ಎ.23: ಬ್ಯಾಂಕಿಂಗ್ ವಿಭಾಗ, ಇ-ಸ್ಟಾಂಪಿಂಗ್ ಸೇವೆ ಉದ್ಘಾಟನೆ
ಮಂಗಳೂರು : ದ.ಕ.ಜಿಲ್ಲೆಯ ಕೇಂದ್ರ ಸಹಕಾರ ಸಗಟು ಮಾರಾಟ ಸಂಘದ ಬ್ಯಾಂಕಿಂಗ್ ವಿಭಾಗ ಹಾಗೂ ಇ-ಸ್ಟಾಂಪಿಂಗ್ ಸೇವೆಯ ಉದ್ಘಾಟನಾ ಕಾರ್ಯಕ್ರಮವು ಎ.೨೩ರ ಬೆಳಗ್ಗೆ ೧೦:೩೦ಕ್ಕೆ ನಗರದ ಜನತಾ ಬಜಾರ್‌ನಲ್ಲಿ ನಡೆಯಲಿದೆ.
ಸಂಸದ ನಳಿನ್ ಕುಮಾರ್‌ಕಟೀಲ್ ಬ್ಯಾಂಕಿಂಗ್ ವಿಭಾಗ, ಶಾಸಕರಾದ ವೇದವ್ಯಾಸ್ ಕಾಮತ್ ಭದ್ರತಾ ಕೊಠಡಿ, ಸಂಜೀವ ಮಠಂದೂರು ಇ-ಸ್ಟಾಂಪಿಗ್ , ಮೇಯರ್ ಪ್ರೇಮಾನಂದ ಶೆಟ್ಟಿ ಭದ್ರತಾಕೋಶ, ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಕಂಪ್ಯೂಟರ್ ವಿಭಾಗ ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story