ದೇಶದಲ್ಲಿ ಎರಡೇ ರಾಜಕೀಯ ಪಕ್ಷಗಳಿರಲಿ: ವಿಜಯಪುರದಿಂದ ದೆಹಲಿಗೆ ಪಾದಯಾತ್ರೆ ನಡೆಸಿದ ವ್ಯಕ್ತಿ, ಕೇಂದ್ರಕ್ಕೆ ಮನವಿ

ನವದೆಹಲಿ: ದೇಶದಲ್ಲಿ ಪ್ರಮುಖ ಎರಡು ರಾಜಕೀಯ ಪಕ್ಷಗಳು ಮಾತ್ರ ಅಸ್ತಿತ್ವದಲ್ಲಿ ಇರಲಿ. ಈ ನಿಟ್ಟಿನಲ್ಲಿ ಕಾನೂನು ರಚಿಸಬೇಕು ಎಂದು ವಿಜಯಪುರ ಜಿಲ್ಲೆಯ ವ್ಯಕ್ತಿಯೊಬ್ಬರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
2 ಮುಖ್ಯ ಧ್ಯೇಯಗಳನ್ನಿಟ್ಟುಕೊಂಡು ಕಳೆದ ನಲವತ್ತು ದಿನಗಳಲ್ಲಿ 1600ಕಿ.ಮೀ ಪಾದಯಾತ್ರೆ ನಡೆಸಿ ದೆಹಲಿ ತಲುಪಿರುವ ವಿಜಯಪುರ ಜಿಲ್ಲೆಯ ಬಾಪೂರಾಯ ಕೂಳಪ್ಪ ಲೋಣಿ, ದೆಹಲಿಯಲ್ಲಿ ಕೇಂದ್ರ ಮಂತ್ರಿಗಳನ್ನು ಭೇಟಿಯಾಗಿ ಶುಕ್ರವಾರ ಈ ಕುರಿತು ಮನವಿ ಸಲ್ಲಿಸಿದ್ದಾರೆ.
ದೇಶದಲ್ಲಿ ಎರಡೇ ರಾಜಕೀಯ ಪಕ್ಷಗಳು ಬೇಕು, ಒಟ್ಟು ಮತದಾನದಲ್ಲಿ ಶೇ 50ಗಿಂತಲೂ ಹೆಚ್ಚು ಮತ ಪಡೆದ ಅಭ್ಯರ್ಥಿ ಮಾತ್ರ ವಿಜೇತರು ಎಂದು ಘೋಷಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಕುರಿತಂತೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಬಾಪುರಾಯರನ್ನು ಇಂದು ಭೇಟಿ ಮಾಡಿ ಅವರ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಿ ಪ್ರಧಾನಿಗಳ ಹಾಗೂ ರಾಷ್ಟ್ರಪತಿಗಳ ಭೇಟಿ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
Next Story





