ಬಿಎಂಶ್ರೀ ಪ್ರತಿಷ್ಠಾನದ ಪ್ರಶಸ್ತಿ ಪ್ರಕಟ
ಬೆಂಗಳೂರು, ಎ.23: ಬಿಎಂಶ್ರೀ ಪ್ರತಿಷ್ಠಾನದ 2022ನೇ ಸಾಲಿನ ‘ಡಾ.ವಿಜಯಾ ಸುಬ್ಬರಾಜ್ ಗಣ್ಯಲೇಖಕಿ’ ಪ್ರಶಸ್ತಿಗೆ ವಿಮರ್ಶಕಿ ಮತ್ತು ಸಂಶೋಧಕಿ ಡಾ.ಶಾಂತಾ ಇಮ್ರಾಪುರ ಹಾಗೂ ‘ಸೂ.ವೆಂ.ಆರಗ ವಿಮರ್ಶಾ ಪ್ರಶಸ್ತಿ’ಗೆ ವಿಮರ್ಶಕ ಕೆ.ಸತ್ಯನಾರಾಯಣ ಅವರ ‘ಅವರವರ ಭಾವಕ್ಕೆ ಓದುಗರ ಭಕುತಿಗೆ’ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು ರೂ.10 ಸಾವಿರ ನಗದು, ಸ್ಮರಣಿಕೆಯನ್ನು ಒಳಗೊಂಡಿದೆ.
ಪ್ರಶಸ್ತಿಗಳನ್ನು ಮೇ ತಿಂಗಳ ಮೊದಲ ವಾರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





