ಬುಚಾದಲ್ಲಿ 50 ಕಾನೂನುಬಾಹಿರ ಹತ್ಯೆ ದಾಖಲೀಕರಣ: ವಿಶ್ವಸಂಸ್ಥೆ

ಜಿನೆವಾ, ಎ.22: ಉಕ್ರೇನ್‌ನ ರಾಜಧಾನಿ ಕೀವ್‌ನ ಹೊರವಲಯದಲ್ಲಿರುವ ಬುಚಾದಲ್ಲಿ ವಿಶ್ವಸಂಸ್ಥೆಯ ನಿಯೋಗವು ಕಾನೂನುಬಾಹಿರ ಹತ್ಯೆ ಪ್ರಕರಣ ಸಹಿತ 50 ನಾಗರಿಕರ ಹತ್ಯೆಯನ್ನು ದಾಖಲಿಸಿಕೊಂಡಿದೆ ಎಂದು ವಿಶ್ವಸಂಸ್ಥೆ ಶುಕ್ರವಾರ ಹೇಳಿದೆ.
ಎಪ್ರಿಲ್ 9ರಂದು ಬುಚಾಕ್ಕೆ ಭೇಟಿ ನೀಡಿದಾಗ ಅಲ್ಲಿ ಸುಮಾರು 50 ನಾಗರಿಕರ ಕಾನೂನುಬಾಹಿರ ಹತ್ಯೆ ಪ್ರಕರಣವನ್ನು ವಿಶ್ವಸಂಸ್ಥೆಯ ಮಾನವ ಹಕ್ಕು ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಮಾನವಹಕ್ಕುಗಳ ಕಚೇರಿಯ ಹೈಕಮಿಷನರ್ ವಕ್ತಾರೆ ರವಿನಾ ಶಾಂದಾಸಾನಿ ಹೇಳಿದ್ದಾರೆ.
Next Story





