರ ರೂ.ನಗದನ್ನು ಒಳಗೊಂಡಿರುತ್ತದೆ.
ಕನ್ನಡದ ಪ್ರಮುಖ ಲೇಖಕರಾದ ನಾ.ಮೊಗಸಾಲೆ, ಬೊಳುವಾರು, ಕೆ. ಸತ್ಯನಾರಾಯಣ, ವಸುಮತಿ ಉಡುಪ, ರೇಖಾ ಕಾಖಂಡಕಿ, ಗೋಪಾಲಕೃಷ್ಣ ಪೈ, ಎಂ.ಆರ್.ದತ್ತಾತ್ರಿ, ಗುರುಪ್ರಸಾದ್ ಕಾಗಿನೆಲೆ, ವೈ.ಎಸ್. ಹರಗಿ, ಶ್ರೀಧರ ಬನವಾಸಿ, ಆಶಾ ರಘು, ಸಹನಾ ಜಯಕುಮಾರ್, ವಸುಧೇಂದ್ರ, ದವನ ಸೊರಬ ಇವರ ಕಾದಂಬರಿಗಳಿಗೆ ಹಿಂದಿನ ವರ್ಷಗಳಲ್ಲಿ ಈ ಪ್ರಶಸ್ತಿ ಸಿಕ್ಕ್ತಿದೆ ಎಂದು ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ. ಭಾಸ್ಕರಾಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.