ಡಿವೈಎಸ್ಪಿ, ಇನ್ಸ್ಪೆಕ್ಟರ್ ಗಳ ವರ್ಗಾವಣೆ

ಡಿಜಿ-ಐಜಿಪಿ ಪ್ರವೀಣ್ ಸೂದ್
ಬೆಂಗಳೂರು, ಎ.23: ರಾಜ್ಯ ಪೊಲೀಸ್ ಇಲಾಖೆಯ ಇಬ್ಬರು ಡಿವೈಎಸ್ಪಿ(ಸಿವಿಲ್) ಹಾಗೂ 179 ಇನ್ಸ್ಪೆಕ್ಟರ್(ಸಿವಿಲ್)ಗಳನ್ನು ವರ್ಗಾವಣೆಗೊಳಿಸಿ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಡಿಜಿ-ಐಜಿಪಿ ಪ್ರವೀಣ್ ಸೂದ್ ವರ್ಗಾವಣೆ ಆದೇಶ ಪ್ರಕಟಿಸಿದ್ದಾರೆ.
ಇಲ್ಲಿನ ಕಾರ್ಕಳ ಎಎನ್ಎಫ್ ಡಿವೈಎಸ್ಪಿ ಟಿ.ಆರ್.ಜೈಶಂಕರ್ ಅವರನ್ನು ಮುಳಬಾಗಿಲು ಉಪವಿಭಾಗದ ಡಿವೈಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಅದೇ ರೀತಿ, ಬಾಗಲಕೋಟೆ ಉಪವಿಭಾಗ ಡಿವೈಎಸ್ಪಿ ಆಗಿ ಪ್ರಶಾಂತ್ ಜಿ.ಮುನ್ನೋಳ್ಳಿ ಅವರನ್ನು ವರ್ಗಾಯಿಸಲಾಗಿದೆ.
Next Story





