ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರು ಪಾಲು

ಸಾಂದರ್ಭಿಕ ಚಿತ್ರ
ತುಮಕೂರು, ಎ. 22: ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ತಿಮ್ಮಲಾಪುರದಲ್ಲಿ ನಡೆದಿದೆ.
ಮೃತ ಬಾಲಕರನ್ನು ತಿಮ್ಮಲಾಪುರ ಗ್ರಾಮದ ಭರತ್ (12), ಆನಂದ್ (10) ಹಾಗೂ ವಿಶ್ವಾಸ್ (11) ಎಂದು ಗುರುತಿಸಲಾಗಿದೆ.
ಮಧ್ಯಾಹ್ನ ತಿಮ್ಮಲಾಪುರ ಕೆರೆಯಲ್ಲಿ ಈಜಾಡಲು ತೆರೆಳಿದ್ದ ಈ ಮೂವರು ಸ್ನೇಹಿತರು ಈಜಾಡುವ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕೆರೆಯ ದಡದಲ್ಲಿ ಬಟ್ಟೆ, ಚಪ್ಪಲಿ ನೋಡಿದ ಗ್ರಾಮದ ಯುವಕರು ಕೆರೆಯಲ್ಲಿ ಕೆರೆಯಲ್ಲಿ ಯಾರೋ ಮುಳುಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಿ ಕೂಡಲೇ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಠಾಣೆ ಪೊಲೀಸರು ಕೆರೆಯಲ್ಲಿ ಮುಳುಗಿದ್ದ ಶವಗಳನ್ನು ಹೊರ ತೆಗೆದು ಮೃತದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಬಾಲಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ತುಮಕೂರು ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ





